Oxfam Report: ವಿಶ್ವದ 400 ಕೋಟಿ ಜನರದ್ದಕ್ಕೆ ಸಮ ಈ 12 ಮಂದಿಯ ಶ್ರೀಮಂತಿಕೆ – Kannada News | World top 12 rich people have more wealth than half of world population
ನವದೆಹಲಿ, ಜನವರಿ 20: ಕಳೆದ ವರ್ಷ (2025) ಜಗತ್ತಿನಲ್ಲಿ ಬಿಲಿಯನೇರ್ಗಳ (Billionaires) ಸಂಖ್ಯೆ 3,000 ಗಡಿ ದಾಟಿದೆ. ಇದು ಹೊಸ ದಾಖಲೆಯಾಗಿದೆ. ಈ ಇಷ್ಟೂ ಬಿಲಿಯನೇರ್ಗಳ ಒಟ್ಟೂ ಸಂಪತ್ತು 18.3 ಟ್ರಿಲಿಯನ್ ಡಾಲರ್ನಷ್ಟು ಇರಬಹುದು ಎನ್ನಲಾಗಿದೆ. ಸ್ವಿಟ್ಜರ್ಲ್ಯಾಂಡ್ನ ಡಾವೊಸ್ನಲ್ಲಿ ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂ ವಾರ್ಷಿಕ ಸಭೆಗೆ ಮುನ್ನ ಆಕ್ಸ್ಫ್ಯಾಮ್ (Oxfam) ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ಬಿಲಿಯನೇರ್ಗಳ ಮಾಹಿತಿ ಕೊಡಲಾಗಿದೆ. ಈ ಮೂರು ಸಾವಿರ ಬಿಲಿಯನೇರ್ಗಳಿರುವ ಒಟ್ಟೂ ಆಸ್ತಿಯು ಚೀನಾದಂತಹ ದೈತ್ಯ ದೇಶದ ಜಿಡಿಪಿಗೆ ಸಮವಾಗಿದೆ….