Headlines

ಆಟೋ ಸೈಡ್‌ಗೆ ಹಾಕಿ ಎಂದ ಅಣ್ತಾಮ್ಮಾಸ್ ಮೇಲೆ ಸೈಯದ್ ಜಮೀರ್ ಸಹೋದರರಿಂದ ಮಾರಣಾಂತಿಕ ಹಲ್ಲೆ – Kannada News | A Muslim Brothers brutal assaults On Hindu family In bhimalli village at Kalaburagi

ಕಲಬುರಗಿ, (ಏಪ್ರಿಲ್ 25): ಸಹೋದರಿಬ್ಬರು ತಮ್ಮ ಸಹೋದರಿಯನ್ನ ಬಿಡಲು ಆಕೆಯ ಗಂಡನ ಊರಿಗೆ ಹೋಗಿದ್ದು, ಈ ವೇಳೆ ರಸ್ತೆ ಮೇಲೆ ನಿಲ್ಲಿಸಲಾಗಿದ್ದ ಆಟೋಗಳನ್ನು ಸ್ವಲ್ಪ ಸೈಡಿಗೆ ಸರಿಸಿ ಎಂದು ಹೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಕಲಬುರಗಿ (Kalaburagi) ತಾಲೂಕಿನ ಭೀಮಳ್ಳಿ ಗ್ರಾಮದಲ್ಲಿ ನಡೆದಿದೆ. ತೋಟೆಂದ್ರ ಮತ್ತು ಸುನಿಲ್ ಸಹೋದರ ಮೇಲೆ ಆಟೋ ಮಾಲೀಕ ಸೈಯದ್ ಜಮೀರ್ ಹಾಗೂ ಆತನ ಸಹೋದರರಾದ ಸೈಫಾಬ್ ಒಂಟಿ, ಆರಿಫ್, ಆಸಿಫ್, ಇಮ್ರಾನ್ ಸೇರಿಕೊಂಡು ಕಟ್ಟಿಗೆಯಿಂದ ಮನಸ್ಸೋ ಇಚ್ಛೆ ಮಾರಣಾಂತಿಕ ಹಲ್ಲೆ…

Read More

ಸಮುದ್ರ ಇದ್ರೂ ಮಂಗಳೂರಿನಲ್ಲಿ ನೀರಿಗೆ ಬರ: ವಾಹನಗಳನ್ನ ತೊಳೆಯದಂತೆ ಸೂಚನೆ – Kannada News | Water Crisis: Thumbay Dam Levels Drop, Bi Daily Supply From May 1st

ಮಂಗಳೂರು, ತುಂಬೆ ವೆಂಟೆಡ್ ಡ್ಯಾಂImage Credit source: tv9 kannada ಮಂಗಳೂರು, ಏಪ್ರಿಲ್​ 25: ರಾಜ್ಯದಲ್ಲಿ ಕುಡಿಯುವ ನೀರಿಗೆ (drinking water) ಬರ ಎದುರಾಗಿದೆ. ಕಡಲನಗರಿ ಮಂಗಳೂರಿನಲ್ಲೂ (mangaluru) ನೀರಿನ ಕೊರತೆ ಕಂಡುಬಂದಿದೆ. ನಗರಕ್ಕೆ ನೀರು ಪೊರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿತವಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಎರಡು ದಿನಕ್ಕೊಮ್ಮೆ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ನಿರ್ಧಾರ ಮಾಡಿದೆ. ಕರಾವಳಿಯಲ್ಲಿ ಸದ್ಯ ಬಿಸಿಲ ಝಳ ಹೆಚ್ಚುತ್ತಿದೆ. ಬೇಸಿಗೆಯ ಬೇಗೆಯಿಂದ ಜನ…

Read More

ರಾಹುಲ್ ಗಾಂಧಿಯ ಪ್ರತಿಕೃತಿ ದಹನದ ವೇಳೆ ಬಿಜೆಪಿ ಶಾಸಕಿಗೆ ಗಾಯ – Kannada News | BJP MLA Anupama Jaiswal injured in Bahraich during effigy burning watch video

ನವದೆಹಲಿ, ಏಪ್ರಿಲ್ 25: ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು (Women’s Reservation Bill) ಬೆಂಬಲಿಸಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಪ್ರತಿಕೃತಿ ದಹನ ಮಾಡುವಾಗ ಸದರ್ ಶಾಸಕಿ ಅನುಪಮಾ ಜೈಸ್ವಾಲ್ ಅವರ ಮೈಗೆ ಸ್ವಲ್ಪ ಬೆಂಕಿ ತಾಗಿದೆ. ಅವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು, ಗಂಭೀರ ಹಾನಿಯಿಂದ ಪಾರಾಗಿದ್ದಾರೆ. ನಾರಿ ವಂದನ್ ಕಾಯ್ದೆ ಅಭಿಯಾನದಡಿ ಈ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸಿ ವಿರೋಧ ಪಕ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ ಸಮಯದಲ್ಲಿ ಕಾಂಗ್ರೆಸ್ ನಾಯಕ…

Read More

ಇತಿಹಾಸ ನಿರ್ಮಿಸಿದ ಕರ್ನಲ್ ನೊರೀನ್; ಬೆಂಗಳೂರಿನ MEG ತರಬೇತಿ ಬೆಟಾಲಿಯನ್ ಮುನ್ನಡೆಸುತ್ತಿರುವ ಮೊದಲ ಮಹಿಳಾ ಅಧಿಕಾರಿ! – Kannada News | Colonel Noreen John: First Woman to Command Madras Sappers MEG Training Battalion

ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರು ಕೇವಲ ಭಾಗವಹಿಸುವುದು ಮಾತ್ರವಲ್ಲದೆ, ಪ್ರಮುಖ ವಿಭಾಗಗಳನ್ನು ಮುನ್ನಡೆಸುವ ಮೂಲಕ ಇತಿಹಾಸ ನಿರ್ಮಿಸುತ್ತಿದ್ದಾರೆ. ಈ ಹಾದಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (MEG) ಕೇಂದ್ರದ ತರಬೇತಿ ಬೆಟಾಲಿಯನ್ ಅನ್ನು ಕಮಾಂಡ್ ಮಾಡಲು ಕರ್ನಲ್ ನೊರೀನ್ ಶಾನೆಟ್ ಜಾನ್ ಅವರನ್ನು ನೇಮಿಸಲಾಗಿದೆ. ಈ ಮೂಲಕ, ಸೈನ್ಯದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಎಂಜಿನಿಯರಿಂಗ್ ಘಟಕವಾದ ‘ಮದ್ರಾಸ್ ಸಪ್ಪರ್ಸ್’ನ ತರಬೇತಿ ಬೆಟಾಲಿಯನ್ ಅನ್ನು ಮುನ್ನಡೆಸುತ್ತಿರುವ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ….

Read More

‘ಒದೆ ತಿಂತೀಯ, ಅವನನ್ನ ಬದುಕೋಕೆ ಬಿಡಲ್ಲ’: ಚೇತನ್ ವಿರುದ್ಧ ಸಾರಾ ಕೆಂಡ – Kannada News | Sa Ra Govindu Launches Sharp verbal Attack Against Chetan Ahimsa for talking about Dr Rajkumar

ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ ನಿನ್ನೆ ಡಾ ರಾಜ್​ಕುಮಾರ್ (Dr Rajkumar) ಸಮಾಧಿಯ ಬಗ್ಗೆ ಮಾಡಿರುವ ಪೋಸ್ಟ್​​ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಚೇತನ್ ಅಹಿಂಸ ವಿರುದ್ಧ ಈಗಾಗಲೇ ಕೆಲ ಕನ್ನಡಪರ ಸಂಘಟನೆಗಳು, ರಾಜ್​ಕುಮಾರ್ ಅಭಿಮಾನಿಗಳ ಸಂಘಗಳು ಪೊಲೀಸ್ ಠಾಣೆಯಲ್ಲಿ ಮತ್ತು ಚಲನಚಿತ್ರ ಸಂಘಗಳಿಗೆ ದೂರು ನೀಡಿವೆ. ಇದೀಗ ರಾಜ್​ಕುಮಾರ್ ಸಂಘದ ಅಧ್ಯಕ್ಷರಾಗಿದ್ದ ಸಾರಾ ಗೋವಿಂದು ಅವರು ಈ ಬಗ್ಗೆ ಮಾತನಾಡಿದ್ದು, ಚೇತನ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿರುವ ಜೊತೆಗೆ ಚೇತನ್ ಅವರಿಗೆ ನೇರವಾಗಿ, ಬಹಿರಂಗವಾಗಿ ಎಚ್ಚರಿಕೆ…

Read More

ಶಿವಮೊಗ್ಗ: ಲವ್ ವಿಚಾರಕ್ಕೆ ಯುವಕನ ಮೇಲೆ ಡೆಡ್ಲಿ ಅಟ್ಯಾಕ್; ತಲೆಯಲ್ಲೇ ಮಚ್ಚು ಬಿಟ್ಟು ಪರಾರಿ – Kannada News | Machete Attack: Teen Critically Injured in Love Affair Violence

ಶಿವಮೊಗ್ಗ, ಏಪ್ರಿಲ್​ 25: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ (shivamogga) ಮತ್ತೆ ನೆತ್ತರು ಹರಿದಿದೆ. ಲವ್ (Love)​​ ವಿಚಾರಕ್ಕೆ ಶುರುವಾದ ಜಗಳವೊಂದು ಕೊಲೆ ಯತ್ನದಲ್ಲಿ ಅಂತ್ಯವಾಗಿದ್ದು, 17 ವರ್ಷದ ಯುವಕನ ತಲೆಯನ್ನ ಮಚ್ಚಿನಿಂದ ಸೀಳಿ ವಿಕೃತಿ ಮೆರೆಯಲಾಗಿದೆ. ತಲೆಯಲ್ಲೇ ಮಚ್ಚು ಸಿಲುಕಿಕೊಂಡ ಸ್ಥಿತಿಯಲ್ಲಿ ಯುವಕ ಆಸ್ಪತ್ರೆಗೆ ದಾಖಲಾದ ಘಟನೆ ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ. ನಡೆದಿದ್ದೇನು? ಶಿವಮೊಗ್ಗದ ವಾದಿ ಎ ಹುದಾ ಬಡಾವಣೆಯಲ್ಲಿ ಲವ್​​ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಭೀಕರ ಘಟನೆಯೊಂದು ನಡೆದಿದೆ. ಆರೋಪಿ ಸೊಹೇಲ್ ಎಂಬಾತನಿಗೆ ಯುವತಿಯೊಬ್ಬಳ…

Read More

ಪೊಲೀಸಪ್ಪನ ಪ್ರೇಮ ಪುರಾಣ; ಕಾನ್​ಸ್ಟೆಬಲ್​ನ​ ಹೆಂಡತಿ, ಮಗುವಿಗೆ ಚಾಕುವಿನಿಂದ ಇರಿದು ಕೊಂದ ಪ್ರೇಯಸಿ – Kannada News | Chhattisgarh Constable’s Lover kills His Wife and Son in house, Daughters Critical

ರಾಯ್ಪುರ, ಏಪ್ರಿಲ್ 25: ಛತ್ತೀಸ್​​ಗಢದಲ್ಲಿ ಪೊಲೀಸ್ ಕಾನ್​ಸ್ಟೆಬಲ್​ನ ಲವ್ ಸ್ಟೋರಿಗೆ (Love Story) ಆತನ ಇಡೀ ಕುಟುಂಬವೇ ಛಿದ್ರವಾಗಿದೆ. ಮದುವೆಯಾಗಿ, ಹೆಂಡತಿಗೆ ಮೂರು ಮಕ್ಕಳನ್ನು ಕರುಣಿಸಿದ್ದರೂ ಇನ್ನೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದ ಕಾನ್​ಸ್ಟೆಬಲ್ ಆಕೆಯ ಮನೆಯಲ್ಲೇ ಇರುತ್ತಿದ್ದ. ಇದು ಆತನ ಹೆಂಡತಿಗೂ ಗೊತ್ತಿತ್ತು. ಆದರೆ, ಏನೂ ಮಾಡಲಾಗದ ಸ್ಥಿತಿಯಲ್ಲಿದ್ದ ಆಕೆ ಅಸಹಾಯಕಳಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದಳು. ಆತ ತನ್ನ ಮನೆಯಲ್ಲಿದ್ದಾಗಲೂ ಆ ಪ್ರೇಯಸಿ ಆಗಾಗ ಬಂದು ಆತನ ಹೆಂಡತಿ, ಮಕ್ಕಳ ಮುಂದೆಯೇ ಆತನೊಂದಿಗೆ ಸಲ್ಲಾಪ ನಡೆಸುತ್ತಿದ್ದಳು. ಮದುವೆಯಾಗಿ 3…

Read More

DC vs PBKS: ಡೆಲ್ಲಿ ಬೌಲರ್​ ಲುಂಗಿ ಎನ್​ಗಿಡಿಗೆ ಗಂಭೀರ ಗಾಯ; ಆಸ್ಪತ್ರೆಗೆ ರವಾನೆ – Kannada News | Lungi Ngidi Suffers Serious Head Injury During Match; IPL Future in Doubt for DC Bowler

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಮಹಾ ಅವಘಡವೊಂದು ಸಂಭವಿಸಿದೆ. ಕ್ಯಾಚ್ ಹಿಡಿಯುವ ಯತ್ನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ವೇಗದ ಬೌಲರ್ ಲುಂಗಿ ಎನ್​ಗಿಡಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಂಜಾಬ್ ಬ್ಯಾಟರ್ ಪ್ರಿಯಾಂಶ್ ಆರ್ಯ ನೀಡಿದ ಕ್ಯಾಚ್ ಹಿಡಿಯುವ ಯತ್ನದಲ್ಲಿ ಎನ್​ಗಿಡಿ ಅವರ ತಲೆ ನೆಲಕ್ಕೆ ಜೋರಾಗಿ ಅಪ್ಪಳಿಸಿತು. ಇದರಿಂದ ಎನ್​ಗಿಡಿ ಮೈದಾನದಲ್ಲೇ ಬಿದ್ದು ನೋವಿನಲ್ಲಿ ನರಳಾಡಲಾರಂಬಿಸಿದರು. ಎನ್​ಗಿಡಿ ಅವರ ಗಾಯದ ತೀವ್ರತೆ ಎಷ್ಟಿತ್ತೆಂದರೆ ಅವರಿಗೆ ಮೇಲೇಳಲು…

Read More

May Horoscope: ಮೇ ತಿಂಗಳ ಅದೃಷ್ಟದ ರಾಶಿಗಳು; ಈ 4 ರಾಶಿಯವರಿಗೆ ಕಾದಿದೆ ಭಾರೀ ಆರ್ಥಿಕ ಲಾಭ! – Kannada News | May 2026 Horoscope: Lucky Zodiac Signs and Financial Success Predictions

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸಂಚಾರವು ಮನುಷ್ಯನ ಜೀವನದ ಮೇಲೆ ನಿರಂತರ ಪ್ರಭಾವ ಬೀರುತ್ತದೆ. 2026ರ ಮೇ ತಿಂಗಳು ಕೆಲವು ರಾಶಿಯ ವ್ಯಕ್ತಿಗಳಿಗೆ ಸುವರ್ಣ ಕಾಲವೆಂದೇ ಹೇಳಬಹುದು. ಈ ತಿಂಗಳು ಸಂಭವಿಸುವ ಪ್ರಮುಖ ಗ್ರಹಗಳ ಪಥ ಬದಲಾವಣೆಯು ಕೆಲವು ರಾಶಿಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದಲ್ಲದೆ, ಜೀವನದಲ್ಲಿ ನೆಮ್ಮದಿ ಮತ್ತು ಯಶಸ್ಸನ್ನು ತರಲಿವೆ. ಆ ಅದೃಷ್ಟವಂತ ರಾಶಿಗಳ ವಿವರ ಇಲ್ಲಿದೆ. ಮಿಥುನ ರಾಶಿ ಅನಿರೀಕ್ಷಿತ ಬದಲಾವಣೆಗಳ ಪರ್ವ: ಮಿಥುನ ರಾಶಿಯವರಿಗೆ ಮೇ ತಿಂಗಳು ಸರ್ವತೋಮುಖ ಅಭಿವೃದ್ಧಿಯನ್ನು ತರಲಿದೆ. ಈ…

Read More

ಆಸ್ಪತ್ರೆಯಿಂದಲೇ ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ – Kannada News | CM Siddaramaiah Gives Minister D Sudhakar health update after met kims hospital Doctors

ಬೆಂಗಳೂರು, (ಏಪ್ರಿಲ್ 25): ಯೋಜನೆ ಮತ್ತು ಸಾಂಖಿತ ಇಲಾಖೆ ಸಚಿವ ಡಿ ಸುಧಾಕರ್ (Minister D Sudhakar) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಸದ್ಯ ಬೆಂಗಳೂರಿನ  (Bengaluru) ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿರುವ ಸುಧಾಕರ್ ಅವರ ಆರೋಗ್ಯ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah)  ಅವರು ಇಂದು ಏಪ್ರಿಲ್ 25) ಕಿಮ್ಸ್ ಆಸ್ಪತ್ರಗೆ ಭೇಟಿ ನೀಡಿ ಸುಧಾಕರ್ ಅವರ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಡಿ.ಸುಧಾಕರ್…

Read More