Headlines

ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್

ಕನ್ನಡದ ಹೀರೋ ದಿಗಂತ್ ಅವರು ‘ರುದ್ರ ಕಾಲ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ನಡೆದಿದೆ. ಈ ಸಿನಿಮಾ ವೇಳೆ ಮಾತನಾಡುವಾಗ ತೆಲುಗಿನ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರ ಹೇಗಿದೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ಸಮಂತಾ ಪತಿ ಪಾತ್ರದಲ್ಲಿ ದಿಗಂತ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ಜೊತೆ ಕೆಲಸ ಮಾಡುವ ಅನುಭವ ವಿವರಿಸಿರೋ ಅವರು, ‘ಸಮಂತಾ ಸೂಪರ್ ಕೂಲ್’ ಎಂದಿದ್ದಾರೆ. ಈ ಚಿತ್ರದ ಬಗ್ಗೆ ಅವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ….

Read More

KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಆಟೋ ಚಾಲಕರ ಹುಚ್ಚಾಟ – Kannada News | Drunk Auto Drivers Block KSRTC Bus, Create Ruckus Taking Selfies in Chikkamagaluru

ಚಿಕ್ಕಮಗಳೂರು, ಏಪ್ರಿಲ್​​ 24: ಕುಡಿದ ಅಮಲಿನಲ್ಲಿ KSRTC ಬಸ್​ ಅಡ್ಡಗಟ್ಟಿ ಆಟೋ ಚಾಲಕರು ಕಿರಿಕ್ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಕೆ‌ಎಂ ರಸ್ತೆಯಲ್ಲಿ ನಡೆದಿದೆ. ಕಡೂರಿನಿಂದ ಚಿಕ್ಕಮಗಳೂರು KSRTC ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಬಸ್​​ಗೆ ರಸ್ತೆ ಮಧ್ಯೆ ಆಟೋ ಅಡ್ಡಹಾಕಿ ಪುಂಡಾಟ ಮೆರೆಯಲಾಗಿದೆ. ಬಸ್ ಚಾಲಕ ಮನವಿ ಮಾಡಿದ್ರೂ ಜಾಗ ಬಿಡದೆ, ಬಸ್​​ಗೆ ಅಡ್ಡಲಾಗಿ ಆಟೋ ನಿಲ್ಲಿಸಿ ಮೂವರು ಯುವಕರು ಕಿರಿಕ್ ಮಾಡಿದ್ದಾರೆ. ಆಟೋ ನಿಲ್ಲಿಸಿ ಸೆಲ್ಫಿ ತೆಗೆಯುತ್ತಿರುವ ಯುವಕರ ವಿಡಿಯೋ ವೈರಲ್​ ಆಗಿದ್ದು, ಚಿಕ್ಕಮಗಳೂರು ನಗರ…

Read More

‘ವಿದ್ಯಾರ್ಥಿ ಭವನ’ ಮತ್ತು ಡಾ ರಾಜ್ಕುಮಾರ್: ನೆನಪಿನ ಬುತ್ತಿ ತೆರೆದಿಟ್ಟ ಮಾಲೀಕರು – Kannada News | Famous Vidyarthi Bhavan hotel owner talks about Dr Rajkumar and his connection with hotel

ಡಾ ರಾಜ್​ಕುಮಾರ್ (Dr Rajkumar) ಅವರ ಪುಣ್ಯ ಜಯಂತಿ ಇಂದು. ರಾಜ್ಯದ ಹಲವಾರು ಕಡೆ ಡಾ ರಾಜ್​ಕುಮಾರ್ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ. ರಾಜ್ಯದ ಯಾವ ಮೂಲೆಗೆ ಹೋದರೂ ರಾಜ್​ಕುಮಾರ್ ಅವರ ಚಿತ್ರ, ಪ್ರತಿಮೆಗಳು ಇಂದಿಗೂ ಹೆಜ್ಜೆಗೊಂದರಂತೆ ಕಾಣುತ್ತವೆ. ವಿಶೇಷವೆಂದರೆ ರಾಜ್ಯದ ಯಾವುದೇ ಜನಪ್ರಿಯ ಹೋಟೆಲ್​​ಗಳಿಗೆ ಹೋದರೂ ಅಲ್ಲಿ ರಾಜ್​ಕುಮಾರ್ ಅವರ ಫೋಟೊ ಒಂದು ಇದ್ದೇ ಇರುತ್ತದೆ. ಅಭಿಮಾನಿಗಳಿಗೆ ಗೊತ್ತಿರುವಂತೆ ರಾಜ್​ಕುಮಾರ್ ಅವರು ಮಹಾನ್ ಭೋಜನಪ್ರಿಯರು. ಬೆಂಗಳೂರಿನ ಪ್ರಖ್ಯಾತ ಹೋಟೆಲ್ ವಿದ್ಯಾರ್ಥಿ ಭವನಕ್ಕೂ ರಾಜ್​ಕುಮಾರ್ ಅವರೊಟ್ಟಿಗೆ ನಂಟಿದೆ. ಆ…

Read More

ರಂಗಾಯಣದ ಅಂಗಳದಲ್ಲಿ ಹಸಿರು ಕ್ರಾಂತಿ: ಮಣ್ಣಿನೊಂದಿಗೆ ಬೆರೆತು ಪರಿಸರ ಪಾಠ ಕಲಿತ ಚಿಣ್ಣರು! – Kannada News | Mysuru Rangayana Chinnara Mela: Student Nilay Nandan Shares Heartwarming Experience of Kai Thota Program

ರಂಗಾಯಣದ ‘ಚಿಣ್ಣರ ಮೇಳ’ದಲ್ಲಿ ‘ಕೈತೋಟ’ ಕಾರ್ಯಕ್ರಮImage Credit source: tv9 ಮೈಸೂರು, ಏಪ್ರಿಲ್ 24: ಸಾಂಸ್ಕೃತಿಕ ನಗರಿ ಮೈಸೂರಿನ (Mysuru) ಕಿರೀಟಪ್ರಾಯವಾದ ರಂಗಾಯಣದ ಅಂಗಳದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ‘ಚಿಣ್ಣರ ಮೇಳ’ ಸಂಭ್ರಮದಿಂದ ಜರುಗುತ್ತಿದೆ. ಆದರೆ, ಈ ಬಾರಿಯ ಮೇಳ ಕೇವಲ ರಂಗಭೂಮಿ, ನಾಟಕ ಮತ್ತು ನೃತ್ಯಕ್ಕೆ ಸೀಮಿತವಾಗದೆ, ಮಕ್ಕಳಿಗೆ ಬದುಕಿನ ಪಾಠವನ್ನು ಕಲಿಸುವ ಮೂಲಕ ಹೊಸ ಆಯಾಮ ಪಡೆದುಕೊಂಡಿದೆ. ವಿಶೇಷವಾಗಿ ‘ಕೈತೋಟ’ ಕಾರ್ಯಕ್ರಮದ ಮೂಲಕ ಮಕ್ಕಳು ಮಣ್ಣಿನ ಒಡನಾಟ ಬೆಳೆಸಿಕೊಂಡಿರುವುದು ವಿಶೇಷವಾಗಿ ಮೂಡಿಬಂದಿದೆ. ಮಕ್ಕಳ…

Read More

ರಾಜ್ಯ ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆ: ಕುತೂಹಲ ಮೂಡಿಸಿದ ಅತ್ಯಾಪ್ತರ ಜೊತೆಗಿನ ಸಿಎಂ ಸಭೆ – Kannada News | CM Siddaramaiah pressured by key allies amid Karnataka Congress political crisis

ಬೆಂಗಳೂರು, ಏಪ್ರಿಲ್​​ 24: ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದ್ದು, ಕಾಂಗ್ರೆಸ್​​ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರೇ ಟಾರ್ಗೆಟ್​​ ಆಗುತ್ತಿರುವ ಆರೋಪ ಕೇಳಿಬಂದಿದೆ. ಈ ನಡುವೆ ಸಿಎಂ ಹಾಗೂ ಅತ್ಯಾಪ್ತ ಸಚಿವರಿಂದ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯ ಖಾಸಗಿ ಕಟ್ಟಡದಲ್ಲಿ ಪ್ರತ್ಯೇಕ ಸಭೆ ನಡೆದಿರೋದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಚಿವರಾದ ಭೈರತಿ ಸುರೇಶ್, ಡಾ.ಜಿ.ಪರಮೇಶ್ವರ್, ಮಹದೇವಪ್ಪ, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್ ಭಾಗಿಯಾಗಿದ್ದರು. ಸಭೆಯಲ್ಲಿ ಚರ್ಚೆಯಾಗಿದ್ದೇನು? ಆಪ್ತರೇ ಟಾರ್ಗೆಟ್​​…

Read More

ಬೇಸಿಗೆ ರಜೆಯಲ್ಲಿ ಮಕ್ಕಳ ಮೇಲೆ ನಿಗಾ ಇರಲಿ! ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಕುಣಿಕೆ ಬಿಗಿದು ಬಾಲಕಿ ಸಾವು – Kannada News | Shivamogga Child Death: 9 Year Old Dies in Tragic Swing Accident in summer holidays

ಶಿವಮೊಗ್ಗ, ಏಪ್ರಿಲ್ 24: ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಕುಣಿಕೆ ಬಿಗಿದು 9 ವರ್ಷದ ಬಾಲಕಿ ಸಾವನ್ನಪ್ಪಿರುವ ದುರ್ಘಟನೆ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ಸಂಭವಿಸಿದೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಬಾಲಕಿಯನ್ನು ಶಿವಮೊಗ್ಗ (Shivamogga) ನಗರದ ವಿದ್ಯಾನಗರ ನಿವಾಸಿ ಪ್ರಣಮ್ಯ ಎಂದು ಗುರುತಿಸಲಾಗಿದೆ. ಘಟನೆಯಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದ್ದು, ಪಾಲಕರ ಆಕ್ರಂದನ ಮನಕಲಕುವಂತಿದೆ. ಕೋಣೆ ಬಾಗಿಲು ಹಾಕಿಕೊಂಡು ಜೋಕಾಲಿ ಆಡುತ್ತಿದ್ದ ಬಾಲಕಿ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ…

Read More

Gold Rates: ಚಿನ್ನದ ಬೆಲೆ ಸತತ 4ನೇ ದಿನ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 24th April 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಏಪ್ರಿಲ್ 24: ಚಿನ್ನದ ಬೆಲೆಯ ಸತತ ಇಳಿಕೆ ಮುಂದುವರಿದಿದೆ. ಕಳೆದ ನಾಲ್ಕೈದು ದಿನಗಳಿಂದ ಬೆಲೆಯಲ್ಲಿ ಅಲ್ಪ ಕುಸಿತಗಳಾಗುತ್ತಿವೆ. ಇವತ್ತು ಅದರ ಬೆಲೆ (Gold Rates) ಗ್ರಾಮ್​ಗೆ 55 ರೂ ತಗ್ಗಿದೆ. ವಿದೇಶಗಳಲ್ಲಿ ಹಲವೆಡೆ ಅಲ್ಪ ಏರಿಳಿತ ಮುಂದುವರಿದಿದೆ. ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ ಯಥಾಸ್ಥಿತಿಯಲ್ಲಿದ್ದರೆ, ಚೆನ್ನೈ ಮೊದಲಾದ ಕೆಲವೆಡೆ ಗ್ರಾಮ್​ಗೆ 5 ರೂ ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,40,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ…

Read More

ಹೊಟ್ಟೆ ನೋವೆಂದ ಬಾಲಕಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸ್ವಲ್ಪ ಹೊತ್ತಲ್ಲೇ ಹೆರಿಗೆ,ಆಕೆ ಗರ್ಭಿಣಿ ಎಂದು ಆಗ್ಲೇ ಗೊತ್ತಾಗಿದ್ದು – Kannada News | Punjab Case: Teen Gives Birth After Stomach Pain, Alleges Assault

ಅಮೃತಸರ, ಏಪ್ರಿಲ್ 24: ಜಲಂಧರ್​ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಗೆ ಕಾಣಿಸಿಕೊಂಡಿರುವುದು ಹೆರಿಗೆ ನೋವು, ಆಕೆ ಗರ್ಭಿಣಿ(Pregnant) ಎಂದು ಆಗಲೇ ಗೊತ್ತಾಗಿದ್ದು. ಆಕೆ ಹೆಣ್ಣುಮಗುವಿಗೆ ಜನ್ಮ ಕೊಟ್ಟಿದ್ದಾಳೆ.  ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅಮೃತಸರ ಮೂಲದ ಯುವಕನ ವಿರುದ್ಧ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪಂಜಾಬ್‌ನ ಜಲಂಧರ್ ಜಿಲ್ಲೆಯಲ್ಲಿ ಅತ್ಯಂತ ಕಳವಳಕಾರಿ ಘಟನೆಯೊಂದು ವರದಿಯಾಗಿದೆ. ಸಾಮಾನ್ಯ ಹೊಟ್ಟೆನೋವು ಎಂದು ಚಿಕಿತ್ಸೆಗೆ ಬಂದಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಗರ್ಭಿಣಿ…

Read More

Amavasya: ಅಮಾವಾಸ್ಯೆ ಅಶುಭವೇ ? ಈ ದಿನದ ಹಿಂದಿನ ಆಧ್ಯಾತ್ಮಿಕ ಮಹತ್ವ ಇಲ್ಲಿ ತಿಳಿಯಿರಿ – Kannada News | Amavasya: Sacred Day for Ancestors, Not Inauspicious; Spiritual Significance and Pitru

ಹಿಂದೂ ಕ್ಯಾಲೆಂಡರ್‌ನಲ್ಲಿ ಪ್ರತಿ ತಿಂಗಳು ಬರುವ ‘ಅಮಾವಾಸ್ಯೆ‘ಯನ್ನು ಸಮಾಜದಲ್ಲಿ ಸಾಮಾನ್ಯವಾಗಿ “ಅಶುಭ” ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಅನೇಕರು ಈ ದಿನದಂದು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಅಥವಾ ಶುಭ ಕಾರ್ಯಗಳನ್ನು ಮಾಡಲು ಹಿಂಜರಿಯುತ್ತಾರೆ. ಆದರೆ, ಈ ದಿನದ ಹಿಂದಿನ ವಾಸ್ತವ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಗಮನಿಸಿದರೆ, ಇದು ಕೇವಲ ಕತ್ತಲೆಯ ದಿನವಲ್ಲ, ಬದಲಾಗಿ ನಮ್ಮ ಮೂಲ ಬೇರುಗಳಾದ ಪೂರ್ವಜರನ್ನು ನೆನೆಯುವ ಮತ್ತು ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವಾಗಿದೆ ಎಂಬುದು ಅರಿವಾಗುತ್ತದೆ. ಪೂರ್ವಜರ ಸ್ಮರಣೆಗೆ ಮೀಸಲಾದ ಪವಿತ್ರ ದಿನ:…

Read More

‘ಡಾರ್ಲಿಂಗ್’ ಸಿನಿಮಾ ರೀ ರಿಲೀಸ್​​ನಲ್ಲಿ ಅಭಿಮಾನಿಗಳ ಹೊಡೆದಾಟ – Kannada News | Prabhas fans beaten in Hyderabad while Darling movie re release

ಪ್ರಭಾಸ್ (Prabhas) ನಟನೆಯ ‘ಡಾರ್ಲಿಂಗ್’ ಸಿನಿಮಾ 2010 ರಲ್ಲಿ ಬಿಡುಗಡೆ ಆಗಿತ್ತು. ಕಾಜೊಲ್ ನಾಯಕಿಯಾಗಿ ನಟಿಸಿದ್ದ ಈ ಸಿನಿಮಾ ಆಗ ಭಾರಿ ದೊಡ್ಡ ಹಿಟ್ ಆಗಿತ್ತು. ಕಾಮಿಡಿ, ರೊಮ್ಯಾನ್ಸ್, ಸೆಂಟಿಮೆಂಟ್, ಗೆಳೆತನ ಜೊತೆಗೆ ಆಕ್ಷನ್ ಸಹ ಸಿನಿಮಾನಲ್ಲಿತ್ತು. ಈ ಸಿನಿಮಾದ ಬಳಿಕವೇ ಪ್ರಭಾಸ್​​ಗೆ ‘ಡಾರ್ಲಿಂಗ್’ ಎಂಬ ಉಪನಾಮ ಸಹ ಸೇರಿಕೊಂಡಿತು. ಇತ್ತೀಚೆಗಷ್ಟೆ ಈ ಸಿನಿಮಾ ಮರು ಬಿಡುಗಡೆ ಆಗಿದ್ದು, ಪ್ರಭಾಸ್ ಅಭಿಮಾನಿಗಳು ಪ್ರತಿಬಾರಿಯಂತೆ ಅದ್ಧೂರಿಯಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಆದರೆ ಒಂದು ಚಿತ್ರಮಂದಿರದಲ್ಲಿ ‘ಡಾರ್ಲಿಂಗ್’ ಸಿನಿಮಾ ಪ್ರದರ್ಶನದ ವೇಳೆ…

Read More