ಧ್ರುವ ಸರ್ಜಾಗೆ ವಿಶ್ ಮಾಡಿ ‘ಕೆಡಿ’ ಚಿತ್ರದ ಬೆಂಬಲಕ್ಕೆ ನಿಂತ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು – Kannada News | Kannada Film Industry celebrities supporting KD movie and Dhruva Sarja
ಏಪ್ರಿಲ್ 30ರಂದು ತೆರೆಕಂಡ ‘ಕೆಡಿ’ ಸಿನಿಮಾ (KD Movie) ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಧ್ರುವ ಸರ್ಜಾ (Dhruva Sarja) ಅವರ ಅಭಿಮಾನಿಗಳು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ನಿರ್ದೇಶಕ ಜೋಗಿ ಪ್ರೇಮ್ ಅವರು ಆ್ಯಕ್ಷನ್ ಮತ್ತು ಸೆಂಟಿಮೆಂಟ್ ಬೆರೆತ ಕಥೆಯನ್ನು ತೆರೆಗೆ ತಂದಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ‘ಕೆಡಿ’ ಸಿನಿಮಾಗೆ ಪ್ರೇಕ್ಷಕರಿಂದ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಗೆ ಸ್ಯಾಂಡಲ್ವುಡ್ ಮಂದಿ ಖುಷಿ ಆಗಿದ್ದಾರೆ. ಕನ್ನಡ ಚಿತ್ರರಂಗದ ಅನೇಕರು ಈ ಸಿನಿಮಾಗೆ ಶುಭ…