ಬಲು ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ಸುಳಿಯಲು ಈ ಸಿಂಪಲ್ ಟ್ರಿಕ್ಸ್ ಅನುಸರಿಸಿ – Kannada News | Just use these tricks to peel garlic skin very easily
ಅಡುಗೆಯ ರುಚಿ ಮತ್ತು ಘಮ ಹೆಚ್ಚಿಸುವಲ್ಲಿ ಬೆಳ್ಳುಳ್ಳಿಯು (garlic) ಪ್ರಮುಖ ಪಾತ್ರ ವಹಿಸುತ್ತದೆ. ರುಚಿ ಹೆಚ್ಚಿಸುವುದಷ್ಟೇ ಅಲ್ಲ ಬೆಳ್ಳುಳ್ಳಿ ಹಲವಾರು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಹಾಗಾಗಿ ಹೆಚ್ಚಿನ ಅಡುಗೆಗಳಲ್ಲಿ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಅದರಲ್ಲೂ ಮಾಂಸಹಾರ ಭಕ್ಷ್ಯಗಳಿಗೆ ಬೆಳ್ಳುಳ್ಳಿ ಬೇಕೇ ಬೇಕು. ಆದ್ರೆ ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆಯುವುದು ಮಾತ್ರ ಹಲವರಿಗೆ ಸವಾಲಿನ ಕೆಲಸ. ಬೆಳ್ಳುಳ್ಳಿ ಎಸಳುಗಳು ತೀರಾ ಚಿಕ್ಕದಾಗಿರುವ ಹಾಗೂ ತೆಳುವಾಗಿರುವ ಕಾರಣ ಸಿಪ್ಪೆಯನ್ನು ತೆಗೆಯುವುದು ಸ್ವಲ್ಪ ಕಷ್ಟ. ನೀವು ಸಹ ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ಸಿಕ್ಕಾಪಟ್ಟೆ ಪರದಾಟ…