Headlines

Bengaluru Air Quality: ಬೆಂಗಳೂರು, ಮಂಗಳೂರು ಸೇರಿ ಇನ್ನೂ ನಾಲ್ಕು ಜಿಲ್ಲೆಗಳ ಏರ್ ಕ್ವಾಲಿಟಿ ಕಳಪೆ – Kannada News | Bangalore Air Pollution Crisis: Bengaluru, Manglore, Mysore and Belagavi Air quality has gotten worse

ಬೆಂಗಳೂರು, ಮಂಗಳೂರು ಸೇರಿ ಇನ್ನೂ ನಾಲ್ಕು ಜಿಲ್ಲೆಗಳ ಏರ್ ಕ್ವಾಲಿಟಿ ಕಳಪೆ

ಬೆಂಗಳೂರು, ಫೆಬ್ರುವರಿ 08: ನಿನ್ನೆ ತಕ್ಕ ಮಟ್ಟಿಗೆ ಸುಧಾರಿಸಿತೆಂದು ಎಂದುಕೊಂಡ ಬೆಂಗಳೂರಿನ ವಾಯು ಗುಣಮಟ್ಟವೀಗ (Bengaluru Air Quality) ಮತ್ತೊಮ್ಮೆ ಕುಸಿತ ಕಂಡಿದೆ. ಅದರೊಂದಿಗೆ ಮಂಗಳೂರು, ಮೈಸೂರು ಮತ್ತು ಬೆಳಗಾವಿಯಲ್ಲೂ ಸಹ ಗಾಳಿಯ ಗುಣಮಟ್ಟ 170ಕ್ಕಿಂತ ಜಾಸ್ತಿಯಾಗಿದೆ. ದಿನದಿಂದ ದಿನಕ್ಕೆ ಈ ನಗರಗಳ AQI ಕುಸಿಯುತ್ತಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ನೂರರ ಆಸುಪಾಸಿದ್ದ AQI  ತಾರಕಕ್ಕೆ!

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 173ಕ್ಕೆ ತಲುಪಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ. ಮೂರು ನಾಲ್ಕು ದಿನಗಳ ಹಿಂದೆ 100ರ ಆಸು ಪಾಸಿದ್ದ ಮಂಗಳೂರಿನ AQI, ಇಂದು 174ಕ್ಕೆ ತಲುಪಿದ್ದು ಆಶ್ಚರ್ಯ ಉಂಟು ಮಾಡಿದೆ.

ಜೊತೆಗೆ ಮೈಸೂರಿನ AQI 176, ಬೆಳಗಾವಿಯ AQI 178 ಆಗಿದ್ದು, ಈ ನಗರಗಳು ಬೆಂಗಳೂರನ್ನೂ ಮೀರಿಸಿವೆ. ಈ ಹದಗೆಟ್ಟ ವಾತಾವರಣ ಹೀಗೆ ಮುಂದುವರೆದರೆ ದೆಹಲಿಯಂತೆಯೇ ಆಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ. ಈ ಕಲುಷಿತ ಗಾಳಿಯಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –174
  • ಮಂಗಳೂರು-174
  • ಮೈಸೂರು –176
  • ಬೆಳಗಾವಿ – 178
  • ಕಲಬುರ್ಗಿ-139
  • ಶಿವಮೊಗ್ಗ – 162
  • ಬಳ್ಳಾರಿ – 168
  • ಹುಬ್ಬಳ್ಳಿ- 146
  • ಉಡುಪಿ –166
  • ವಿಜಯಪುರ –150

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *