ನಾಳೆ SSLC ಫಲಿತಾಂಶ: ಕುಳಿತಲ್ಲೇ SSLC ರಿಸಲ್ಟ್ ಚೆಕ್ ಮಾಡುವುದ್ಹೇಗೆ? ಇಲ್ಲಿದೆ ವಿಧಾನ – Kannada News | How To Check Karnataka SSLC Result 2026 In Online And Digilocker on April 23, here Is Steps
ಬೆಂಗಳೂರು, ( ಏಪ್ರಿಲ್ 22): ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರ ಫಲಿತಾಂಶ-2026 ನಾಳೆ (ಏಪ್ರಿಲ್ 23) ಪ್ರಕಟವಾಗಲಿದೆ. ಶಿಕ್ಷಣ ಸಚಿವ ಮಧುಬಂಗಾರಪ್ಪನವರು ಗುರುವಾರ ಮಧ್ಯಾಹ್ನ 12ಗಂಟೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಇನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ವಿದ್ಯಾರ್ಥಿಗಳು ವೆಬ್‌ಸೈಟ್, ಮೊಬೈಲ್ ಆಪ್, SMS/WhatsApp ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ. ಅಧಿಕೃತ ವೆಬ್‌ಸೈಟ್ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಅಧಿಕೃತ ಪೋರ್ಟಲ್ https://karresults.nic.in ಮೂಲಕ ಫಲಿತಾಂಶ…