ಶಾಲೆಗೆ ಹೋಗಲು ಬೇಜಾರಾಗಿ ಊರು ಸುತ್ತಿ ಅಪಹರಣದ ಕತೆ ಹೇಳಿದ ಸಹೋದರಿಯರು: ಪೊಲೀಸ್ ತನಿಖೆ ವೇಳೆ ಸತ್ಯ ಬಹಿರಂಗ – Kannada News | Bengaluru Sisters Fake Abduction to Skip School: Police Uncover Truth
ಬೆಂಗಳೂರು, ಫೆಬ್ರವರಿ 12: ಶಾಲೆಗೆ ಹೋಗಲು ಮನಸ್ಸಿಲ್ಲದ ಬಾಲಕಿಯರು ಅಪಹರಣ ಕತೆ ಕಟ್ಟಿ ಸಿಕ್ಕಿಬಿದ್ದಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ. ಮನೆಯಿಂದ ಸ್ಕೂಲ್ಗೆಂದು ಹೋಗಿದ್ದ 14 ಮತ್ತು 8 ವರ್ಷದ ಇಬ್ಬರು ಸಹೋದರಿಯರು ನಾಪತ್ತೆಯಾಗಿದ್ದಾರೆ. ಶಾಲೆ ಬಳಿ ಹಾದುಹೋಗುತ್ತಿದ್ದ ಬಾಲಕಿಯರ ವಿಚಾರಿಸಿದಾಗ ಅವರು ತರಗತಿಗಳಿಗೆ ಹಾಜರಾಗಿಲ್ಲವೆಂಬ ವಿಷಯ ಗೊತ್ತಾಗಿದೆ. ಪರಿಶೀಲನೆ ನಡೆಸಿದ ವೇಳೆ ಶಾಲೆಯ ಕ್ಯಾಂಪಸ್ನಲ್ಲಿ ಅವರ ಬ್ಯಾಗ್ ದೊರೆತಿದ್ದು, ಬಾಲಕಿಯರ ಪತ್ತೆ ಮಾತ್ರ ಆಗಿಲ್ಲ. ಇದರಿಂದ ಭಯಗೊಂಡ ಕುಟುಂಬಸ್ಥರು ಶಾಲಾ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ…