nagaraj11081993

ಡಿವೋರ್ಸ್ ಬಳಿಕ 9 ಕಿ.ಮೀ ದೀಡ ನಮಸ್ಕಾರ ಹಾಕಿ ದೇವರಿಗೆ ಥ್ಯಾಂಕ್ಸ್ ಹೇಳಿದ ಯುವಕ! ವಿಡಿಯೋ ವೈರಲ್‌

ಲಕ್ನೋ, (ಮಾರ್ಚ್ 30): ಸಾಮಾನ್ಯವಾಗಿ ದಾಂಪತ್ಯ ಜೀವನದಲ್ಲಿ ವಿಚ್ಛೇದನ (Divorce) ಸಂಭವಿಸಿದರೆ ಅದು ದುಃಖದ ಸಂಗತಿ ಎಂದು ಪರಿಗಣಿಸಲಾಗುತ್ತದೆ. ಆದ್ರೆ, ಇತ್ತೀಚಿನ ದಿನಗಳಲ್ಲಿ ಕೆಲವರು ‘ಡಿವೋರ್ಸ್ ಪಾರ್ಟಿ’ ನೀಡಿ ಸಂಭ್ರಮಿಸುವುದನ್ನೂ ನಾವು ನೋಡಿದ್ದೇವೆ. ಅದರಂತೆ ಉತ್ತರ ಪ್ರದೇಶದ (Uttara Pradesh) ಬಸ್ತಿ ಜಿಲ್ಲೆಯ 25 ವರ್ಷದ ಯುವಕನೋರ್ವ ತನಗೆ ಪತ್ನಿಯಿಂದ ​ಕೋರ್ಟಿನಲ್ಲಿ ವಿಚ್ಛೇದನ ಸಿಕ್ಕಿದ್ದಕ್ಕೆ ದೇವರಿಗೆ ಧನ್ಯವಾದ ಸಲ್ಲಿಸಲು ಬರೋಬ್ಬರಿ 9 ಕಿಲೋಮೀಟರ್‌ಗಳಷ್ಟು ದೂರ ದೀಡ ನಮಸ್ಕಾರ ಹಾಕುವ ಮೂಲಕ ವಿಶಿಷ್ಟವಾಗಿ ಹರಕೆ ತೀರಿಸಿದ್ದಾನೆ. ಈ ವಿಡಿಯೋ…

Read More

ಸ್ನೇಹಿತರನ್ನು ಮೀಟ್ ಮಾಡಲು ಬಂದಿದ್ದ ವಿದ್ಯಾರ್ಥಿ ದುರಂತ ಅಂತ್ಯ: 12ನೇ ಮಹಡಿಯಿಂದ ಬಿದ್ದು ಸಾವು

ಮಂಗಳೂರು, ಮಾರ್ಚ್​ 30: 12ನೇ ಮಹಡಿಯಿಂದ ಬಿದ್ದು ಮೆಡಿಕಲ್ ವಿದ್ಯಾರ್ಥಿ ಸಾವನ್ನಪ್ಪಿರುವಂತಹ (death) ಘಟನೆ ಮಂಗಳೂರಿನ ಕ್ಯಾಸಾಗ್ರಾಂಡ್​ ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ. ಸ್ನೇಹಿತರನ್ನು ಮೀಟ್ ಮಾಡಲು ಪರಿಚಯಸ್ಥರ ಫ್ಲಾಟ್​ಗೆ ಬಂದಿದ್ದ ವೇಳೆ ಅಲ್ಲಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿದ್ಯಾರ್ಥಿಯ ಹೆಸರು ಮತ್ತು ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮನೆ ಹೊಸ್ತಿಲಿನಲ್ಲಿ ಪೂಜೆಗಿಟ್ಟಿದ್ದ ದಾಸವಾಳ ಹೂವು ನುಂಗಿ ಮಗು ಸಾವು ಮೈಸೂರು ಜಿಲ್ಲೆಯ…

Read More

ಸ್ನೇಹಿತರನ್ನು ಮೀಟ್ ಮಾಡಲು ಬಂದಿದ್ದ ವಿದ್ಯಾರ್ಥಿ ದುರಂತ ಅಂತ್ಯ: 12ನೇ ಮಹಡಿಯಿಂದ ಬಿದ್ದು ಸಾವು

ಮಂಗಳೂರು, ಮಾರ್ಚ್​ 30: 12ನೇ ಮಹಡಿಯಿಂದ ಬಿದ್ದು ಮೆಡಿಕಲ್ ವಿದ್ಯಾರ್ಥಿ ಸಾವನ್ನಪ್ಪಿರುವಂತಹ (death) ಘಟನೆ ಮಂಗಳೂರಿನ ಕ್ಯಾಸಾಗ್ರಾಂಡ್​ ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ. ಸ್ನೇಹಿತರನ್ನು ಮೀಟ್ ಮಾಡಲು ಪರಿಚಯಸ್ಥರ ಫ್ಲಾಟ್​ಗೆ ಬಂದಿದ್ದ ವೇಳೆ ಅಲ್ಲಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿದ್ಯಾರ್ಥಿಯ ಹೆಸರು ಮತ್ತು ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮನೆ ಹೊಸ್ತಿಲಿನಲ್ಲಿ ಪೂಜೆಗಿಟ್ಟಿದ್ದ ದಾಸವಾಳ ಹೂವು ನುಂಗಿ ಮಗು ಸಾವು ಮೈಸೂರು ಜಿಲ್ಲೆಯ…

Read More

BJP ರೋಡ್ ಶೋಗೆ ಕಾಂಗ್ರೆಸ್ ಧ್ವಜ ಹಿಡಿದು ‘ಕೈ’ ಕಾರ್ಯಕರ್ತರ ಎಂಟ್ರಿ: ಫುಲ್​​ ಹೈಡ್ರಾಮಾ

ಬಾಗಲಕೋಟೆ, ಮಾರ್ಚ್​​ 30: ಉಪಚುನಾವಣೆ ಹಿನ್ನೆಲೆ ಬಿಜೆಪಿ ರೋಡ್ ಶೋ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಧ್ವಜ ಹಿಡಿದು ‘ಕೈ’ ಕಾರ್ಯಕರ್ತರು ಎಂಟ್ರಿಕೊಟ್ಟ ಪರಿಣಾಮ ಕಾರ್ಯಕರ್ತರ ಮಧ್ಯೆ ನೂಕಾಟ-ತಳ್ಳಾಟ ನಡೆದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಿಜೆಪಿ ಕಾರ್ಯಕರ್ತ ಮಧ್ಯೆ ಬೈಕ್ ತೆಗೆದುಕೊಂಡು ಹೋಗಲು ಕಾಂಗ್ರೆಸ್ ಕಾರ್ಯಕರ್ತ ಯತ್ನಿಸಿದ್ದು, ಈ ವೇಳೆ ಗದ್ದಲ ಆರಂಭವಾಗಿದೆ. ಕಾಂಗ್ರೆಸ್​​ ಕಾರ್ಯಕರ್ತನನ್ನು ಪೊಲೀಸರು ಎಳೆದು ತಂದಿದ್ದು, ಈ ವೇಳೆ ಅದೇ ಪಕ್ಷದ ಕಾರ್ಯಕರ್ತರು ಕಿರುಚಾಡಿದ್ದಾರೆ. ಈ ವೇಳೆ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು,…

Read More

ಗೃಹ ಸಚಿವ ಪರಮೇಶ್ವರ ಆಪ್ತನ ಹತ್ಯೆ ಹತ್ನ: ಚಾಕುವಿನಿಂದ ಚುಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಾರವಾರ, (ಮಾರ್ಚ್ 30): ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಆಪ್ತರಾಗಿರುವ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ್ ಅವರ ಮೇಲೆ ಅಂಕೋಲಾದಲ್ಲಿ ನಡೆದ ಹತ್ಯೆ  ಯತ್ನ ಪ್ರಕರಣ (Gopalkrishna Nayak Murder Attempt) ಜಿಲ್ಲೆಯಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ. ಮಾರ್ಚ್ 25ರಂದು ಹಾಡಹಗಲೇ ನಡೆದ ಈ ದಾಳಿ ರಾಜಕೀಯ ವಲಯದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಘಟನೆಯ‌ ಇನ್ನೊಂದು ಸಿಸಿಟಿವಿ ವಿಡಿಯೋ ವೈರಲ್ ಆಗಿದ್ದು, ಆರೋಪಿಗಳು ಗೋಪಾಲ ಕೃಷ್ಣ ನಾಯಕ್ ಅವರ ತಲೆಗೆ…

Read More

ಧುರಂಧರ್ ನೋಡಿ ಕಲಿಯಿರಿ: ಮೌನ ತಾಳಿದ ಬಾಲಿವುಡ್ ಮಂದಿಗೆ ಆರ್​ಜಿವಿ ಖಡಕ್ ಮಾತು

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾದ ದಿನದಿಂದಲೂ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಈ ಸಿನಿಮಾ, ಈಗಾಗಲೇ ಜಾಗತಿಕವಾಗಿ 1,300 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡುವ ಮೂಲಕ ಹಳೇ ದಾಖಲೆಗಳನ್ನೆಲ್ಲ ಮುರಿದಿದೆ. ಆದರೆ, ಈ ಯಶಸ್ಸಿನ ನಡುವೆಯೂ ಬಾಲಿವುಡ್ ಮಂದಿ ತೋರುತ್ತಿರುವ ಮೌನ ಈಗ ಚರ್ಚೆಗೆ ಕಾರಣವಾಗಿದೆ. ಸದಾ ವಿವಾದಿತ ಹೇಳಿಕೆಗಳಿಂದ ಸುದ್ದಿ ಆಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV)…

Read More

CSK vs RR Playing XI: ಟಾಸ್ ಗೆದ್ದ ರಾಜಸ್ಥಾನ್; ಧೋನಿ, ಬ್ರೆವಿಸ್ ಇಲ್ಲದೆ ಕಣಕ್ಕಿಳಿದ ಸಿಎಸ್​ಕೆ

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ 2026 ರ ಮೊದಲ ಪಂದ್ಯವು ಮಾರ್ಚ್ 30, 2026 ರಂದು ಅಸ್ಸಾಂನ ಗುವಾಹಟಿಯಲ್ಲಿರುವ ಬಾರ್ಬರಪ್ಪ ​​ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಕಳೆದ ಸೀಸನ್‌ನಲ್ಲಿ ಎರಡೂ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದವು. ಪರಿಣಾಮವಾಗಿ, ಎರಡೂ ತಂಡಗಳು ಈ ಸೀಸನ್ ಅನ್ನು ಗೆಲುವಿನೊಂದಿಗೆ ಪ್ರಾರಂಭಿಸುವ ಇರಾದೆಯಲ್ಲಿವೆ. ಐಪಿಎಲ್‌ನ ಮೊದಲ ಆವೃತ್ತಿಯ ಚಾಂಪಿಯನ್ ಆಗಿರುವ ರಾಜಸ್ಥಾನ್ ರಾಯಲ್ಸ್, ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು…

Read More

IPL 2026: ಆರ್​ಸಿಬಿ ಪರ ಆಡಲು ರಾಷ್ಟ್ರೀಯ ತಂಡ ತೊರೆಯಲು ನಿರ್ಧರಿಸಿದ ಸ್ಟಾರ್ ವೇಗಿ

2026 ರ ಐಪಿಎಲ್ (IPL 2026) ಉದ್ಘಾಟನಾ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಮಣಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿದೆ. ಆರ್​ಸಿಬಿಯ (RCB) ಮುಂದಿನ ಸಿಎಸ್​ಕೆ ವಿರುದ್ಧ ಏಪ್ರಿಲ್ 5 ರ ಭಾನುವಾರದಂದು ನಡೆಯಲಿದೆ. ಅಂದರೆ ಈ ಪಂದ್ಯಕ್ಕೆ ಇನ್ನು ಸಾಕಷ್ಟು ಸಮಯ ಉಳಿದಿದೆ. ಆದಾಗ್ಯೂ ಆರ್​ಸಿಬಿ ತಂಡವನ್ನು ಸೇರಲು ಪಣತೊಟ್ಟಿರುವ ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ (Nuwan Thushara), ಲಂಕಾ ಕ್ರಿಕೆಟ್ ಮಂಡಳಿಯ ಕೇಂದ್ರ ಒಪ್ಪಂದದಿಂದ ಹೊರಬರಲು…

Read More

ಬೇಗ ಡೀಲ್ ಆಗದಿದ್ದರೆ ಇರಾನ್​ನ ಇಂಧನ ಘಟಕಗಳು, ಖರ್ಗ್ ದ್ವೀಪವನ್ನು ಉಡಾಯಿಸುತ್ತೇವೆ: ಡೊನಾಲ್ಡ್ ಟ್ರಂಪ್ ಕಟ್ಟೆಚ್ಚರಿಕೆ

ನವದೆಹಲಿ, ಮಾರ್ಚ್ 30: ಇರಾನ್​ನ ಹೆಚ್ಚು ಉದಾರಿ ಆಡಳಿತದ ಜೊತೆ ಅಮೆರಿಕದ ಸಂಧಾನ (Negotiations) ನಡೆಸುತ್ತಿದೆ. ಒಂದು ವೇಳೆ, ಈ ಮಾತುಕತೆ ವಿಫಲವಾಗಿ ಶೀಘ್ರದಲ್ಲೇ ಒಪ್ಪಂದಕ್ಕೆ ಬರಲಾಗದಿದ್ದರೆ ಮತ್ತು ಹಾರ್ಮುಜ್ ಜಲಸಂಧಿ ಮುಕ್ತವಾಗದಿದ್ದರೆ ಇರಾನ್​ನ ಇಂಧನ ಮೂಲಸೌಕರ್ಯ (Energy infra), ತೈಲ ಬಾವಿಗಳು (oil wells) ಮತ್ತು ಖರ್ಗ್ ದ್ವೀಪವನ್ನು (Kharg island) ಉಡಾಯಿಸಿಬಿಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಟ್ರಂಪ್ ಅವರು ತಮ್ಮ ಟ್ರೂತ್ ಸೋಷಿಯಲ್ ಪ್ಲಾಟ್​ಫಾರ್ಮ್​ನಲ್ಲಿ ಈ ಬಗ್ಗೆ ಒಂದು…

Read More

ಗ್ಯಾಸ್ ರೀಫಿಲ್ ಮಾಡುವಾಗ ಏಕಾಏಕಿ ಸಿಲಿಂಡರ್​ ಸ್ಫೋಟ: ಮನೆ ಛಿದ್ರಛಿದ್ರ

ಹಾಸನ, ಮಾರ್ಚ್​ 30: ಸಿಲಿಂಡರ್ ಬದಲಿಸುವ ವೇಳೆ ಅನಿಲ ಸೋರಿಕೆಯಾಗಿ ಸ್ಫೋಟಗೊಂಡಿದ್ದು, ನಾಲ್ವರಿಗೆ ಗಾಯವಾಗಿರುವಂತಹ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆ.ಅಬ್ಬೂರು ಗ್ರಾಮದಲ್ಲಿ ನಡೆದಿದೆ. ಸಿಲಿಂಡರ್​ನಲ್ಲಿದ್ದ ಗ್ಯಾಸ್ ಖಾಲಿಯಾದ ಹಿನ್ನೆಲೆಯಲ್ಲಿ ಬದಲಾವಣೆ ಮುಂದಾಗಿದ್ದಾರೆ. ಗ್ಯಾಸ್ ತುಂಬಿದ್ದ ಸಿಲಿಂಡರ್​ಗೆ ರೆಗ್ಯುಲೇಟರ್ ಅಳವಡಿಸುವಾಗ ಅಡುಗೆ ಅನಿಲ ಸೋರಿಕೆಯಾಗಿ ಏಕಾಏಕಿ ಸ್ಫೋಟವಾಗಿದೆ. ಮಹಿಳೆ, ಪುತ್ರ ಸೇರಿದಂತೆ ಮನೆಯಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಕೊಣನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸುಂದರೇಶ್ ಮನೆಯಲ್ಲಿ ಘಟನೆ ನಡೆದಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದೆ….

Read More