ಸಿಹಿತಿಂಡಿಗಳ ಮಹಾರಾಜ ಸ್ವಾದಿಷ್ಟಮಯ “ಮೈಸೂರು ಪಾಕ್” – Kannada News | Do you know why Mysore Pak is called the king of sweets? Here is the information
ಭಾರತೀಯ ಹಬ್ಬ ಹರಿದಿನಗಳು, ಮದುವೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಸಿಹಿತಿನಿಸು ಇರಲೇಬೇಕು. ಈ ಸಿಹಿ ಖಾದ್ಯಗಳು ಎಂದಾಕ್ಷಣ ನೆನಪಾಗುವುದೇ ಮೈಸೂರ್ ಪಾಕ್ (Mysore Pak), ಗುಲಾಬ್ ಜಾಮೂನ್, ರಸಗುಲ್ಲಾ. ಇದಲ್ಲದೇ ಪ್ರದೇಶದಿಂದ ಪ್ರದೇಶಕ್ಕೆ ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಅನೇಕಾರು ಸಿಹಿ ಖಾದ್ಯಗಳಿವೆ. ಈ ಎಲ್ಲಾ ಸಿಹಿ ತಿನಿಸುಗಳ ರಾಜನೆಂದು ಮೈಸೂರ್ ಪಾಕನ್ನು ಕರೆಯಲಾಗುತ್ತದೆ. ಹೌದು ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುವಂತೆ ಮೈಸೂರ್ ಪಾಕನ್ನು ಸಿಹಿ ತಿಂಡಿಗಳ ರಾಜ ಎಂದು ಕರೆಯಲಾಗುತ್ತದೆ. ವಿಶೇಷವಾಗಿ ಕರ್ನಾಟಕದ…