Headlines

ದಿನ ಭವಿಷ್ಯ: ಇಂದು ಈ ರಾಶಿಯವರ ಯೋಗ್ಯತೆಯನ್ನು ಅಳೆಯುವ ಸನ್ನಿವೇಶ ಬರಲಿದೆ

ಮೇಷ ರಾಶಿ: ಸಮಸ್ಯೆಗಳಿಗೆ ಸೊಪ್ಪು ಹಾಕಿದಷ್ಟೂ ದೊಡ್ಡದಾಗುತ್ತದೆ. ನಿಮ್ಮದಲ್ಲದ ಕೆಲಸವನ್ನು ನೀವೇ ಮಾಡಬೇಕಾಗಬಹುದು. ಮಕ್ಕಳ ಚಲನವಲನದ ಕಡೆಗೆ ಗಮನವಿರಲಿ. ಕುಟುಂಬದ ಜವಾಬ್ದಾರಿಯನ್ನು ಅನಿವಾರ್ಯ ಕಾರಣಕ್ಕೆ ಪಡೆಯಬೇಕಾದೀತು. ಮನೆಯನ್ನು ಸ್ಥಳಾಂತರ ಮಾಡುವಿರಿ. ಸಹೋದ್ಯೋಗಿಗಳ ವರ್ತನೆಯು ಇಷ್ಟವಾಗದೇ ಸಿಟ್ಟಾಗುವಿರಿ. ಆಕಸ್ಮಿಕ ವಸ್ತು ಲಾಭದಿಂದ ಖುಷಿ ಪಡುವಿರಿ. ನಿಮ್ಮ ಉಪಕರಣಗಳು ದುರಸ್ತಿಗೆ ಬರಬಹುದು. ಯೋಗ್ಯತೆಗೆ ಅನುಗುಣವಾದ ಕಾರ್ಯವನ್ನು ಒಪ್ಪಿಕೊಳ್ಳಿ. ವೃಷಭ ರಾಶಿ: ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಲ್ಲ ಕಡೆ ಎಂದು ಅನ್ನಿಸುತ್ತಿರಬಹುದು. ಅದನ್ನು ಆಲೋಚನೆಯಿಂದ ದೂರವಿರಿಸಿ. ವ್ಯಾಪರದ ವಿಚಾರದಲ್ಲಿ ಸಹಭಾಗಿಯ ಜೊತೆ…

Read More

‘ಬೆಂಗಳೂರು ಇನ್’ ಸಿನಿಮಾ ಮತ್ತು ನಟಿ ಅನುಷಾ ರೈ ಬಗ್ಗೆ ಧರ್ಮ ಕೀರ್ತಿ ಮಾತು: ವಿಡಿಯೋ

ಧರ್ಮ ಕೀರ್ತಿ (Dharma Keerthy) ನಟನೆಯ ‘ಬೆಂಗಳೂರು ಇನ್’ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಸಿನಿಮಾದ ಪ್ರಚಾರಾರ್ಥ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಸಿನಿಮಾದ ನಾಯಕ ಧರ್ಮ ಕೀರ್ತಿ ಮಾತನಾಡಿದರು. ಧರ್ಮ ಕೀರ್ತಿ ಹಾಗೂ ಅನುಷಾ ರೈ ಒಟ್ಟಿಗೆ ನಟಿಸಿರುವ ಮೂರನೇ ಸಿನಿಮಾ ಇದು. ಅನುಷಾ ರೈ ಅವರೊಟ್ಟಿಗಿನ ತಮ್ಮ ಕೆಮಿಸ್ಟ್ರಿ ಬಗ್ಗೆ ಹಾಗೂ ಅನುಷಾ ರೈ ಅವರ ನಟನೆ, ವ್ಯಕ್ತಿತ್ವದ ಬಗ್ಗೆ ಧರ್ಮ ಕೀರ್ತಿ ಮಾತನಾಡಿದರು. ವಿಡಿಯೋ ನೋಡಿ… ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ…

Read More

ದಾವಣಗೆರೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯನ್ನ ಸೋಲಿಸಲು ಫಂಡಿಂಗ್​​; ಅಯೂಬ್ ಪೈಲ್ವಾನ್

ದಾವಣಗೆರೆ, ಏಪ್ರಿಲ್​ 11: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಕೆಲವರು ಹುನ್ನಾರ ನಡೆಸಿದ್ದರು. ಮತ್ತೆ ಕೆಲ ನಾಯಕರು ಫಂಡಿಂಗ್​​ ಸಹ ಮಾಡಿದ್ದರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್​​ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫಂಡಿಂಗ್ ಮಾಡಿದವರ ಬಗ್ಗೆ ಪಕ್ಷದ ಹೈಕಮಾಂಡ ಬಳಿ ಮಾಹಿತಿ ಇದೆ.‌ ಸೂಕ್ತ ಕ್ರಮಕೈಗೊಳ್ಳುತ್ತಾರೆ. ಜೊತೆಗೆ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಮೂರು ಸಲ ಎಂಎಲ್​​ಸಿ ಆಗಿದ್ದಾರೆ.‌ ಪಕ್ಷದ…

Read More

ಬಿಹಾರದ ಕತಿಹಾರ್‌ನಲ್ಲಿ ಹಲವು ವಾಹನಗಳ ನಡುವೆ ಡಿಕ್ಕಿ; 10 ಜನ ಸಾವು, 25 ಮಂದಿಗೆ ಗಾಯ

ನವದೆಹಲಿ, ಏಪ್ರಿಲ್ 11: ಬಿಹಾರದ ಕೊರ್ಹಾ ಪೊಲೀಸ್ ಠಾಣೆ ವ್ಯಾಪ್ತಿಯ ಗೆರಾಬರಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಂದು 10 ಜನರು ಸಾವನ್ನಪ್ಪಿದ್ದಾರೆ. 25 ಜನರು ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ (Accident) ಬಸ್ ಮತ್ತು ಪಿಕಪ್ ವಾಹನವು ಡಿಕ್ಕಿ ಹೊಡೆದಿದೆ. ಗಾಯಾಳುಗಳಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಜನರನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ. ಅಪಘಾತದ ನಂತರ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಗಾಯಗೊಂಡ ವ್ಯಕ್ತಿಗಳಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಸುಮಾರು…

Read More

ಈ ರಾಶಿಗೆ ಶನಿ ನೀಡುವ ಪೆಟ್ಟು ತುಂಬಾ ಭೀಕರ!: ಎಚ್ಚರಿಕೆ ಹೆಜ್ಜೆ ಅಗತ್ಯ

ಮಕರ ರಾಶಿ ಹತ್ತನೇ ರಾಶಿಯಾಗಿದ್ದು ಅಧಿಪತಿಯಾದ ಶನಿ ತೃತೀಯದಲ್ಲಿ ಇರುವನು. ಈ ರಾಶಿಗೆ ಎಲ್ಲ ಗ್ರಹರೂ ಪ್ರತಿಕೂಲತೆಯನ್ನು ಹೆಚ್ಚು ಉಂಟುಮಾಡುವ ಸಾಧ್ಯತೆಯಿದ್ದು, ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುವುದು. ದೈವ ಬಲವನ್ನು ನಂಬಿ ಮುನ್ನಡೆದರೆ ಯಶಸ್ಸು ಸಿಗಲಿದೆ. ದುಡುಕಿ ಯೋಜನೆಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಆರ್ಥಿಕತೆ, ಆದಾಯ ಮತ್ತು ಸಾಲ : ​ಎರಡನೇ ರಾಶಿಯಲ್ಲಿ ರಾಹು ಮತ್ತು ಮಂಗಳ ಸೇರಿರುವುದರಿಂದ ಆರ್ಥಿಕವಾಗಿ ಹಠಾತ್ ಏರಿಳಿತಗಳು ಕಂಡುಬರುತ್ತವೆ. ಕೈಗೆ ಬರಬೇಕಾದ ಹಣ ಬರಬಹುದು, ಆದರೆ ಅದು ಕೂಡಲೇ ಬೇರೆ ಯಾವುದೋ…

Read More

ಕೊಲೆಯಾದ ಯೋಗೀಶ್ ಗೌಡ ಕುಟುಂಬದಲ್ಲಿ ಆಸ್ತಿ ಕಲಹ: ಸಹೋದರಿಯರ ಮೇಲೆ ರಾಡ್, ವೈರ್‌ನಿಂದ ಹಲ್ಲೆ ಆರೋಪ

ಧಾರವಾಡ, ಏ.11: ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿರುವ ಮಾಜಿ ಜಿ.ಪಂ. ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ತೀರ್ಪು ಹೊರಬೀಳುವ ಹಂತದಲ್ಲಿದೆ. ಆದರೆ, ಇತ್ತ ಯೋಗೀಶ್ ಗೌಡ ಅವರ ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ದೊಡ್ಡ ಮಟ್ಟದ ಕಿತ್ತಾಟ ಶುರುವಾಗಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದ ತೋಟದ ಮನೆಯಲ್ಲಿ ಆಸ್ತಿ ಹಂಚಿಕೆ ವಿಚಾರವಾಗಿ ಯೋಗೀಶ್ ಗೌಡ ಅವರ ಸಹೋದರ ಗುರುನಾಥ ಗೌಡ ಮತ್ತು ಸಹೋದರಿಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ…

Read More

‘ಬೆಂಗಳೂರು ಇನ್’: ನಿರ್ದೇಶಕರ ಬಗ್ಗೆ ಬಿಗ್​​ಬಾಸ್ ರಿಷಾ ಕಂಪ್ಲೆಂಟ್

‘ಬೆಂಗಳೂರು ಇನ್’ (Bengaluru Inn) ಹೆಸರಿನ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಬಿಗ್​​ಬಾಸ್ ಖ್ಯಾತಿಯಾ ರಿಶಾ, ಅನುಷಾ ರೈ ನಾಯಕಿಯರು, ಧರ್ಮ ಕೀರ್ತಿ ನಾಯಕ. ಡೆಲಿವರಿ ಬಾಯ್ ಜೀವನದಲ್ಲಿ ನಡೆಯುವ ಘಟನೆಯನ್ನು ಇರಿಸಿಕೊಂಡು ಮಾಡಿರುವ ಸಿನಿಮಾ ಇದು. ಸಿನಿಮಾದ ಇವೆಂಟ್​​ನಲ್ಲಿ ನಟಿ ರಿಶಾ ಮಾತನಾಡಿದ್ದು, ಟ್ರೈಲರ್​​ನಲ್ಲಿ ಸ್ವಲ್ಪ ಕಡಿಮೆ ತೋರಿಸಿದ್ದಾರೆ ಎಂದು ಸಣ್ಣ ದೂರು ಸಹ ಹೇಳಿದ್ದಾರೆ. ಬಿಗ್​​ಬಾಸ್ ಮನೆಯಲ್ಲಿ ಅಬ್ಬರಿಸಿದ್ದ ರಿಶಾ, ವೇದಿಕೆ ಮೇಲೆ ಹೇಗೆ ಮಾತನಾಡಿದ್ದಾರೆ, ವಿಡಿಯೋ ನೋಡಿ… ಸಿನಿಮಾ ಸುದ್ದಿಗಳಿಗಾಗಿ…

Read More

‘ಜನ ನಾಯಗನ್’ ಲೀಕ್: ಸೆನ್ಸಾರ್ ಮಂಡಳಿ ಸ್ಪಷ್ಟನೆ, ನಿರ್ಮಾಪಕರ ಅಂಗಳಕ್ಕೆ ಚೆಂಡು

ತಮಿಳು ನಟ ವಿಜಯ್ (Thalapathy Vijay) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಬಿಡುಗಡೆಗೆ ಸಾಕಷ್ಟು ಅಡ್ಡಿಗಳು ಎದುರಾಗಿದ್ದವು. ರೀಮೇಕ್ ಸಿನಿಮಾ ಆಗಿದ್ದರೂ ಸಹ ಸಿಬಿಎಫ್​​ಸಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಿರಲಿಲ್ಲ. ನ್ಯಾಯಾಲಯದಲ್ಲಿ ಸಹ ನಿರ್ಮಾಪಕರಿಗೆ ನ್ಯಾಯ ಧಕ್ಕಿರಲಿಲ್ಲ. ಇದು ಹೀಗಿರುವಾಗ ಇತ್ತೀಚೆಗಷ್ಟೆ ‘ಜನ ನಾಯಗನ್’ ಸಿನಿಮಾ ಎಚ್​​ಡಿ ಪ್ರಿಂಟ್ ಸೋರಿಕೆ ಆಗಿದೆ. ಇದು ಚಿತ್ರತಂಡಕ್ಕೆ ಭಾರಿ ನಷ್ಟವನ್ನು ಉಂಟು ಮಾಡಿದೆ. ಆದರೆ ಈ ಸೋರಿಕೆ ಸಿಬಿಎಫ್​​ಸಿ ಕಡೆಯಿಂದಲೇ ಆಗಿದೆ ಎಂಬ ಆರೋಪಗಳು ಕಳೆದ ಒಂದೆರಡು ದಿನಗಳಿಂದ…

Read More

ಕದನವಿರಾಮದ ಬಳಿಕ ಯಶಸ್ವಿಯಾಗಿ ಹಾರ್ಮುಜ್ ಜಲಸಂಧಿ ದಾಟಿದ ಭಾರತದ ಎಲ್‌ಪಿಜಿ ಟ್ಯಾಂಕರ್ ಜಗವಿಕ್ರಮ್

ನವದೆಹಲಿ, ಏಪ್ರಿಲ್ 11: ಭಾರತದ ಧ್ವಜ ಹೊತ್ತ ಎಲ್‌ಪಿಜಿ ಹಡಗು ಜಗವಿಕ್ರಮ್ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ. ಈ ಹಡಗು ಸುಮಾರು 20,400 ಮೆಟ್ರಿಕ್ ಟನ್ ಎಲ್‌ಪಿಜಿ ಸರಕುಗಳನ್ನು 24 ನಾವಿಕರೊಂದಿಗೆ ಸಾಗಿಸುತ್ತಿದೆ. ಇದು ಏಪ್ರಿಲ್ 15ರಂದು ಮುಂಬೈಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಕದನ ವಿರಾಮಕ್ಕೆ ಕೆಲವು ವಾರ ಮೊದಲು ಭಾರತ ಧ್ವಜ ಹೊತ್ತ 8 ಹಡಗುಗಳು ಜಲಸಂಧಿಯನ್ನು ದಾಟಿದ್ದವು. ಆದರೆ, 15 ಹಡಗುಗಳು ಪರ್ಷಿಯನ್ ಕೊಲ್ಲಿಯಲ್ಲಿ…

Read More

ದಾವಣಗೆರೆ: ಉಪಚುನಾವಣಾ ಪ್ರಚಾರಕ್ಕೆ ಕರೆದಿಲ್ಲ; ಜಬ್ಬಾರ್​ಗೆ ಸಚಿವ ಮಲ್ಲಿಕಾರ್ಜುನ್​​ ಖಡಕ್ ಕೌಂಟರ್

ದಾವಣಗೆರೆ, ಏಪ್ರಿಲ್​ 11: ಒಂದು ಚಹಾ ಕುಡಿದರೆ ಋಣ ಇಟ್ಟುಕೊಳ್ಳಬೇಕು. ಎಂಎಲ್​ಸಿ ಮಾಡಿದ್ದು ನಾವು. ಕಾಂಗ್ರೆಸ್ ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು ಎಂದು ಸಚಿವ ಎಸ್​ಎಸ್​ ಮಲ್ಲಿಕಾರ್ಜುನ್​​ ಹೇಳಿದ್ದಾರೆ. ಚುನಾವಣಾ ಪ್ರಚಾರಕ್ಕೆ ಕರೆದಿಲ್ಲ ಎಂಬ ಕಾಂಗ್ರೆಸ್​ ಮುಖಂಡ ಅಬ್ದುಲ್​​ ಜಬ್ಬಾರ್​ ಆರೋಪಕ್ಕೆ ಟಾಂಗ್​ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಪಕ್ಷದ ಕಾರ್ಯಕರ್ತರಾಗಿ ನಾವು ನಮ್ಮ ಪಾಡಿಗೆ, ಕರೆಗಾಗಿ ಕಾಯದೆ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವ ಬಗ್ಗೆ ನಡೆದ…

Read More