Headlines

ಪೊಲೀಸ್ ಕ್ವಾಟ್ರಸ್ ಜಾಗಕ್ಕೆ ಸ್ಕೆಚ್ ಹಾಕಿದ್ದ ಭೂಗಳ್ಳರು ಅಂದರ್: ಮೂವರು ಅರೆಸ್ಟ್​​

ಬೆಂಗಳೂರು, ಏಪ್ರಿಲ್​​ 05: ಮಲ್ಲೇಶ್ವರಂನಲ್ಲಿನ ಪೊಲೀಸ್ ಕ್ವಾಟ್ರಸ್ ಜಾಗ ಕಬಳಿಸಲು ಸ್ಕೆಚ್​​ ಹಾಕಿದ್ದ ಭೂಗಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. 25 ಸಾವಿರ ಚದರಡಿ ಜಾಗವನ್ನು ಲಪಟಾಯಿಸಲು ಮುಂದಾಗಿದ್ದ ವಂಚಕರು, ಅದಕ್ಕೆ ಬೇಕಾದ ದಾಖಲೆಗಳನ್ನು ಕೂಡ ಸಿದ್ಧಪಡಿಸಿಕೊಂಡಿದ್ದರು. ಪ್ರಕರಣ ಸಂಬಂಧ ಕೃಷ್ಣ ಮೂರ್ತಿ, ಶ್ರೀನಾಥ್ ನಗರಗಡ್ಡೆ ಮತ್ತು ಕೃಷ್ಣ ಎಂಬವರನ್ನು ಅರೆಸ್ಟ್​​ ಮಾಡಲಾಗಿದ್ದು, ಇದೇ ರೀತಿ ನಗರದ ಹಲವು ಕಡೆ ಸರ್ಕಾರಿ ಜಾಗ ನುಂಗಿರುವ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಬಗ್ಗೆ ಮಲ್ಲೇಶ್ವರಂ…

Read More

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ತಮ್ಮ ಬಗ್ಗೆ ಜನರಿಂದ ತಿಳಿಯುವ ಕುತೂಹಲ

ಮೇಷ ರಾಶಿ: ಜೀವನದಲ್ಲಿ ಬದಲಾವಣೆಯೆ ಶಾಶ್ವತ ಎನ್ನುವ ವಾಕ್ಯವನ್ನು ಸ್ಮರಿಸುತ್ತ ಮುಂದಡಿಯಿಡಿ. ನೆಮ್ಮದಿ ನಿಮ್ಮೆದುರು ನಿಲ್ಲುವುದು. ಇಂದು ಸಂಗಾತಿಗೆ ನಿಮ್ಮ ಮೇಲೆ ಅಭಿಮಾನ ಬರಬಹುದು. ಅವಿವಾಹಿತರು ವಿವಾಹದ ಬಗ್ಗೆ ಬಂಧುಗಳ ಜೊತೆ ಚರ್ಚಿಸುವಿರಿ. ಮನಸ್ಸಿನ ನಿಯಂತ್ರಣವು ಲಯವನ್ನು ತಪ್ಪಬಹುದು. ನೀವು ಇಂದು ವೃತ್ತಿಪರ ರಂಗದಲ್ಲಿ ನಿಮಗೆ ಪ್ರಶಂಸೆ ಸಿಗುವ ಸಾಧ್ಯತೆ ಇದೆ. ಹೊಸತನ್ನು ಕಲಿಯುವ ಉತ್ಸಾಹದಲ್ಲಿ ಇರುವಿರಿ. ಧೈರ್ಯದಿಂದ ಹೊಸ ಸವಾಲುಗಳನ್ನು ಎದುರಿಸುವಿರಿ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ. ವೃಷಭ ರಾಶಿ: ಸಾಲದ ವಿಚಾರ…

Read More

GT vs RR: ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಗುಜರಾತ್; ರಾಜಸ್ಥಾನ್​ಗೆ 2ನೇ ಜಯ

ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿನಡೆದ ಐಪಿಎಲ್ 2026 ರ 9ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಗುಜರಾತ್ ಟೈಟನ್ಸ್ ಲೀಗ್​ನಲ್ಲಿ ಸತತ ಎರಡನೇ ಪಂದ್ಯವನ್ನು ಸೋತರೆ, ಇತ್ತ ಸಾಂಘಿಕ ಪ್ರದರ್ಶನ ನೀಡಿದ ರಾಜಸ್ಥಾನ್ ಸತತ ಎರಡನೇ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ 210 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್ 204 ರನ್​ ಕಲೆಹಾಕಲಷ್ಟೇ ಶಕ್ತವಾಗಿ 7 ರನ್​ಗಳಿಂದ…

Read More

ಬಾಗಲಕೋಟೆ ಬೈ ಎಲೆಕ್ಷನ್​​: ಬಿಜೆಪಿ, ಕಾಂಗ್ರೆಸ್​​ ನಡುವೆ ಕರಪತ್ರ ಫೈಟ್​​; ಸಿಪಿಐ ಕಚೇರಿ ಎದುರು ಹೈಡ್ರಾಮಾ

ಬಾಗಲಕೋಟೆ, ಏಪ್ರಿಲ್​​ 04: ಉಪಚುನಾವಣಾ ಕಣದಲ್ಲಿ ರಾಜಕೀಯ ಜಿದ್ದಾಜಿದ್ದಿ ತಾರಕಕ್ಕೇರಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬಾಗಲಕೋಟೆಯಲ್ಲಿ ಕರಪತ್ರ ಯುದ್ಧ ಶುರುವಾಗಿದೆ. ವಿದ್ಯಾರ್ಥಿಗಳಿಗೆ ಕರಪತ್ರ ಹಂಚುತ್ತಿದ್ದಾರೆಂದು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐ ವಿರುದ್ಧ ಬಿಜೆಪಿ ಗಂಭೀರ ಆರೋಪ ಮಾಡಿದೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ್ ಅವರ ವಿರುದ್ಧ ಕರಪತ್ರಗಳನ್ನು ಹಂಚಲಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರು ಕರಪತ್ರ ಸಾಗಿಸುತ್ತಿದ್ದ ಕಾರೊಂದನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಾಗಲಕೋಟೆಯ ಸಿಪಿಐ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡಿದ್ದು, ಅದೇ ಸ್ಥಳಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕೂಡ…

Read More

ಬಾಲಿವುಡ್​ಗೆ ಎಚ್ಚರಿಕೆ ಕೊಟ್ಟ ಯುಪಿ ಸಿಎಂ ಯೋಗಿ ಆದಿತ್ಯನಾಥ್

ಸಿನಿಮಾಗಳು (Cinema) ಸಮಾಜದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತವೆ. ಕೆಲ ದಶಕಗಳ ಹಿಂದೆ ಸಮಾಜಕ್ಕೆ ಸಂದೇಶ ನೀಡುವ ಸಿನಿಮಾಗಳು, ಸಮಾಜದಲ್ಲಿ ಇದ್ದ ಡೊಂಕನ್ನು ಎತ್ತಿ ತೋರಿಸುವ ಸಿನಿಮಾಗಳು ನಿರ್ಮಾಣ ಆಗುತ್ತಿದ್ದವು. ಎಲ್ಲ ಭಾಷೆಗಳಲ್ಲಿಯೂ ಸಹ ಈ ರೀತಿಯ ಸಿನಿಮಾಗಳು ನಿರ್ಮಾಣ ಆಗುತ್ತಿದ್ದವು ಆದರೆ ಇತ್ತೀಚೆಗೆ ಸಿನಿಮಾಗಳಲ್ಲಿ ಒಳಿತಿಗಿಂತಲೂ ಕೆಡುಕನ್ನೇ ವೈಭವೀಕರಿಸಲಾಗುತ್ತಿದೆ. ಕೆಡುಕೇ ಉತ್ತಮ ಎಂಬ ರೀತಿಯಲ್ಲಿ ತೋರಿಸಲಾಗುತ್ತಿದೆ. ಈ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿದ್ದಾರೆ. ಚಿತ್ರರಂಗಕ್ಕೆ ಅವರು ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ….

Read More

ಪೆಟ್ರೋಲ್ ಬಂಕ್​ನಲ್ಲಿ ಡೀಸೆಲ್​ನಿಂದ ಗಾಡಿ ತೊಳೆದ ಯುವಕ!

ಜೈಪುರ, ಏಪ್ರಿಲ್ 4: ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಯುವಕನೊಬ್ಬ ಅಪಾಯಕಾರಿ ಸಾಹಸ ಮಾಡಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಲು ಯುವಕನೊಬ್ಬ ಪೆಟ್ರೋಲ್ ಪಂಪ್‌ನಲ್ಲಿ ತನ್ನ ಸ್ಕಾರ್ಪಿಯೋಗೆ ಡೀಸೆಲ್ ತುಂಬಿಸಿದ ನಂತರ ಡೀಸೆಲ್​ನಿಂದಲೇ ತನ್ನ ಗಾಡಿಯನ್ನು ತೊಳೆದಿರುವ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ಈ ಕೃತ್ಯ ಎಸಗಿದ ಆತನನ್ನು ಬಂಧಿಸಲು ಒತ್ತಾಯಿಸಲಾಗಿತ್ತು. ಆತನನ್ನು ಪೊಲೀಸರು ಬಂಧಿಸಿದ್ದು, ವಿಡಿಯೋ ಮಾಡಿದವನನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ…

Read More

48 ಗಂಟೆಗಳಲ್ಲಿ ಒಪ್ಪಂದವಾಗದಿದ್ದರೆ ನರಕ ನೋಡುತ್ತೀರಿ; ಇರಾನ್‌ಗೆ ಟ್ರಂಪ್ ಹೊಸ ಎಚ್ಚರಿಕೆ

ವಾಷಿಂಗ್ಟನ್, ಏಪ್ರಿಲ್ 4: ನಾನು ನೀಡಿದ್ದ ಸಮಯ ಮೀರುತ್ತಿದೆ. ಇರಾನ್ ಮೇಲೆ ಭೀಕರ ದಾಳಿ ನಡೆಸಲು ಕೇವಲ 48 ಗಂಟೆಗಳು ಮಾತ್ರ ಉಳಿದಿವೆ. ಅಷ್ಟರೊಳಗೆ ಒಪ್ಪಂದ ಮಾಡಿಕೊಳ್ಳದಿದ್ದರೆ ನರಕ ತೋರಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ಹೊಸ ಎಚ್ಚರಿಕೆ ನೀಡಿದ್ದಾರೆ. “ನಾನು ಇರಾನ್‌ಗೆ ಒಪ್ಪಂದ ಮಾಡಿಕೊಳ್ಳಲು ಅಥವಾ ಹಾರ್ಮುಜ್ ಜಲಸಂಧಿಯನ್ನು ತೆರೆಯಲು 10 ದಿನಗಳನ್ನು ನೀಡಿದ್ದನ್ನು ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ಗಡುವು ಮುಗಿಯುತ್ತಿದೆ. ಮುಂದಿನ 48 ಗಂಟೆಗಳ ಮೊದಲು ಒಪ್ಪಂದಕ್ಕೆ ಒಪ್ಪದಿದ್ದರೆ ನರಕವನ್ನೇ…

Read More

ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ; ವಿಡಿಯೋ ವೈರಲ್

ಹುಬ್ಬಳ್ಳಿ, ಏಪ್ರಿಲ್​ 04: ಹುಬ್ಬಳ್ಳಿಯ ಜಿಮ್​ ಟ್ರೈನರ್ ಸಮೀರ್​ ವಿರುದ್ಧ ಅತ್ಯಾಚಾರ ಆರೋಪ​ ಕೇಸ್​ ದಾಖಲಾಗಿದೆ. ಈ ಮಧ್ಯೆ ಸಮೀರ್​ಗೆ ಐವತ್ತಕ್ಕೂ ಹೆಚ್ಚು ಜನರ ಗುಂಪಿನಿಂದ ಮನಸೋ ಇಚ್ಛೆ ಥಳಿಸಿರುವ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಹುಬ್ಬಳ್ಳಿ ನಗರದ ದೇವಾಂಗಪೇಟ್​ನಲ್ಲಿರುವ ಸಮೀರ್ ಅಪಾರ್ಟ್‌ಮೆಂಟ್​ಗೆ ನಿನ್ನೆ ಮುಂಜಾನೆ ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರು ಮತ್ತು ಕೆಲ ಎಸ್​ಎಸ್​ಕೆ ಸಮಾಜದ ಯುವಕರು ತೆರಳಿದ್ದಾರೆ. ಸಮೀರ್ ಬರುತ್ತಿದ್ದಂತೆ ಆತನ ಮೊಬೈಲ್ ಕಸಿದುಕೊಂಡಿದ್ದಾರೆ. ನಂತರ ಹಿಗ್ಗಾಮುಗ್ಗಾ ಥಳಿಸಿ, ಹಳೆ ಹುಬ್ಬಳ್ಳಿ ಠಾಣೆ ಪೊಲೀಸರಿಗೆ…

Read More

ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ

ನಟ ದಳಪತಿ ವಿಜಯ್ (Thalapathy Vijay), ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ತಮಿಳುನಾಡು ರಾಜ್ಯದಾದ್ಯಂತ ಭರ್ಜರಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಅವರ ಟಿವಿಕೆ ಪಕ್ಷಕ್ಕೆ ಅವರೇ ಸ್ಟಾರ್ ಪ್ರಚಾರಕ ಆಗಿದ್ದು ರಾಜ್ಯದೆಲ್ಲೆಡೆ ರೋಡ್ ಶೋ ಮಾಡುತ್ತಿದ್ದಾರೆ. ವಿಶೇಷವಾಗಿ ವಿನ್ಯಾಸ ಮಾಡಿದ ತೆರೆದ ವಾಹನದಲ್ಲಿ ಓಡಾಡುತ್ತಿದ್ದಾರೆ. ವಿಜಯ್ ಹೋದಲ್ಲೆಲ್ಲ ಅವರನ್ನು ನೋಡಲು ಭಾರಿ ಸಂಖ್ಯೆಯ ಜನ ಸೇರುತ್ತಿದ್ದಾರೆ. ಇದೀಗ ಪುದುಚೆರಿಯ ರೋಡ್ ಶೋ ವೇಳೆ ವಿಜಯ್, ತೆರೆದ ವಾಹನದಲ್ಲಿ ಹೋಗುತ್ತಿದ್ದಾಗ ಅದರ ಹತ್ತಿರ ಬಂದ ವೃದ್ಧನೋರ್ವರನ್ನು ಭದ್ರತೆಯವನು ತಳ್ಳಿದ್ದಾನೆ, ಇದರಿಂದ…

Read More

ಐಶ್ವರ್ಯಾ ರೈ ಯಶಸ್ಸಿನ ಬಗ್ಗೆ ಅಸೂಯೆ ಪಟ್ಟಿದ್ದರೇ ಅಭಿಷೇಕ್ ಬಚ್ಚನ್?

ಅಭಿಷೇಕ್ ಬಚ್ಚನ್ (Abhishek Bachchan), ಬಾಲಿವುಡ್​​ನ ಆರಕ್ಕೇರದ ಮೂರಕ್ಕಿಳಿಯದ ನಟ. ಒಳ್ಳೆಯ ನಟರಾಗಿದ್ದರೂ ಸಹ ತಂದೆ ಹಾಗೂ ಪತ್ನಿಯ ಯಶಸ್ಸು ಮತ್ತು ಜನಪ್ರಿಯತೆಯ ಎದುರು ಮಂಕಾಗಿಬಿಟ್ಟರು. ಈಗಲೂ ಸಹ ಅಭಿಷೇಕ್ ಬಚ್ಚನ್ ಅವರು ಎಷ್ಟೇ ಒಳ್ಳೆಯ ನಟನೆ ಮಾಡಿದರೂ ತಂದೆಯೊಟ್ಟಿಗೆ ಹೋಲಿಸಿ ನೋಡಿ, ಅಭಿಷೇಕ್ ಅನ್ನು ಕಡೆಗಣಿಸುತ್ತಾರೆ ಪ್ರೇಕ್ಷಕರು. ಅಮಿತಾಬ್ ಬಚ್ಚನ್ ಮಗನಾಗಿದ್ದೇ ಅಭಿಷೇಕ್​​ಗೆ ಒಂದು ರೀತಿ ಶಾಪವೂ ಆಗಿಬಿಟ್ಟಿದೆ. ಇನ್ನು ಅವರ ಪತ್ನಿ ಐಶ್ವರ್ಯಾ ರೈಗೂ ಸಹ ದೊಡ್ಡ ಯಶಸ್ಸು, ಜನಪ್ರಿಯತೆ ಇದೆ. ಪತ್ನಿಯ ಜನಪ್ರಿಯತೆ…

Read More