Headlines

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಜೋರಾಯ್ತು ವರುಣಾರ್ಭಟ! ರಾಜ್ಯದ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರು, ಮಾರ್ಚ್​ 30: ಭಾನುವಾರ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ  (Weather Forecast)   ಸುರಿದಿದ್ದು, ಬಿಸಿಲ ಬೇಗೆ ಆರಿದಂತಾಗಿದೆ. ಇಂದೂ ಸಹ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ತುಮಕೂರು, ಚಿತ್ರದುರ್ಗ, ಮಂಡ್ಯ, ರಾಮನಗರ, ಮೈಸೂರು, ಕೋಲಾರ ಮತ್ತು ಹಾಸನ ಜಿಲ್ಲೆಗಳಲ್ಲಿ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ನಿನ್ನೆ ಸುರಿದ ಮಳೆಯ ವಿವರ ಬೆಂಗಳೂರು ನಗರ –…

Read More

ಗಂಗಾವತಿಯಲ್ಲಿ ಸೈಕೋ ಕಳ್ಳನ ಹಾವಳಿ: ಮಹಿಳೆಯರ ಒಳ ಉಡುಪುಗಳೇ ಈತನ ಟಾರ್ಗೆಟ್!

ಕೊಪ್ಪಳ, ಮಾರ್ಚ್ 30: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಸಿಬಿಎಸ್ ಬಡಾವಣೆಯಲ್ಲಿ ವಿಚಿತ್ರ ಕಳ್ಳನೊಬ್ಬನ ಹಾವಳಿ ಶುರುವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾತ್ರಿ ವೇಳೆ ಮನೆಯ ಗೋಡೆ ಹಾರಿ ಬರುತ್ತಿರುವ ಈ ಖದೀಮ, ಮಹಿಳೆಯರ ಒಳ ಉಡುಪುಗಳನ್ನು ಮಾತ್ರ ಕಳ್ಳತನ ಮಾಡುತ್ತಿದ್ದಾನೆ. ಈತನ ವಿಕೃತ ಚೇಷ್ಟೆಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳೀಯ ಮಹಿಳೆಯರಲ್ಲಿ ಆತಂಕ ಮೂಡಿಸಿದೆ. ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More

ಟಿ20 ಲೀಗ್​ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಮುಂಬೈ ಇಂಡಿಯನ್ಸ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 2ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮುಂಬೈ ಇಂಡಿಯನ್ಸ್ (Mumbai Indians) ತಂಡ ಭರ್ಜರಿ  ದಾಖಲೆ ನಿರ್ಮಿಸಿದೆ. ಅದು ಕೂಡ ಫ್ರಾಂಚೈಸಿ ಕ್ರಿಕೆಟ್​ನಲ್ಲಿ ಯಾವುದೇ ತಂಡ ನಿರ್ಮಿಸದ ವಿಶ್ವ ದಾಖಲೆ ಎಂಬುದು ವಿಶೇಷ. ಹೌದು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಲೀಗ್ ಕ್ರಿಕೆಟ್​ನಲ್ಲಿ 300 ಪಂದ್ಯಗಳನ್ನಾಡಿದ ಸಾಧನೆ ಮಾಡಿದೆ. ಈ ಮೂಲಕ ಲೀಗ್ ಕ್ರಿಕೆಟ್​ನಲ್ಲಿ 300 ಪಂದ್ಯಗಳನ್ನಾಡಿದ…

Read More

ಅಮೃತಧಾರೆ: ಹೆಣ್ಣಿನ ಕಣ್ಣೀರು ಯುದ್ಧದ ಆರಂಭ; ಜೆಡಿಗೆ ಮಲ್ಲಿಯ ಎಚ್ಚರಿಕೆ

ಜೀ ಕನ್ನಡದ ‘ಅಮೃತಧಾರೆ’ (Amruthadhare) ಧಾರಾವಾಹಿಯಲ್ಲಿ ಹೊಸ ಹೊಸ ತಿರುವುಗಳು ಎದುರಾಗುತ್ತಾ ಇವೆ. ಈಗ ಮಲ್ಲಿ ಮದುವೆ ಸಂಭ್ರಮ. ಈ ಮಲ್ಲಿ ಮದುವೆಯಲ್ಲಿ ಹಲವು ಡ್ರಾಮಾಗಳು ನಡೆದಿವೆ ಎಂದರೂ ತಪ್ಪಾಗಲಾರದು. ಏಕೆಂದರೆ ಮಲ್ಲಿ ಮದುವೆ ಮಾಡಲು ಪ್ಲ್ಯಾನ್ ಮಾಡಿದ್ದು ಜೆಡಿ. ತಾನೇ ಛೂ ಬಿಟ್ಟ ವ್ಯಕ್ತಿ ಜೊತೆ ಮದುವೆ ನಡೆಸೋದು ಜೆಡಿ ಪ್ಲ್ಯಾನ್ ಆಗಿತ್ತು. ಕೊನೆ ಕ್ಷಣದಲ್ಲಿ ಮದುವೆಯಿಂದ ಆ ವ್ಯಕ್ತಿಯನ್ನು ಓಡಿಸೋದು ಪ್ಲ್ಯಾನ್ ಆಗಿತ್ತು. ಆದರೆ, ಪ್ಲ್ಯಾನ್ ಉಲ್ಟಾ ಆಗಿದೆ, ಅಷ್ಟೇ ಅಲ್ಲ, ದೊಡ್ಡ ಎಚ್ಚರಿಕೆ…

Read More

ಮೊಜ್ತಬಾ ಖಮೇನಿ ಬದುಕಿದ್ದಾರೆ, ಇರಾನ್ ಜನತೆಗೆ ಧನ್ಯವಾದ ತಿಳಿಸುವ ಸಂದೇಶ ಬಿಡುಗಡೆ

ಟೆಹ್ರಾನ್, ಮಾರ್ಚ್​ 30: ಇರಾನ್​ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ(Mojtaba Khamenei) ಯಿಂದ ಹೊಸ ಸಂದೇಶ ಬಿಡುಗಡೆಯಾಗಿದೆ. ಲಿಖಿತ ಸಂದೇಶದಲ್ಲಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಇರಾಕ್ ಜನರು ನೀಡಿದ ಬೆಂಬಲಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ. ಅಯತೊಲ್ಲಾ ಖಮೇನಿ ಮರಣದ ನಂತರ ಹೊಸ ಸರ್ವೋಚ್ಚ ನಾಯಕ ಕಾಣಿಸಿಕೊಂಡಿಲ್ಲ, ಇಲ್ಲಿಯವರೆಗೆ ಕೆಲವೇ ಲಿಖಿತ ಹೇಳಿಕೆಗಳನ್ನು ನೀಡಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಅವರ ಇರುವಿಕೆಯ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿತ್ತು. ಅದೇ ಸಮಯದಲ್ಲಿ…

Read More

ವಾಹನ ಸವಾರರಿಗೆ ಬೆಲೆ ಏರಿಕೆ ಬಿಸಿ: ಕರ್ನಾಟಕದ 9 ಹೆದ್ದಾರಿಗಳಲ್ಲಿ ಏಪ್ರಿಲ್ 1 ರಿಂದ ಟೋಲ್ ದರ ಶೇ 5ರಷ್ಟು ಹೆಚ್ಚಳ

ಬೆಂಗಳೂರು, ಮಾರ್ಚ್ 30: ಹೊಸ ಹಣಕಾಸು ವರ್ಷದ ಆರಂಭದ ದಿನವೇ ವಾಹನ ಸವಾರರಿಗೆ ದೊಡ್ಡ ಶಾಕ್ ಎದುರಾಗಿದೆ. ಏಪ್ರಿಲ್ 1 ಬುಧವಾರದಿಂದ ಜಾರಿಗೆ ಬರುವಂತೆ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಪ್ರಯಾಣ ಶುಲ್ಕವನ್ನು (Toll Price) ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತೀರ್ಮಾನಿಸಿದೆ. ಇದರಿಂದಾಗಿ ಕರ್ನಾಟಕದ ಪ್ರಮುಖ 9 ಹೆದ್ದಾರಿಗಳಲ್ಲಿ ಸಂಚಾರ ನಡೆಸುವ ಕಾರು, ಬಸ್ ಮತ್ತು ಲಾರಿಗಳ ಟೋಲ್ ದರದಲ್ಲಿ ಶೇ 4 ರಿಂದ 5 ರಷ್ಟು ಏರಿಕೆಯಾಗಲಿದೆ. ಟೋಲ್ ವಾರ್ಷಿಕ ಪಾಸ್ ದರವೂ ಏರಿಕೆ! ರಾಜ್ಯದ ಆರ್ಥಿಕ ಜೀವನಾಡಿಗಳಂತಿರುವ…

Read More

11ನೇ ದಿನವೂ ಅದ್ಭುತ ಕಲೆಕ್ಷನ್ ಮಾಡಿದ ‘ಲವ್ ಮಾಕ್ಟೇಲ್ 3’ ಸಿನಿಮಾ; ಒಟ್ಟಾರೆ ಗಳಿಕೆ ಎಷ್ಟು?

‘ಧುರಂಧರ್ 2’ ಸಿನಿಮಾ ರಿಲೀಸ್ ಆಗುವಾಗ ಎಷ್ಟು ನಿರೀಕ್ಷೆಗಳು ಇದ್ದವು ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಈ ಚಿತ್ರದ ಎದುರು ಮತ್ತೊಂದು ಸಿನಿಮಾ ತೆರೆಗೆ ಬರಬೇಕು ಎಂದರೆ ಅದು ಸಣ್ಣ ವಿಷಯ ಅಲ್ಲ. ಆದಾಗ್ಯೂ ಇಂತಹ ಚಾಲೆಂಜ್​​​ ಅನ್ನು ‘ಲವ್ ಮಾಕ್ಟೇಲ್ 3’ ಸಿನಿಮಾ (Love Mocktail 3) ಸ್ವೀಕರಿಸಿತು. ಈ ಚಿತ್ರ ಫ್ಯಾಮಿಲಿ ಆಡಿಯನ್ಸ್​​ಗೆ ಇಷ್ಟ ಆಗಿದೆ. ಹೀಗಾಗಿ, ಸಿನಿಮಾದ ಕಲೆಕ್ಷನ್ ಒಳ್ಳೆಯ ರೀತಿಯಲ್ಲೇ ಆಗಿದೆ. ಎರಡನೇ ಭಾನುವಾರವೂ ಸಿನಿಮಾ ಉತ್ತಮ ಗಳಿಕೆ ಮಾಡಿದೆ. ‘ಧುರಂಧರ್ 2’…

Read More

Horoscope Today: ಇಂದು ಈ ರಾಶಿಯವರಿಗೆ ನಂಬಿದವರೇ ಮೋಸ ಮಾಡಬಹುದು; ಜಾಗರೂಕರಾಗಿರಿ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 30​, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ದ್ವಾದಶಿ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ. ಆಶ್ಲೇಷ ನಕ್ಷತ್ರದಲ್ಲಿ ಚಂದ್ರನ…

Read More

Ishaq Dar Video: ವಿದೇಶಿ ಅತಿಥಿಗಳ ಮುಂದೆ ಎಡವಿ ಬಿದ್ದ ಪಾಕಿಸ್ತಾನ ಉಪ ಪ್ರಧಾನಿ ಇಶಾಕ್ ದಾರ್

ಇಸ್ಲಾಮಾಬಾದ್, ಮಾರ್ಚ್​ 30: ಪಾಕಿಸ್ತಾನ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಈಜಿಪ್ಟ್​ ವಿದೇಶಾಂಗ ಸಚಿವರನ್ನು ಸ್ವಾಗತಿಸುವಾಗ ಕಾಲು ಜಾರಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ತಕ್ಷಣ ಅವರನ್ನು ಮೇಲಕ್ಕೆತ್ತಲು ಸಹಾಯ ಮಾಡಿದರು. ಅದೃಷ್ಟವಶಾತ್, ಅವರು ಬಿದ್ದಿದ್ದರಿಂದ ಯಾವುದೇ ಗಂಭೀರ ಗಾಯಗಳಾಗಿಲ್ಲ. ಇರಾನ್-ಇಸ್ರೇಲ್-ಅಮೆರಿಕದ ನಡುವೆ ನಡೆಯುತ್ತಿರುವ ಉದ್ವಿಗ್ನತೆ ಕಡಿಮೆ ಮಾಡಲು ತಾವು ಮಧ್ಯಸ್ಥಿಕೆ ವಹಿಸುತ್ತೇವೆ ಎಂದು ಪಾಕಿಸ್ತಾನ ಮುಂದೆ ಬಂದಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಅಧಿಕೃತ ಹೇಳಿಕೆಯನ್ನು…

Read More

ಎರಡನೇ ಭಾನುವಾರವೂ ‘ಧುರಂಧರ್ 2’ ಅಬ್ಬರ; ಭಾರತದಲ್ಲೇ ಸಾವಿರ ಕೋಟಿ ಕಲೆಕ್ಷನ್

‘ಧುರಂಧರ್ 2’ ಸಿನಿಮಾ (Dhurandhar 2) ಎರಡನೇ ಭಾನುವಾರವೂ ತನ್ನ ಅಬ್ಬರವನ್ನು ಮುಂದುವರಿಸಿದೆ. ಈ ಚಿತ್ರ ಮೊದಲ ವಾರದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಅದನ್ನು ಎರಡನೇ ವಾರವೂ ಮುಂದುವರಿಸಿದೆ. ಎರಡನೇ ಭಾನುವಾರ ಸಿನಿಮಾ 68 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ನಿಜಕ್ಕೂ ದೊಡ್ಡ ಕಲೆಕ್ಷನ್ ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಡಿಸೆಂಬರ್ 5ರಂದು ಬಂದ ‘ಧುರಂಧರ್’ ಸಿನಿಮಾ ಹಿಟ್ ಆದ ಹಿನ್ನೆಲೆಯಲ್ಲಿ ‘ಧುರಂಧರ್ 2’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ…

Read More