ಎರಡನೇ ಬಾರಿ ತಾಯಿ ಆಗುತ್ತಿದ್ದಾರೆ ಹರ್ಷಿಕಾ; ಗುಡ್ ನ್ಯೂಸ್ ಹೇಳಿದ ಭುವನ್
ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರು 2024ರ ಅಕ್ಟೋಬರ್ನಲ್ಲಿ ಹೆಣ್ಣು ಮಗುವನ್ನು ಬರಮಾಡಿಕೊಂಡರು. ಮಗುವಿಗೆ ತ್ರಿದೇವಿ ಎಂದು ಹೆಸರು ಇಟ್ಟಿದ್ದರು. ಈಗ ಇವರು ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಪ್ಯಾರಿಸ್ ಐಫಿಲ್ ಟವರ್ ಎದುರು ನಿಂತು ಹರ್ಷಿಕಾ ಹಾಗೂ ಭುವನ್ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರ ಮೊದಲ ಮಗಳು ಕೂಡ ಇದ್ದಾಳೆ. ಈ ಫೋಟೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಹರ್ಷಿಕಾ-ಭುವನ್ ದಂಪತಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ‘ಈ ಸೆಪ್ಟೆಂಬರ್‌ನಲ್ಲಿ ನಮ್ಮ ತಾರಾಗಣಕ್ಕೆ ಹೊಸ…