ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಮಹಡಿ ಮೇಲಿಂದ ತಳ್ಳಿ ಕೊಂದ ಮಗ – Kannada News | A son kills his mother by pushing from home 3rd floor in rr nagar at bengaluru
ಬೆಂಗಳೂರು, (ಏಪ್ರಿಲ್ 15): ಬಹುಮಹಡಿ ಕಟ್ಟಡದಿಂದ ತಳ್ಳಿ ಹೆತ್ತ ತಾಯಿಯನ್ನು (Mother) ಮಗನೇ (Son) ಕೊಲೆ ಮಾಡಿರುವ ಘಟನೆ ಅಮಾನವೀಯ ಘಟನೆ ಬೆಂಗಳೂರಿನ ಆರ್ಆರ್ ನಗರ (RR Nagar) ಬೆಮಲ್ ಲೇಔಟ್ನಲ್ಲಿ ನಡೆದಿದೆ. ಪುತ್ರ ವೆಂಕಟೇಶ್ ಎನ್ನುವಾತನೆ ತನ್ನ ಹೆತ್ತ ತಾಯಿ ಸಾವಿತ್ರಮ್ಮ(72)ರನ್ನು ಮಹಡಿ ಮೇಲಿಂದ ತಳ್ಳಿ ಕೊಂದಿದ್ದಾನೆ. ಪಾರ್ಶ್ವವಾಯು ಪೀಡಿತರಾಗಿದ್ದ ಸಾವಿತ್ರಮ್ಮ,ಸುಮಾರು ಐದಾರು ವರ್ಷದಿಂದ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತು ತಾಯಿ ಸಾವಿತ್ರಮ್ಮಳನ್ನ 3ನೇ ಮಹಡಿಯಿಂದ ತಳ್ಳಿದ್ದಾನೆ. ಸುಮಾರು ವರ್ಷಗಳಿಂದ ಸಾವಿತ್ರಮ್ಮ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು….