‘ಉತ್ತರ ರಾಮಾಯಣ’ದ ಕುಶ ಈಗ 1400 ಕೋಟಿ ರೂ. ಕಂಪನಿಯ ಒಡೆಯ – Kannada News | Uttar Ramayan’s Kush: Mayuresh Kshetramade’s Journey from Child Actor to 1400 Cr CEO
1980ರ ದಶಕದಲ್ಲಿ ದೂರದರ್ಶನದಲ್ಲಿ ರಮಾನಂದ ಸಾಗರ್ ಅವರ ‘ರಾಮಾಯಣ’ ಸರಣಿ ಇಡೀ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ಪೌರಾಣಿಕ ಧಾರಾವಾಹಿಯ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ನಿರ್ಮಾಪಕರು ಕೆಲವು ವರ್ಷಗಳ ನಂತರ ‘ಉತ್ತರ ರಾಮಾಯಣ’ವನ್ನು ಪ್ರೇಕ್ಷಕರ ಮುಂದೆ ತಂದಿದ್ದರು. ಇದರಲ್ಲಿ ರೀರಾಮ ಮತ್ತು ಸೀತಾಮಾತೆಯ ಪುತ್ರರಾದ ಲವ ಮತ್ತು ಕುಶನ ಕಥೆಯನ್ನು ತೋರಿಸಲಾಗಿತ್ತು. 1988ರಲ್ಲಿ ಪ್ರಸಾರವಾದ ಈ ‘ಉತ್ತರ ರಾಮಾಯಣ’ದಲ್ಲಿ ಲವನ ಪಾತ್ರವನ್ನು ನಟ ಸ್ವಪ್ನಿಲ್ ಜೋಶಿ ನಿರ್ವಹಿಸಿದರೆ, ಕುಶನ ಪಾತ್ರವನ್ನು ಮಯೂರೇಶ್ ಕ್ಷೇತ್ರಮಾಡೆ ಮಾಡಿದ್ದರು. ಸ್ವಪ್ನಿಲ್ ಜೋಶಿ ಇಂದು…