ಕರ್ನಾಟಕ ಉಪಚುನಾವಣೆ 2026: ದಾವಣಗೆರೆ ದಕ್ಷಿಣ ಕಾಂಗ್ರೆಸ್ನಲ್ಲಿ ಆರಿಲ್ಲ ಭಿನ್ನಮತ ಬಿಸಿ! ಬಾಗಲಕೋಟೆಯಲ್ಲಿ ರಂಗೇರಿದ ಪ್ರಚಾರದ ಕಣ
ದಾವಣಗೆರೆ, ಬಾಗಲಕೋಟೆ, ಮಾರ್ಚ್ 30: ಕರ್ನಾಟಕದಲ್ಲಿ ಉಪಚುನಾವಣೆಯ (Karnataka By Election) ಅಖಾಡ ದಿನೇ ದಿನೇ ರಂಗೇರುತ್ತಿದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವೆ ಭಾರೀ ಪೈಪೋಟಿ ನಡೆಯುತ್ತಿರುವ ನಡುವೆಯೇ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಮತ್ತು ಮುನಿಸಿನ ಚರ್ಚೆಗಳು ಜೋರಾಗಿವೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಹಿನ್ನೆಲೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸಾಕಷ್ಟು ಒತ್ತಾಯಿಸಿದ್ದರು. ಮುಸ್ಲಿಂ ಮುಖಂಡ ಸಾಧಿಕ್…