ಕೊಪ್ಪಳ ಲವ್ ಜಿಹಾದ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಆರೋಪಿ ಮುಸ್ತಾಫಾಗೆ ಅಂತರಾಜ್ಯ ಮಟ್ಕಾ ಬುಕ್ಕಿಗಳ ಲಿಂಕ್
ಕೊಪ್ಪಳ, ಏಪ್ರಿಲ್ 13: ಕೊಪ್ಪಳ ಜಿಲ್ಲೆಯಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಮುಸ್ತಾಫಾ ಖಾದ್ರಿ ವಿರುದ್ಧದ ಲವ್ ಜಿಹಾದ್ (Love Jihad Case) ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಆರೋಪಿ ಮುಸ್ತಾಫಾಗೆ ಗೋವಾ ಮತ್ತು ಮುಂಬೈನ ಮಟ್ಕಾ ಬುಕ್ಕಿಗಳೊಂದಿಗೆ ಸಂಪರ್ಕವಿದ್ದು, ಅವರಿಂದಲೇ ಹಣದ ನೆರವು ಸಿಗುತ್ತಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆಯೂ ಇದೀಗ ವಿಶ್ವ ಹಿಂದೂ ಪರಿಷತ್ (VHP) ಪೊಲೀಸರಿಗೆ ದೂರು ನೀಡಿದೆ. ಮಟ್ಕಾ ಬುಕ್ಕಿಗಳ ಹಣದಲ್ಲಿ ಹೈಫೈ ಜೀವನ ಕೊಪ್ಪಳ…