ಕ್ಲೋಡ್ನ ಈ ಎಐ ಮಾಡಲ್ಗೆ ಬೆಚ್ಚಿಬಿದ್ದ ಬ್ಯಾಂಕುಗಳು; ಉನ್ನತ ಮಟ್ಟದ ಸಭೆ ಕರೆದ ನಿರ್ಮಲಾ ಸೀತಾರಾಮನ್ – Kannada News | Claude Mythos AI: India’s Banks Face Unprecedented Cybersecurity Challenge from New Model
ನಿರ್ಮಲಾ ಸೀತಾರಾಮನ್ ಸಭೆಯ ಎಐ ಚಿತ್ರImage Credit source: AI/Mediaforge/TV9 ನವದೆಹಲಿ, ಮೇ 6: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನಗಳು ಜಗತ್ತನ್ನು ಬದಲಾಯಿಸುತ್ತಿರುವ ಬೆನ್ನಲ್ಲೇ, ಭಾರತದ ಬ್ಯಾಂಕಿಂಗ್ ಮತ್ತು ಹಣಕಾಸು ವಲಯಕ್ಕೆ ಹೊಸದೊಂದು ಆತಂಕ ಶುರುವಾಗಿದೆ. ಅತ್ಯಂತ ಶಕ್ತಿಶಾಲಿ ಮತ್ತು ಅಪಾಯಕಾರಿ ಎನ್ನಲಾದ ‘ಕ್ಲೋಡ್ ಮಿಥೋಸ್’ (Claude Mythos) ಎಂಬ ಹೊಸ ಎಐ ಮಾಡಲ್ನಿಂದ ಎದುರಾಗಬಹುದಾದ ಸೈಬರ್ ಸೆಕ್ಯೂರಿಟಿ ಅಪಾಯಗಳ ಕುರಿತು ಚರ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಮಹತ್ವದ ಉನ್ನತ…