Video: ಕೈಗಳಿಲ್ಲದಿದ್ದರೂ ಮಗನಿಗೆ ಬಾಯಿಂದಲೇ ತುತ್ತು ನೀಡಿದ ತಾಯಿ, ವೈರಲ್ ಆಯ್ತು ದೃಶ್ಯ
ಕಣ್ಣಿಗೆ ಕಾಣುವ ದೇವರು ಎಂದರೆ ತಾಯಿ (mother). ಆಕೆಯ ನಿಷ್ಕಲ್ಮಶ ಪ್ರೀತಿ, ಕಾಳಜಿಗೆ ಬೆಲೆ ಕಟ್ಟಲು ಆಗದು. ತನ್ನ ಮಕ್ಕಳಿಗಾಗಿ ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುತ್ತಾಳೆ. ತನ್ನ ನೋವು, ಕಷ್ಟಗಳನ್ನು ಬದಿಗಿರಿಸಿ ಅವರಿಗಾಗಿ ದುಡಿಯುತ್ತಾಳೆ. ಆದರೆ ಇಲ್ಲೊಬ್ಬ ತಾಯಿಯ ದೈಹಿಕ ಕೊರತೆಯೂ ಆಕೆಗೆ ತನ್ನ ಕಂದನ ಮೇಲಿನ ಪ್ರೀತಿ, ಕಾಳಜಿಯನ್ನು ಕಸಿದು ಕೊಂಡಿಲ್ಲ. ಕೈಗಳಿಲ್ಲದಿದ್ದರೂ ಪಕ್ಷಿಯಂತೆ ಬಾಯಿಂದಲೇ ತುತ್ತು ನೀಡಿದ್ದಾಳೆ. ಮಗನ ಮೇಲೆ ತಾಯಿ ಪ್ರೀತಿ ತೋರ್ಪಡಿಸಿದ ರೀತಿ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ. Whatsinthenews ಹೆಸರಿನ ಇನ್ಸ್ಟಾಗ್ರಾಮ್…