ಜ್ಯೋತಿಷಿ ಹೇಳ್ತಿದ್ದವನ ಭವಿಷ್ಯವೇ ತಲೆಕೆಳಗಾಯ್ತು: ಕಮಲಾಕರ್ ಭಟ್-ಸುಚಿತ್ರಾಳ ಮತ್ತಷ್ಟು ಶೋಕಿ ಪುರಾಣ ಬಯಲು – Kannada News | Kamalakar bhat guruji And Suchitra And others judicial custody In Siddapur murder over affair dispute
ಶಿವಮೊಗ್ಗ/ಕಾರವಾರ, (ಫೆಬ್ರವರಿ 04): ನಿಮಗೆ ಸಾಡೇಸಾಥ್ ಆರಂಭವಾಗಿದೆ. ನಿಮಗೆ ಶನಿ ವಕ್ಕರಿಸಿದ್ದಾನೆ ಎಂದು ಜನರಿಗೆ ಜ್ಯೋತಿಷಿ ಹೇಳ್ತಿದ್ದ ಕಮಲಾಕರ್ ಭಟ್‌ನ ಭವಿಷ್ಯವೇ ತಲೆಕೆಳಗಾಗಿದೆ. ಕೊಲೆ ಕೇಸ್‌ನಲ್ಲಿ A3 ಕಮಲಾಕರ್ ಭಟ್ ಜೈಲುಪಾಲಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜೆಎಂಎಫ್‌ಸಿ ಕೋರ್ಟ್, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಇನ್ನು ಕಮಲಾಕರ್ ಭಟ್ ಹಾಗೂ ಸುಚಿತ್ರಾಳ ಅಕ್ರಮ ಸಂಬಂಧ ಬಗೆದಷ್ಟು ಬಯಲಾಗುತ್ತಿದೆ. ಜ್ಯೋತಿಷಿ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದ ಸುಚಿತ್ರಾ, ಬಳಿಕ ಪರ್ಮನೆಂಟ್ ಆಗಿ ಆತನ ಮನೆಯವಳಾಗಿಬಿಟ್ಟಿದ್ದಳು….