Headlines

Budget 2026-27: ದಕ್ಷಿಣ ಭಾರತದಲ್ಲಿ ಎಲ್ಲೆಲ್ಲೂ ಕಾಣ ಸಿಗುವ ಕಾಫಿ ವೆಂಡಿಂಗ್​ ಮಶಿನ್ ಇನ್ನುಂದೆ ದುಬಾರಿ! – Kannada News | Budget 2026 27 Impact: Essential Medicines, EVs Cheaper; Coffee, Luxury Goods Costlier

ಕಾಫಿ ರೋಸ್ಟಿಂಗ್, ಬ್ರೂಯಿಂಗ್ ಮತ್ತು ವೆಂಡಿಂಗ್ ಯಂತ್ರಗಳ ದರ ಹೆಚ್ಚಳImage Credit source: Google

ನವದೆಹಲಿ, ಫೆ. 1: 2026-27ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತಕ್ಕೆ ಓತ್ತು ನೀಡಿದ್ದು, ಆರ್ಥಿಕತೆಗೆ ಉತ್ತೇಜನ ನೀಡುವ ಹಾಗೂ ಗ್ರಾಹಕರು ಮತ್ತು ಸಾಮಾನ್ಯ ತೆರಿಗೆದಾರರಿಗೆ ಪರಿಹಾರ ಒದಗಿಸುವ ಹಲವು ಘೋಷಣೆಗಳನ್ನು ಮಾಡಿದೆ. ಸುಂಕದ ಏರಿಳಿಕೆಯ ಕಾರಣಕ್ಕೆ ಹಲವು ವಸ್ತುಗಳ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಿದ್ದು, ಅಗತ್ಯ ಔಷಧಿಗಳು, ಎಲೆಕ್ಟ್ರಿಕ್ ವಾಹನಗಳು (EV), ಚರ್ಮ ಉತ್ಪನ್ನಗಳು ಸೇರಿದಂತೆ ಹಲವು ವಸ್ತುಗಳ ಮೇಲಿನ ಸುಂಕ ಮತ್ತು ಕಸ್ಟಮ್ಸ್ ಡ್ಯೂಟಿಯನ್ನು ಸರ್ಕಾರ ಕಡಿತಗೊಳಿಸಿದೆ. ಇದರಿಂದ ಈ ವಸ್ತುಗಳು ಗ್ರಾಹಕರಿಗೆ ಕಡಿಮೆ ದರದಲ್ಲಿ ಲಭ್ಯವಾಗಲಿವೆ. ಆದರೆ ಐಷಾರಾಮಿ ವಸ್ತುಗಳಾದ ಗಡಿಯಾರಗಳು ಮತ್ತು ಮದ್ಯಪಾನೀಯಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲಾಗಿದ್ದು, ಅವುಗಳ ಬೆಲೆ ಹೆಚ್ಚಾಗಲಿದೆ.

ಯಾವುದರ ಬೆಲೆ ಇಳಿಕೆ?

ವಿಮಾನ ಭಾಗಗಳು, ಮೈಕ್ರೋವೇವ್ ಭಾಗಗಳು, ಅಗತ್ಯ ಔಷಧಿಗಳು ಮತ್ತು ಕೆಲವು ಆಮದು ವಸ್ತುಗಳ ಮೇಲಿನ ಕಸ್ಟಮ್ಸ್ ಡ್ಯೂಟಿಯನ್ನು ಕಡಿತಗೊಳಿಸಲಾಗಿದೆ. ಇದರಿಂದ ಮೈಕ್ರೋವೇವ್ ಓವನ್‌ಗಳು, EV ಬ್ಯಾಟರಿಗಳು, ಸೌರ ಫಲಕಗಳು ಮತ್ತು ವಿಮಾನ ಭಾಗಗಳ ಬೆಲೆ ಇಳಿಕೆಯಾಗಲಿದೆ. ಮಧುಮೇಹ ಮತ್ತು ಕ್ಯಾನ್ಸರ್ ರೋಗಿಗಳ ಔಷಧಿಗಳನ್ನು ಒಳಗೊಂಡಂತೆ ಒಟ್ಟು 17 ಔಷಧಿಗಳ ಬೆಲೆ ಕಡಿಮೆಯಾಗಲಿದೆ. ಭಾರತದಲ್ಲಿ ತಯಾರಾಗುವ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ದರವೂ ಇಳಿಯುವ ಸಾಧ್ಯತೆ ಇದೆ. ವೈಯಕ್ತಿಕ ಬಳಕೆಗೆ ಆಮದು ಮಾಡಿಕೊಳ್ಳುವ ಕೆಲವು ವಸ್ತುಗಳ ಬೆಲೆಯೂ ಕಡಿಮೆ ಆಗಲಿದೆ. ಬಜೆಟ್ 2026 ಭಾಷಣದಲ್ಲಿ ಚರ್ಮ ಉದ್ಯಮದ ರಫ್ತನ್ನು ಉತ್ತೇಜಿಸುವ ಉದ್ದೇಶದಿಂದ ಕೆಲವು ನಿರ್ದಿಷ್ಟ ಇನ್‌ಪುಟ್‌ಗಳಿಗೆ ಸುಂಕರಹಿತ ಆಮದು ಸೌಲಭ್ಯವನ್ನು ಸಚಿವರು ಪ್ರಸ್ತಾಪಿಸಿದ್ದಾರೆ. ಇದರಿಂದ ಶೇ.50 ಅಮೆರಿಕದ ತೆರಿಗೆ ಹೊರೆ ಅನುಭವಿಸುತ್ತಿರುವ ಚರ್ಮ ರಫ್ತುಗಾರರಿಗೆ ನೆರವಾಗಲಿದೆ.

ಇದನ್ನೂ ಓದಿ: ಬೈಕ್​ ಅಪಘಾತ ಪರಿಹಾರ ವಿಮೆ ಹಣಕ್ಕಿಲ್ಲ ತೆರಿಗೆ; ಮಹತ್ವದ ಘೋಷಣೆ

ಯಾವುದರ ಬೆಲೆ ಹೆಚ್ಚಳ?

ಐಷಾರಾಮಿ ಗಡಿಯಾರಗಳು ಮತ್ತು ಆಮದು ಮದ್ಯಪಾನೀಯಗಳು ದುಬಾರಿಯಾಗಲಿವೆ. ಸಿಗರೇಟು, ಬೀಡಿ, ಪಾನ್ ಮಸಾಲಾ ಮತ್ತು ಗುಟ್ಕಾ ಸೇರಿದಂತೆ ಪಾಪ ವಸ್ತುಗಳ ಮೇಲೂ ತೆರಿಗೆ ಹೆಚ್ಚಾಗಲಿದೆ. ಕಾಫಿ ರೋಸ್ಟಿಂಗ್, ಬ್ರೂಯಿಂಗ್ ಮತ್ತು ವೆಂಡಿಂಗ್ ಯಂತ್ರಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಸರ್ಕಾರ ಹಿಂಪಡೆದಿರುವುದರಿಂದ, ಇವುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ. ಅಮೋನಿಯಂ ಫಾಸ್ಫೇಟ್ ಮತ್ತು ಅಮೋನಿಯಂ ನೈಟ್ರೋ-ಫಾಸ್ಫೇಟ್ ಆಮದು ಮೇಲಿನ ಶುಲ್ಕ ವಿನಾಯಿತಿಯನ್ನು ತೆಗೆದುಹಾಕಿರುವುದರಿಂದ, ಕೆಲವು ಗೊಬ್ಬರಗಳ ಬೆಲೆ ಕೂಡ ಹೆಚ್ಚಾಗಲಿದೆ. ಆಮದು ಮಾಡಿಕೊಳ್ಳುವ ದೂರದರ್ಶನ ಉಪಕರಣಗಳು, ಕ್ಯಾಮೆರಾಗಳು, ಚಲನಚಿತ್ರ ನಿರ್ಮಾಣಕ್ಕೆ ಬಳಸುವ ಸಾಧನಗಳು ಹಾಗೂ ಫೋಟೋಗ್ರಫಿ, ಚಿತ್ರೀಕರಣ ಮತ್ತು ಧ್ವನಿ ದಾಖಲು ಉಪಕರಣಗಳ ಬೆಲೆಯೂ ಹೆಚ್ಚಾಗಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:59 pm, Sun, 1 February 26

Source link

Leave a Reply

Your email address will not be published. Required fields are marked *