ಚಿಕ್ಕಬಳ್ಳಾಪುರದಲ್ಲೊಂದು ಅಪರೂಪದ ಜಾತ್ರೆ: ಕಹಿ ಬೇವಿನ ಸೊಪ್ಪೇ ಇಲ್ಲಿ ಪ್ರಸಾದ
ಚಿಕ್ಕಬಳ್ಳಾಪುರ, ಏಪ್ರಿಲ್ 02: ಅಲ್ಲೊಂದು ಅಪರೂಪದಲ್ಲಿ ಅಪರೂಪದ ಜಾತ್ರೆ (Jatre) ನಡೆಯುತ್ತೆ. ಆ ಜಾತ್ರೆಯಲ್ಲಿ ಕಹಿ ಬೇವು (Neem), ಬೆಲ್ಲದಂತೆ ಸಿಹಿಯಾಗುತ್ತಂತೆ. ಇದರಿಂದ ಜನ ಬೃಹತ್ ಬೇವಿನ ಮರವೇರಿ ಕಹಿ ಬೇವಿನ ಸೊಪ್ಪು ತಿನ್ನುತ್ತಾರೆ. ಎಲ್ಲಡೆ ದೇವರ ಪ್ರಸಾದವಾಗಿ ಸಿಹಿ ಲಾಡು, ಸ್ವೀಟ್, ಅನ್ನಸಂತರ್ಪಣೆ ಮಾಡಿದರೆ, ಇಲ್ಲಿ ಮಾತ್ರ ಕಹಿ ಬೇವಿನ ಸೊಪ್ಪು ಪ್ರಸಾದವಾಗಿ ನೀಡಲಾಗುತ್ತದೆ. ಈ ಜಾತ್ರೆಯಲ್ಲಿ ಬೇವಿನ ಸೊಪ್ಪೇ ಪ್ರಸಾದ ಚಿಕ್ಕಬಳ್ಳಾಪುರ ಜಿಲ್ಲೆಯ ನೂತನ ಮಂಚೇನಹಳ್ಳಿ ತಾಲೂಕಿನ ಮೀಣಕನಗುರ್ಕಿ ಗ್ರಾಮದಲ್ಲಿ ಮಹೇಶ್ವರಮ್ಮ ಜಾತ್ರೆ ಸದ್ಯ…