Headlines

nagaraj11081993

Tamil Nadu Election Result: ತಮಿಳುನಾಡಲ್ಲಿ ದಳಪತಿ ಕೀರ್ತಿ ಪತಾಕೆ, ಕಾಂಗ್ರೆಸ್​​​ಗೆ ಬಿಗ್ ಆಫರ್ – Kannada News | Tamil Nadu Assembly Election Result: TVK Invites Congress For Alliance In Tamil Nadu As Party Falls Short Of Majority

ಚೆನ್ನೈ, (ಮೇ 04): ತಮಿಳುನಾಡು  ರಾಜಕೀಯದಲ್ಲಿ (Tamilnadu Politics) ದಳಪತಿ ಸಂಚಲನ ಮೂಡಿಸಿದ್ದಾರೆ. ದ್ರಾವಿಡ ಪಕ್ಷಗಳ ದಶಕಗಳ ಪ್ರಾಬಲ್ಯವನ್ನು ಮುರಿದ ದಳಪತಿ ವಿಜಯ್ (Vijay) ನೇತೃತ್ವದ ತಮಿಳಗಾ ವೆಟ್ರಿ ಕಲಗಂ (ಟಿವಿಕೆ) ತನ್ನ ಮೊದಲ ಚುನಾವಣೆಯಲ್ಲಿ (Election) ಭರ್ಜರಿ ಸಾಧನೆ ಮಾಡಿದೆ. ಇದರೊಂದಗೆ ತಮಿಳುನಾಡಿನಲ್ಲಿ ದಶಕಗಳಿಂದ ನಡೆಯುತ್ತಿರುವ ದ್ರಾವಿಡ ರಾಜಕೀಯದ ಲೆಕ್ಕಾಚಾರವನ್ನೇ ವಿಜಯ್ ಉಲ್ಟಾ ಮಾಡಿದ್ದಾರೆ. ಇನ್ನು ಟಿವಿಕೆ ಗಮನಾರ್ಹ ಸಾಧನೆ ಬಗ್ಗೆ ವಿಜಯ್ ತಂದೆ ಎಸ್​.ಎ.ಚಂದ್ರಶೇಖರ್ ಫುಲ್ ಖುಷ್ ಆಗಿದ್ದು, ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳುವಂತೆ…

Read More

ಚುನಾವಣಾ ವ್ಯವಸ್ಥೆಯಲ್ಲಿ ‘SIR’ ಮಾಸ್ಟರ್ ಸ್ಟ್ರೋಕ್: ನಕಲಿ ಮತಗಳಿಗೆ ಬ್ರೇಕ್, ನೈಜ ಜನಾದೇಶಕ್ಕೆ ದಾರಿ – Kannada News | ECI’s SIR: Masterstroke Against Fake Votes, Ensuring India’s True Mandate

ನವದೆಹಲಿ, ಮೇ 04: ಭಾರತೀಯ ಚುನಾವಣಾ ಆಯೋಗವು ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಜಾರಿಗೊಳಿಸಿದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(SIR) ಕೇವಲ ಆಡಳಿತಾತ್ಮಕ ಬದಲಾವಣೆಯಲ್ಲ, ಅದು ರಾಜಕೀಯ ಸಮೀಕರಣಗಳನ್ನೇ ಬದಲಿಸಬಲ್ಲ ಶಕ್ತಿಯಾಗಿ ಹೊರಹೊಮ್ಮಿದೆ. ಈ ಪ್ರಕ್ರಿಯೆಯು ಕೇವಲ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶ ಹೊಂದಿದ್ದರೂ, ಇದು ರಾಜಕೀಯವಾಗಿ ಭಿನ್ನ ರಾಜ್ಯಗಳಲ್ಲಿ ಭಿನ್ನ ರೀತಿಯ ಪ್ರಭಾವ ಬೀರಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ತಮಿಳುನಾಡು: ಬಿಜೆಪಿ ಅಧಿಕಾರ ಹಿಡಿಯದಿದ್ದರೂ ಪ್ರಭಾವ ಹೆಚ್ಚಿಸಿದ್ದೇಗೆ? ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ…

Read More

ರಾಜಕೀಯಕ್ಕೆ ಎಂಟ್ರಿ ಕೊಡಲು ಸಿನಿಮಾ ರಂಗವನ್ನೇ ವೇದಿಕೆ ಮಾಡಿಕೊಂಡ ವಿಜಯ್ – Kannada News | Thalapathy Vijay’s Political Rise: How Cinema Paved His Path to Power and Public Voice

ದಳಪತಿ ವಿಜಯ್ ಅವರು ರಾಜಕೀಯದಲ್ಲಿ ಯಶಸ್ಸು ಕಂಡಿದ್ದಾರೆ. ಹಲವು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಅವರು ಸಂಪಾದಿಸಿದ ಅಭಿಮಾನ ಈಗ ಮತವಾಗಿ ಬದಲಾಗಿದೆ. ಅವರು ತಮಗೆ ಸಿಕ್ಕ ಬಣ್ಣದ ಲೋಕದ ವೇದಿಕೆಯನ್ನು ಸರಿಯಾದ ರೂಪದಲ್ಲಿ ಬಳಸಿಕೊಂಡರು. ಜನರ ನೋವು-ನಲಿವುಗಳಿಗೆ ಸ್ಪಂದಿಸುವ ಒಂದು ದೊಡ್ಡ ವೇದಿಕೆಯಾಗಿ ಬೆಳೆದಿದೆ. ಆರಂಭದಲ್ಲಿ ಕಮರ್ಷಿಯಲ್ ಮತ್ತು ರೊಮ್ಯಾಂಟಿಕ್ ಹೀರೋ ಆಗಿ ಗುರುತಿಸಿಕೊಂಡ ವಿಜಯ್, ನಂತರದ ವರ್ಷಗಳಲ್ಲಿ ತಮಿಳುನಾಡಿನ ಪ್ರಬಲ ರಾಜಕೀಯ ಧ್ವನಿಯಾಗಿ ರೂಪಾಂತರಗೊಂಡರು. ಅವರ ಈ ಪಯಣದಲ್ಲಿ ರಾಜಕೀಯ ಕಥಾಹಂದರ ಹೊಂದಿರುವ ಕೆಲವು…

Read More

ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದ್ದಕ್ಕೆ ವಿಜಯೇಂದ್ರ ಶಾಕ್ – Kannada News | BY Vijayendra shocked by BJP’s defeat in Bagalkot by election

ಬಾಗಲಕೋಟೆ, ಮೇ 04: ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಉಮೇಶ್​ ಮೇಟಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಸೋತಿದ್ದಾರೆ. ಈ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಬಾಗಲಕೋಟೆಯಲ್ಲಿ ಆಗಿರುವ ಹಿನ್ನಡೆಯನ್ನು ಒಪ್ಪಿಕೊಳ್ಳುತ್ತೇವೆ. ಮತದಾರರು ಕೈಹಿಡಿಯುವ ವಿಶ್ವಾಸವಿತ್ತು. ಉಪಚುನಾವಣೆಯಲ್ಲಿ ಆದ ಹಿನ್ನಡೆ ಬಗ್ಗೆ ಪರಾಮರ್ಶೆ ಮಾಡುತ್ತೇವೆ ಎಂದಿದ್ದಾರೆ. ಬಾಗಲಕೋಟೆಯಲ್ಲಿ ಮುಖ್ಯಮಂತ್ರಿಗಳು 15 ದಿನ ಬೀಡುಬಿಟ್ಟಿದ್ದರು. ಇಡೀ ಸಚಿವ ಸಂಪುಟವೇ ಬಾಗಲಕೋಟೆಯಲ್ಲಿ ಬೀಡು ಬಿಟ್ಟಿತ್ತು. ಉಪಚುನಾವಣೆಗಳ ಇತಿಹಾಸ ನಮ್ಮ ಕಣ್ಮುಂದೆ ಇದೆ. ಯಾವ ರೀತಿ…

Read More

ದರ್ಶನ್ ಜಾಮೀನು ಅರ್ಜಿ ವಿಚಾರಣೆ: 1 ವಾರದಲ್ಲಿ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚನೆ – Kannada News | Darshan Bail Application Hearing Supreme Court Directs Submission of Report Within 1 Week

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಅವರ ಜಾಮೀನು (Bail) ಅರ್ಜಿ ವಿಚಾರಣೆ ಇಂದು (ಮೇ 4) ಸುಪ್ರೀಂ ಕೋರ್ಟ್​​ನಲ್ಲಿ ನಡೆದಿದೆ. ನ್ಯಾ. ಪರ್ದಿವಾಲಾ ಮತ್ತು ನ್ಯಾ. ವಿಜಯ್ ಬಿಷ್ಣೋಯಿ ಅವರ ಪೀಠದಲ್ಲಿ ವಿಚಾರಣೆ ಮಾಡಲಾಗಿದೆ. A2 ದರ್ಶನ್ (Darshan) ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡನೆ ಮಾಡಿದ್ದಾರೆ. ‘ಆರೋಪಿ ದರ್ಶನ್​ಗೆ 5 ಸ್ಟಾರ್ ಟ್ರೀಟ್ಮೆಂಟ್ ಕೊಡಬೇಡಿ ಎಂದಿದ್ದೀರಿ. ಆದರೆ ಜೈಲು ಅಧಿಕಾರಿಗಳು ಮೂಲಭೂತ ಸವಲತ್ತನ್ನೂ ನೀಡುತ್ತಿಲ್ಲ’ ಎಂದು ರಾಜ್ಯ…

Read More

ವಿಜಯ್ vs ಎನ್‌ಟಿಆರ್: ಇಬ್ಬರು ಸೂಪರ್‌ಸ್ಟಾರ್‌ಗಳು, ಎರಡು ಭಿನ್ನ ದಾರಿಗಳು; ಹೀಗೊಂದು ಹೋಲಿಕೆ – Kannada News | Thalapathi Vijay vs NTR, comparison of different generation leaders in South India

ದಳಪತಿ ವಿಜಯ್, ಎನ್​ಟಿಆರ್Image Credit source: AI/Mediaforge/TV9 ಚೆನ್ನೈ, ಮೇ 4: ದಕ್ಷಿಣ ಭಾರತದ ರಾಜಕಾರಣದಲ್ಲಿ ಸಿನಿಮಾ ಮತ್ತು ರಾಜಕೀಯಕ್ಕೆ ಅವಿನಾಭಾವ ಸಂಬಂಧವಿದೆ. ಎಂಜಿಆರ್, ಕರುಣಾನಿಧಿ, ಎನ್​ಟಿಆರ್, ಚಿರಂಜೀವಿ, ಪವನ್ ಕಲ್ಯಾಣ್, ವಿಜಯಕಾಂತ್, ಹೀಗೆ ಪಟ್ಟಿ ಉದ್ದವಿದೆ. ಈಗ ದಳಪತಿ ವಿಜಯ್ ಹೊಸ ರಾಜಕೀಯ ಸ್ಟಾರ್ ಆಗಿ ಮೇಳೈಸಿದ್ದಾರೆ. ಎನ್.ಟಿ. ರಾಮರಾವ್ ಅವರು 1980ರ ದಶಕದಲ್ಲಿ ಆಂಧ್ರಪ್ರದೇಶದಲ್ಲಿ ಸೃಷ್ಟಿಸಿದ ಕ್ರಾಂತಿ ಇಂದಿಗೂ ಒಂದು ಮಾದರಿ. ಈಗ ತಮಿಳುನಾಡಿನಲ್ಲಿ (Tamil Nadu Assembly Elections) ದಳಪತಿ ವಿಜಯ್ ಅವರು…

Read More

ಬಾಗಲಕೋಟೆ ಬೈ ಎಲೆಕ್ಷನ್ ರಿಸಲ್ಟ್: ಸಹೋದರನ ಗೆಲುವಿಗೆ ಬಾಯಕ್ಕ ಖುಷಿ ಓಕೆ, ದುಃಖ ಏಕೆ? – Kannada News | Sister Bayakka Talks after Brother Umesh Meti Won In Bagalkot By Election

ಬಾಗಲಕೋಟೆ, (ಮೇ 04): ಹೆಚ್​​ ವೈ ಮೇಟಿ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್​ ಮೇಟಿ ಗೆಲುವು ಸಾಧಿಸಿದ್ದಾರೆ. ಕಳೆದ 2023ರ ಚುನಾವಣೆಯಲ್ಲೂ ಸಹ ಕಾಂಗ್ರೆಸ್​​​ನ ಹೆಚ್​ ವೈ ಮೇಟಿ ಅವರು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿರುದ್ಧ ಗೆದ್ದು ಬೀಗಿದ್ದರು. ಇದೀಗ ಉಪಚುನಾವಣೆಯಲ್ಲೂ ಪುತ್ರ ಉಮೇಶ್​ ಮೇಟಿ ಸಹ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನ 22,332 ಮತಗಳಿಂದ ಸೋಲಿಸಿದ್ದಾರೆ. ಫಲಿತಾಂಶದ ಬಗ್ಗೆ ಹೆಚ್​ ವೈ ಮೇಟಿ ಪುತ್ರಿ…

Read More

ರಾಹುಲ್​​ ಮಾತು ಕೇಳದೆ ತಮಿಳುನಾಡಲ್ಲಿ ಕೆಟ್ಟಿತಾ ಕಾಂಗ್ರೆಸ್​​? ಅಸಲಿಗೆ ಆಗಿದ್ದೇನು? – Kannada News | Did Congress Suffer in Tamil Nadu for Ignoring Rahul Gandhi’s Advice on Alliance?

ಚೆನ್ನೈ, ಮೇ 04: ಪಂಚರಾಜ್ಯ ಚುನಾವಣೆಯಲ್ಲಿ ಕೇರಳ ಒಂದನ್ನು ಹೊರತುಪಡಿಸಿದರೆ ಉಳಿದೆಡೆ ಕಾಂಗ್ರೆಸ್​ ಸಾಧನೆ ಹೇಳಿಕೊಳ್ಳುವ ಮಟ್ಟಿಗೆ ಏನೂ ಆಗಿಲ್ಲ. ಈ ನಡುವೆ ತಮಿಳುನಾಡು ಚುನಾವಣೆ ಸಂಬಂಧ ಅಚ್ಚರಿಯ ವಿಚಾರವೊಂದು ಬೆಳಕಿಗೆ ಬಂದಿದ್ದು, ರಾಹುಲ್​​ ಗಾಂಧಿ ಹೇಳಿದ್ದ ಮಾತು ಕೇಳದೆ ಹೋಗಿದ್ದೇ ತಮಿಳುನಾಡಲ್ಲಿ ಕಾಂಗ್ರೆಸ್​​ನ ಕಳಪೆ ಸಾಧನೆಗೆ ಕಾರಣವಾ? ಎಂಬ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಹಿರಿಯರ ಸಲಹೆ ಎಂದು ರಾಹುಲ್​​ ಸುಮ್ಮನಾಗಿದ್ದೇ ತಮಿಳುನಾಡಲ್ಲಿ ಕಾಂಗ್ರೆಸ್​​ ಪಾಲಿಗೆ ಮುಳುವಾಯ್ತಾ ಎಂಬ ಪ್ರಶ್ನೆ ಎದ್ದಿದೆ. ರಾಹುಲ್​​ ಏನು ಹೇಳಿದ್ದರು?…

Read More

ಹಿಮಂತ ಬಿಸ್ವಾ ಶರ್ಮಾ ಆಡಳಿತಕ್ಕೆ ಅಸ್ಸಾಂ ಜನತೆಯ ಮೊಹರು, ವಿರೋಧ ಪಕ್ಷಗಳ ಕೋಟೆ ಧ್ವಂಸ, ಬಿಜೆಪಿ ಹ್ಯಾಟ್ರಿಕ್ ಗೆಲುವಿಗೆ ಕಾರಣಗಳೇನು? – Kannada News | Assam BJP’s Historic Win: Himanta’s Magic Secures Third Term, Why Anti Incumbency Failed Here

ಗುವಾಹಟಿ, ಮೇ 04: ದೇಶದ ಇತರ ಮೂರು ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ (Anti-incumbency) ಸರ್ಕಾರಗಳನ್ನು ಬುಡಮೇಲು ಮಾಡುತ್ತಿದ್ದರೆ, ಅಸ್ಸಾಂನಲ್ಲಿ ಮಾತ್ರ ಬಿಜೆಪಿ ಈ ಪ್ರವೃತ್ತಿಯನ್ನು ತಲೆಕೆಳಗಾಗಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ(Himanta Biswa Sarma) ಅವರ ನೇತೃತ್ವದ ತಂಡವು ಅಸ್ಸಾಂನಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಯನ್ನು ಏರಿದೆ. ಅಸ್ಸಾಂ ವಿಧಾನಸಭೆ ಚುನಾವಣೆ 2026ರ ಫಲಿತಾಂಶಗಳು ಹೊರಬೀಳುತ್ತಿದ್ದು, ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ…

Read More

‘ಚುರುಮುರಿ ತಿಂದ ಮೋದಿ, ಗುಂಡಿಗೆ ಬಿದ್ದ ದೀದಿ’! ಮಂಗಳೂರಿನಲ್ಲಿ ಬಿಜೆಪಿಗರ ಘೋಷಣೆ, ಚುರುಮುರಿ ತಯಾರಿಸಿ ಹಂಚಿದ ಶಾಸಕ ಕಾಮತ್ – Kannada News | BJP Victory Celebration in Mangaluru: MLA Vedavyas Kamath Prepares and Distributes Churumuri as Party Wins Big

ಮಂಗಳೂರು, ಮೇ 4: ಪಶ್ಚಿಮ ಬಂಗಾಳ ಸೇರಿದಂತೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಮತ್ತು ಬಹುಮತದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಿಂದ ಅದ್ಧೂರಿ ಸಂಭ್ರಮಾಚರಣೆ ನಡೆಸಲಾಯಿತು. ನಗರದ ಪಿವಿಎಸ್ ಬಳಿ ಇರುವ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಲ್ಲಿ ನೆರೆದಿದ್ದ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಲಡ್ಡು ಹಂಚಿ ವಿಜಯೋತ್ಸವ ಆಚರಿಸಿದರು. ಈ ಸಂಭ್ರಮಾಚರಣೆಯ ವಿಶೇಷ ಆಕರ್ಷಣೆಯೆಂದರೆ, ಶಾಸಕ ವೇದವ್ಯಾಸ್ ಕಾಮತ್ ಅವರು ಸ್ವತಃ ಚುರುಮುರಿ ತಯಾರಿಸಿ ಕಾರ್ಯಕರ್ತರಿಗೆ…

Read More