Headlines

Budget 2026: ಡಿಫೆನ್ಸ್​ನಿಂದ ಹಿಡಿದು ಚಿಪ್​ವರೆಗೆ ಭಾರತವನ್ನು ತಂತ್ರಜ್ಞಾನ ದೈತ್ಯವಾಗಿಸಬಲ್ಲ ಬಜೆಟ್ – Kannada News | Union Budget focusing on making India tech super power

ನವದೆಹಲಿ, ಫೆಬ್ರುವರಿ 1: ಜಾಗತಿಕ ಅನಿಶ್ಚಿತ ವಾತಾವರಣದ ನಡುವೆ ಬೆಳ್ಳಿ ಚುಕ್ಕಿಯಂತೆ ಮಿನುಗುತ್ತಿರುವ ಭಾರತದ ಆರ್ಥಿಕ ಶಕ್ತಿಗೆ ಇನ್ನಷ್ಟು ಮೆರಗು ಕೊಡಲು ನಿರ್ಮಲಾ ಸೀತಾರಾಮನ್ ಬಜೆಟ್ (Union budget) ಮಂಡಿಸಿದ್ದಾರೆ. ಭಾರತವನ್ನು ಟೆಕ್ ಸೂಪರ್ ಪವರ್ ಆಗಿಸುವತ್ತ ಪೂರಕವಾದ ಬಜೆಟ್ ಅನ್ನು ಮಂಡಿಸುವ ಪ್ರಯತ್ನ ಮಾಡಿದ್ದಾರೆ ಹಣಕಾಸು ಸಚಿವೆ. ಸೆಮಿಕಂಡಕ್ಟರ್, ರೇರ್ ಅರ್ಥ್, ಡಿಫೆನ್ಸ್ ಇತ್ಯಾದಿ ಆಯಕಟ್ಟಿನ ಕ್ಷೇತ್ರಗಳಲ್ಲಿ ವಿದೇಶೀ ಅವಲಂಬನೆ ತಪ್ಪಿಸಿ ಪೂರ್ಣ ಸ್ವಾವಂಬನೆಯ ಭಾರತವನ್ನು ನಿರ್ಮಿಸುವ ಗುರಿ ಇಡಲಾಗಿದೆ.

ಡಿಫೆನ್ಸ್ ಸೆಕ್ಟರ್​ಗೆ ಪುಷ್ಟಿ

ನ್ಯಾಷನಲ್ ಮ್ಯಾನುಫ್ಯಾಕ್ಚರಿಂಗ್ ಮಿಷನ್ ರೂಪಿಸಲಾಗಿದೆ. ಹೈಸ್ಪೀಡ್ ರೈಲುಗಳು, ಡ್ರೋನ್, ಅತ್ಯಾಧುನಿಕ ಮ್ಯೂನಿಶನ್​ಗಳು ಎಲ್ಲವನ್ನೂ ದೇಶೀವಾಗಿ ತಯಾರಿಸಲಾಗುವುದು. ಇವುಗಳಿಗೆ ನೀಡಲಾದ ಅನುದಾನದಲ್ಲಿ ಶೇ 20ರಷ್ಟು ಹೆಚ್ಚಳ ಆಗಿದೆ.

ಇದನ್ನೂ ಓದಿ: ರೈತರಿಗೆ ಗುಡ್​​​ ನ್ಯೂಸ್​​​ ನೀಡಿದ ಕೇಂದ್ರ: ಕರಾವಳಿ ಕೃಷಿಕರಿಗೆ ಬಂಪರ್​​​ ಕೊಡುಗೆ

ಎಐ ಮತ್ತು ಡೀಪ್​ಟೆಕ್ ಕ್ರಾಂತಿ

ಡಿಫೆನ್ಸ್ ಟೆಕ್ ಮತ್ತು ಡೀಪ್ ಟೆಕ್ ಸ್ಟಾರ್ಟಪ್​ಗಳಿಗೆ 10,000 ಕೋಟಿ ರೂ ಫಂಡ್ ಆಫ್ ಫಂಡ್ಸ್ ಪ್ರಕಟಿಸಲಾಗಿದೆ. ಸ್ವಂತವಾಗಿ ಎಐ ಅಭಿವೃದ್ಧಿ ಮತ್ತು ಡಾಟಾ ಸೆಕ್ಯೂರಿಟಿಗೆ ಒತ್ತು ಕೊಡಲಾಗಿದೆ.

ಕ್ರಿಟಿಕಲ್ ಮಿನರಲ್​ಗಳ ಲಭ್ಯತೆ

ದೇಶೀಯವಾಗಿ ರೇರ್ ಅರ್ಥ್ ಮೈನಿಂಗ್ ಮತ್ತು ಪ್ರೋಸಸಿಂಗ್​ಗೆ ಒತ್ತು ಕೊಡಲಾಗಿದೆ. ರೇರ್ ಅರ್ಥ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಲಿಥಿಯಂ, ಕೊಬಾಲ್ಟ್ ಬ್ಯಾಟರಿಗಳಿಗೆ ಆಮದು ಸುಂಕ ಕಡಿತಗೊಳಿಸಲಾಗಿದೆ. ಈ ಕ್ಷೇತ್ರದಲ್ಲಿ ಚೀನಾ ಮೇಲಿನ ಅವಲಂಬನೆ ತಪ್ಪಿಸುವ ಪ್ರಯತ್ನವಾಗಿದೆ.

ಎಂಎಸ್​ಎಂಇಗಳಿಗೆ ಪುಷ್ಟಿ

ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಿಗೆ ಕ್ರೆಡಿಟ್ ಗ್ಯಾರಂಟಿ ಮಿತಿಯನ್ನು 10 ಕೋಟಿ ರೂಗೆ ಏರಿಸಲಾಗಿದೆ. ಹಿಂದಿನ ಬಜೆಟ್​ನಲ್ಲಿ ನೀಡಲಾಗಿದ್ದಕ್ಕಿಂತ ಎರಡು ಪಟ್ಟು ಹೆಚ್ಚಿದೆ. ನಗರ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್ ಸ್ಥಾಪಿಸಲಾಗಿದೆ. ಪಾದರಕ್ಷೆ ಮತ್ತು ಲೆದರ್ ಸೆಕ್ಟರ್​ನಲ್ಲಿ 22 ಲಕ್ಷ ಉದ್ಯೋಗಗಳ ಸೃಷ್ಟಿಯಾಗಲು ಸ್ಕೀಮ್ ರಚಿಸಲಾಗಿದೆ.

ಇದನ್ನೂ ಓದಿ: Budget 2026: ಕೇಂದ್ರ ಬಜೆಟ್ 2026: ಯಾವುದು ಅಗ್ಗ, ಯಾವುದು ದುಬಾರಿ?

ವಿತ್ತೀಯ ಕೊರತೆ ಶೇ. 4.3ಕ್ಕೆ ಸೀಮಿತ

ಭಾರತದ ವಿತ್ತೀಯ ಕೊರತೆಯ ಗುರಿಯನ್ನು ಶೇ. 4.4ರಿಂದ ಶೇ. 4.3ಕ್ಕೆ ಇಳಿಸಲಾಗಿದೆ. ಆರ್ಥಿಕ ಬೆಳವಣಿಗೆಯ ವೇಗ ಶೇ. 7.4 ಎಂದು ಅಂದಾಜಿಸಲಾಗಿದೆ.

ಹಾಗೆಯೇ, ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0, ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್, ಬಯೋಫಾರ್ಮಾ, 20 ಹೊಸ ರಾಷ್ಟ್ರೀಯ ಜಲಮಾರ್ಗ ಇತ್ಯಾದಿ ಅನೇಕ ಘೋಷಣೆಗಳನ್ನ ಬಜೆಟ್​ನಲ್ಲಿ ಮಾಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *