ಹಿಮಾಚಲ ಪ್ರದೇಶದ ಚಿಂತ್ಪುರಿ ಬಳಿ ಕಣಿವೆಗೆ ಉರುಳಿದ ಕಾರು; ಇಬ್ಬರು ಸಾವು – Kannada News | Car plunged into deep gorge near Chintpuri Himachal Pradesh 2 people dead
ಚಿಂತ್ಪುರಿ, ಏಪ್ರಿಲ್ 30: ಹಿಮಾಚಲ ಪ್ರದೇಶದ ಉನಾದಲ್ಲಿ ಕಾರು ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ. ಮಾತಾ ಚಿಂತ್ಪೂರ್ಣಿ ದೇವಸ್ಥಾನಕ್ಕೆ ತೀರ್ಥಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಇಬ್ಬರು ಅಪಘಾತದಲ್ಲಿ (Road Accident) ಸಾವನ್ನಪ್ಪಿದ್ದಾರೆ. ಕಾರು ಕಣಿವೆಗೆ ಬಿದ್ದ ನಂತರ ಬೆಂಕಿ ಹೊತ್ತಿಕೊಂಡಿದೆ. ಕಾರನ್ನು ಅತಿ ವೇಗದಲ್ಲಿ ಚಲಾಯಿಸುತ್ತಿದ್ದಾಗ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿದೆ ಎಂದು ಪೊಲೀಸ್ ತಿಳಿಸಿದ್ದಾರೆ. ಭರ್ವೈನ್-ಹೋಶಿಯಾರ್ಪುರ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಮಾತಾ ಚಿಂತ್ಪೂರ್ಣಿ ದೇವಸ್ಥಾನಕ್ಕೆ ತೀರ್ಥಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಕಾರಿನೊಳಗೆ ಇಬ್ಬರು ಇದ್ದರು. ಆ ಕಾರು ಲುಧಿಯಾನದ…