ಹಿಂದೂ ಸಮಾಜೋತ್ಸವದ ವೇಳೆ ಆತಂಕ ಮೂಡಿಸಿದ ಡ್ರೋನ್ ಪೊಲೀಸ್ ವಶಕ್ಕೆ – Kannada News | Doddaballapura unidentified drone found during hindu samajotsava locals alarmed
ದೇವನಹಳ್ಳಿ, ಜನವರಿ 29: ಅಪರಿಚಿತ ಡ್ರೋನ್ವೊಂದು (drone) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ನಗರದ ಪಾಲನಜೋಗಹಳ್ಳಿಯಲ್ಲಿ ಪತ್ತೆ ಆಗಿದೆ. ಖಾಲಿ ಜಮೀನಿನಲ್ಲಿ ಬಿದ್ದಿದ್ದ ಡ್ರೋನ್ ಕಂಡು ಸ್ಥಳೀಯರಲ್ಲಿ ಆತಂಕ ಮೂಡಿದೆ. ಸದ್ಯ ಡ್ರೋನ್ ಪರಿಶೀಲನೆ ಮಾಡಿದ ಪೊಲೀಸ್ ಅಧಿಕಾರಿಗಳು, ಬಳಿಕ ವಶಕ್ಕೆ ಪಡೆದುಕೊಂಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸಿದ್ದಾರೆ. ವಿಮಾನ ಮಾದರಿಯ ಡ್ರೋನ್ ಪತ್ತೆ ದೊಡ್ಡಬಳ್ಳಾಪುರ ನಗರದ ಪಾಲನಜೋಗಹಳ್ಳಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಿಂದೂ ಸಮಾಜೋತ್ಸವದ ಶೋಭಾಯಾತ್ರೆ ನಡೆಯುತ್ತಿದ್ದ ವೇಳೆ ವಿಮಾನ…