ಮಕ್ಕಳ ಆರೋಗ್ಯ ಪದೇ ಪದೇ ಹದಗೆಡುತ್ತಾ? ಹಾಗಿದ್ರೆ ಈ ರೀತಿ ಆರೈಕೆ ಮಾಡಿ! – Kannada News | How Seasonal Shifts Affect Children: Cold, Flu, and Allergy Guide
ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ಆಗುತ್ತಿರುವ ನಿರಂತರ ಬದಲಾವಣೆಗಳು ಮಕ್ಕಳ ಆರೋಗ್ಯದ (Kids’ Health) ಮೇಲೆ ನೇರ ಪರಿಣಾಮ ಬೀರುತ್ತಿವೆ. ಹೆಚ್ಚು ಬಿಸಿಲು, ಸಂಜೆಯ ಸಮಯ ಬೀಸುವ ತಣ್ಣನೆಯ ಗಾಳಿ ಹಾಗೂ ತಾಪಮಾನದಲ್ಲಿ ಆಗುವ ಏರುಪೇರು ಮಕ್ಕಳಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಿರಿಯರಿಗಿಂತ ಮಕ್ಕಳ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ, ಇಂತಹ ಬದಲಾವಣೆಗಳಿಗೆ ಅವರು ಬೇಗ ತುತ್ತಾಗುತ್ತಾರೆ. ಹಾಗಾದರೆ ಮಕ್ಕಳಲ್ಲಿ ಕಂಡುಬರುವ ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು, ಈ ಸಮಯದಲ್ಲಿ ಅವರ ಆರೈಕೆ ಹೇಗೆ ಮಾಡಬೇಕು…