ಆಟವಾಡುತ್ತಾ ಪಾತ್ರೆಯೊಳಗೆ ಸಿಲುಕಿದ್ದ ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು! – Kannada News | Thiruvananthapuram: Toddler Saved from Pot by Brave Kerala Rescuers
ತಿರುವನಂತಪುರಂ, ಏ.24: ಆಟವಾಡುತ್ತಿದ್ದಾಗ ಪಾತ್ರೆಯೊಳಗೆ ಸಿಲುಕಿಕೊಂಡಿದ್ದ ಪುಟ್ಟ ಮಗುವೊಂದನ್ನು ಕೇರಳದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಅತ್ಯಂತ ನಾಜೂಕಾಗಿ ರಕ್ಷಿಸಿದ್ದಾರೆ. ಇವರ ಈ ಸಮಯೋಚಿತ ಕಾರ್ಯಕ್ಕೆ ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಮನೆಯಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಅಡುಗೆ ಮನೆಯಲ್ಲಿದ್ದ ದೊಡ್ಡದಾದ ಅಲ್ಯೂಮಿನಿಯಂ ಪಾತ್ರೆಯೊಳಗೆ ಇಳಿದಿದೆ. ಆದರೆ, ಹೊರಬರಲು ಪ್ರಯತ್ನಿಸಿದಾಗ ಮಗುವಿನ ಸೊಂಟದ ಭಾಗ ಪಾತ್ರೆಯಲ್ಲಿ ಸಿಲುಕಿಕೊಂಡಿದೆ. ಮಗುವಿನ ಅಳು ಕೇಳಿ ಓಡಿ ಬಂದ ಪೋಷಕರು ಎಷ್ಟೇ ಪ್ರಯತ್ನಿಸಿದರೂ ಮಗುವನ್ನು ಹೊರತೆಗೆಯಲು…