ವಿನಯ್ ಕುಲಕರ್ಣಿ ಪರ ಧಾರವಾಡದಲ್ಲಿ ಮೌನ ಕ್ರಾಂತಿ; ಕೈಗೆ ಕಪ್ಪು ಪಟ್ಟಿ ಧರಿಸಿ ಬೆಂಬಲಿಗರ ಮೆರವಣಿಗೆ! – Kannada News | Vinay Kulkarni Supporters Silent Protest in Dharwad Against Conspiracy Allegations
ಧಾರವಾಡ, ಏಪ್ರಿಲ್ 25: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿ, ಇಂದು ನಗರದಲ್ಲಿ ಅವರ ಬೆಂಬಲಿಗರು ಮೌನ ಮೆರವಣಿಗೆ ಹಮ್ಮಿಕೊಂಡಿದ್ದರು. ಕಲಾಭವನದ ಬಳಿ ಜಮಾಯಿಸಿರುವ ನೂರಾರು ಅಭಿಮಾನಿಗಳು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು, ಕಲಾಭವನದಿಂದ ಕೆಸಿಸಿ ಬ್ಯಾಂಕ್‌ವರೆಗೆ ಪ್ರತಿಭಟನೆ ನಡೆಸಿದ್ದಾರೆ. ಕುಲಕರ್ಣಿ ಅವರು ನಿರಪರಾಧಿ ಎಂದು ಪ್ರತಿಪಾದಿಸಿರುವ ಬೆಂಬಲಿಗರು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source…