PBKS vs SRH: ಯಾನ್ಸನ್ ಹಿಡಿದ ಕ್ಯಾಚ್ಗೆ ಬೆಚ್ಚಿ ಬೆರಗಾದ ಅರ್ಷದೀಪ್; ವಿಡಿಯೋ
ಭಾರತ ಟಿ20 ತಂಡದ ಬೌಲಿಂಗ್ ವಿಭಾಗದ ಪ್ರಮುಖ ಬೌಲರ್ ಎನಿಸಿಕೊಂಡಿರುವ ಅರ್ಷದೀಪ್ ಸಿಂಗ್ಗೆ ಈ ಬಾರಿಯ ಐಪಿಎಲ್ ದುಃಸ್ವಪ್ನದಂತೆ ಕಾಡುತ್ತಿದೆ. ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿರುವ ಅರ್ಷದೀಪ್ಗೆ ಮೊದಲ ಮೂರು ಪಂದ್ಯಗಳಲ್ಲಿ ಯಾವುದೇ ವಿಕೆಟ್ ಸಿಕ್ಕಿರಲಿಲ್ಲ. ಇತ್ತ ಅರ್ಷದೀಪ್ ರನ್ಗೂ ಕಡಿವಾಣ ಹಾಕುತ್ತಿರಲಿಲ್ಲ. ಇದು ಪಂಜಾಬ್ಗೆ ದೊಡ್ಡ ತಲೆನೋವಾಗಿತ್ತು. ಇಂದು ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಅರ್ಷದೀಪ್ ತುಂಬಾ ದುಬಾರಿಯಾದರು. ಆದರೆ ಕೊನೆಗೂ ತಮ್ಮ ವಿಕೆಟ್ಗಳ ಖಾತೆ ತೆರೆಯುವಲ್ಲಿ ಯಶಸ್ವಿಯಾದರು. ಈ ಪಂದ್ಯದಲ್ಲಿ…