ನೆಲಮಂಗಲ ಬಳಿ ಬಸ್‌ಗೆ ಕಾರು ಗುದ್ದಿ ಐವರ ಸಾವು: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ – Kannada News | Horrific Nelamangala Car Bus Collision Claims Lives; Bus Driver Describes Traumatic Incident
ಬೆಂಗಳೂರು, ಫೆಬ್ರವರಿ 15: ನೆಲಮಂಗಲದ ಜಿಂದಾಲ್ ಬಳಿ ಸಂಭವಿಸಿದ ಬಸ್ ಮತ್ತು ಕಾರು ನಡುವಿನ ಅಪಘಾತದಲ್ಲಿ ಐವರು ಅಸುನೀಗಿರುವ ಘಟನೆಯ ಭೀಕರತೆಯನ್ನು ಕೆಎಸ್ಆರ್ಟಿಸಿ ಬಸ್ ಚಾಲಕ ಕೆಂಪರಾಜು ವಿವರಿಸಿದ್ದಾರೆ. ಕಾರು ಅತಿ ವೇಗದಲ್ಲಿ ಡಿವೈಡರ್ ಹಾರಿ ಬಸ್‌ಗೆ ಡಿಕ್ಕಿ ಹೊಡೆದಾಗ ಜೋರಾದ ಸದ್ದು ಕೇಳಿಸಿತು. ಅಪಘಾತದ ತೀವ್ರತೆಗೆ ಬಸ್‌ನ ಗಾಜುಗಳು ಒಡೆದು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್‌ನಲ್ಲಿ 43 ಪ್ರಯಾಣಿಕರಿದ್ದು, ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ. ಅಪಘಾತವಾದ ಕಾರಿನಲ್ಲಿ ಐವರು ಇದ್ದರು. ಆ ಪೈಕಿ ಎಲ್ಲರೂ ಮೃತಪಟ್ಟಿದ್ದಾರೆ….