ಹೊಸ ರೂಪದ ಮೈಸೂರು ಸ್ಯಾಂಡಲ್ ಸೋಪ್ ಬಿಡುಗಡೆ ಮಾಡಿದ ತಮನ್ನಾ ಭಾಟಿಯಾ – Kannada News | Tamannaah Bhatia unveils new Mysore Sandal Soap in Bengaluru as brand ambassador
ಬಹುಭಾಷಾ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ಮೈಸೂರು ಸ್ಯಾಂಡಲ್ ಸೋಪ್ಗೆ ಪ್ರಚಾರ ರಾಯಭಾರಿ. ಇಂದು (ಫೆಬ್ರವರಿ 10) ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮನ್ನಾ ಭಾಗಿಯಾದರು. ಹೊಸ ರೂಪದ ಸೋಪನ್ನು ಅವರು ಬಿಡುಗಡೆ ಮಾಡಿದರು. ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲೇ ಹೇಳುವ ಮೂಲಕ ತಮನ್ನಾ ಅವರು ಮಾತು ಆರಂಭಿಸಿದರು. ಬಳಿಕ ಅವರು ಇಂಗ್ಲಿಷ್ನಲ್ಲಿ ಮಾತು ಮುಂದುವರಿಸಿದರು. ‘ನನಗೆ ಇದು ತುಂಬಾ ದೊಡ್ಡ ಗೌರವ ಹಾಗೂ ಹೆಮ್ಮೆ. KSDL ಕುಟುಂಬದಲ್ಲಿ ನಾನೂ ಒಬ್ಬಳಾಗಿದ್ದೇನೆ. 20 ವರ್ಷಗಳಿಂದ ಚಿತ್ರರಂಗದಲ್ಲಿ…