ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುತ್ತಿರುವಾಗಲೇ ಬಂತು ಪ್ರಮೋಷನ್ ಚೀಟಿ: ಮಹತ್ವದ ಹೇಳಿಕೆ ನೀಡಿದ ಸಿಎಂ – Kannada News | Karnataka CM to KAS: Prioritize Public Service, Curb Agents, Ensure Timely Promotions
ಬೆಂಗಳೂರು, ಏ.27: “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ನಿಜವಾದ ಪ್ರಭುಗಳು. ನಾವು ಮತ್ತು ನೀವು ಅವರ ಸೇವೆಗಾಗಿ ಇದ್ದೇವೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಅಧಿಕಾರಿಗಳಿಗೆ ಸಂವಿಧಾನದ ಆಶಯವನ್ನು ನೆನಪಿಸಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗೆ ಸ್ಪಂದಿಸುವಂತೆ ಅವರು ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಅವರು ಬೆಂಗಳೂರಿನಲ್ಲಿ KAS ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಇದೇ ವೇಳೆ ಅವರು ಅಧಿಕಾರಿಗಳ ಪ್ರಮೋಷನ್ ಬಗ್ಗೆಯೂ ಮಾತನಾಡಿದರು. ನಿಮ್ಮ ಪದೋನ್ನತಿ ಬಗ್ಗೆ ವೇದಿಕೆಯಲ್ಲಿ ಅಧಿಕಾರಿಯೊಬ್ಬರಿ ಚೀಟಿ ನೀಡಿದ್ದಾರೆ….