ರಷ್ಯನ್ ತೈಲ, ಕಲ್ಲಿದ್ದಲು ಖರೀದಿ: ಭಾರತವನ್ನು ಹಿಂದಿಕ್ಕಿದ ಟರ್ಕಿ – Kannada News | Russian fuel exports, India’s share come down in 2025 December, as Türkiye replaces for 2nd place
ನವದೆಹಲಿ, ಜನವರಿ 14: ಭಾರತವು ರಷ್ಯಾದಿಂದ ತೈಲ ಪಡೆಯುತ್ತಿರುವುದು (Russian Oil) ಡಿಸೆಂಬರ್ನಲ್ಲಿ ಗಣನೀಯವಾಗಿ ಕಡಿಮೆ ಆಗಿದೆ. ನವೆಂಬರ್ಗೆ ಹೋಲಿಸಿದರೆ ರಷ್ಯನ್ ತೈಲ ಖರೀದಿಯಲ್ಲಿ ಶೇ. 29ರಷ್ಟು ಇಳಿಮುಖವಾಗಿದೆ. ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್ ಏರ್ (ಸಿಆರ್ಇಎ) ಸಂಸ್ಥೆಯ ಇತ್ತೀಚಿನ ವರದಿಯಲ್ಲಿ ಈ ಅಂಕಿಅಂಶಗಳಿವೆ. ಡಿಸೆಂಬರ್ ತಿಂಗಳಲ್ಲಿ ಭಾರತದ ಒಟ್ಟಾರೆ ಕಚ್ಛಾ ತೈಲ (crude oil) ಆಮದು ಹೆಚ್ಚಾದರೂ ರಷ್ಯನ್ ತೈಲ ಆಮದಿನಲ್ಲಿ ಕಡಿಮೆ ಆಗಿರುವುದು ಗಮನಾರ್ಹ. ರಿಲಾಯನ್ಸ್ನ ಜಾಮ್ನಗರ್ ರಿಫೈನರಿಯು ಡಿಸೆಂಬರ್…