ಪ್ರಿಯಾಂಕ್ ಖರ್ಗೆ ಉಸ್ತುವಾರಿಯ ಕಲಬುರಗಿ ಜಿಲ್ಲೆ ಡಿಸಿ ಕಚೇರಿಯಲ್ಲೇ ಇಲ್ಲ ಕುಡಿಯುವ ನೀರು! ಶುದ್ಧ ನೀರಿನ ಘಟಕಗಳು ಬಂದ್ – Kannada News | Water Crisis Hits Kalaburagi DC Office: RO Plants Shut Down in Minister Priyank Kharge’s In charge District
ಕಲಬುರಗಿ, ಏಪ್ರಿಲ್ 25: ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಉಸ್ತುವಾರಿ ಸಚಿವರಾಗಿರುವ, ಅವರ ತವರು ಜಿಲ್ಲೆಯೂ ಆಗಿರುವ ಕಲಬುರಗಿಯ ಜಿಲ್ಲಾಡಳಿತ ಭವನದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸದೆ ಬಂದ್ ಆಗಿವೆ. ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ. ಜಿಲ್ಲೆಯ ‘ಶಕ್ತಿ ಕೇಂದ್ರ’ ಎಂದೇ ಕರೆಯಲ್ಪಡುವ ಈ ಕಚೇರಿಯಲ್ಲಿ ಹೊರಗಡೆ ಇರುವ ಒಂದು ಹಾಗೂ ಒಳಗಡೆ ಇರುವ ಎರಡು ಶುದ್ಧ ನೀರಿನ ಘಟಕಗಳು ಸಂಪೂರ್ಣವಾಗಿ ಕೆಟ್ಟು ಹೋಗಿವೆ. ಕಳೆದ ಎರಡು-ಮೂರು ತಿಂಗಳಿಂದ ನೀರು ಪೂರೈಕೆ ಇಲ್ಲದೆ…