ಬೆಂಗಳೂರು-ಮುಂಬೈ ದುರಂತೋ ಎಕ್ಸ್‌ಪ್ರೆಸ್: ಪ್ರಯಾಣಾವಧಿ 18 ಗಂಟೆಗೆ ಇಳಿಕೆಯಾಗುತ್ತಾ?
ಬೆಂಗಳೂರು, ಜನವರಿ 16: ಬೆಂಗಳೂರು–ಮುಂಬೈ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಎರಡು ಮಹಾನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿತಗೊಳಿಸುವ ಉದ್ದೇಶದಿಂದ ದುರಂತೋ ಎಕ್ಸ್‌ಪ್ರೆಸ್ ರೈಲು ಆರಂಭಿಸುವ ಕುರಿತು ರೈಲ್ವೆ ಮಂಡಳಿ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ರೈಲು ಸೇವೆ ಆರಂಭವಾದರೆ, ಬೆಂಗಳೂರು–ಮುಂಬೈ ಪ್ರಯಾಣದ ಸಮಯ ಸುಮಾರು 18 ಗಂಟೆಗಳವರೆಗೆ ಇಳಿಯುವ ಸಾಧ್ಯತೆ ಇದೆ. ಏನೆಲ್ಲಾ ಸೌಲಭ್ಯ ನೀಡಲಿದೆ ದುರಂತೋ ಎಕ್ಸ್‌ಪ್ರೆಸ್? ಇತ್ತೀಚೆಗೆ ಬೆಂಗಳೂರು ಎಸ್‌ಎಂವಿಟಿ…