ಚಳಿಗಾಲದ ಎಫೆಕ್ಟ್: ಸಾವಿರ ರೂ ಗಡಿಯತ್ತ ಮಟನ್ ದರ; ನಾನ್‌ವೆಜ್ ಪ್ರಿಯರಿಗೆ ಶಾಕ್! – Kannada News | Non Veg Price Shock in Karnataka: Mutton and Chicken Rates Surge Amid Cold Wave
ಬೆಂಗಳೂರು, ಡಿಸೆಂಬರ್ 21: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಚಳಿ (Cold) ಹಾಗೂ ಶೀತಗಾಳಿ ಶುರುವಾಗಿದೆ. ಚಳಿ ಮತ್ತು ಗಾಳಿಗೆ ಥರಗುಟ್ಟುತ್ತಿರುವ ಜನರು ಮಾಂಸಹಾರಕ್ಕೆ (Non-Veg) ಹೆಚ್ಚು ಮೊರೆ ಹೋಗುತ್ತಿದ್ದಾರೆ. ಕುರಿ, ಕೋಳಿ ಉತ್ಪಾದನೆಯಲ್ಲಿ ಕುಸಿತ ಕಂಡಿದೆ. ಅದರಲ್ಲೂ ಕ್ರಿಸ್‌ಮಸ್ ಹಾಗೂ ಹೊಸ ವರ್ಷದಿಂದಾಗಿ ಬೇಡಿಕೆ ಹೆಚ್ಚಿದ್ರಿಂದ ರೇಟ್ ಸಾವಿರ ಗಡಿ ಮುಟ್ಟಿದ್ದು, ನಾನ್‌ವೆಜ್ ಪ್ರಿಯರಿಗಂತೂ ಬಿಗ್ ಶಾಕ್ ಉಂಟಾಗಿದೆ. ರಾಜ್ಯದಲ್ಲಿ ಅತಿಯಾದ ಚಳಿ ಹಿನ್ನೆಲೆ ಮಟನ್, ಚಿಕನ್ ದರ…