‘ಉಚಿತ ಆನ್ಲೈನ್ ಬೈಬಲ್ ಕೋರ್ಸ್’: ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಧರ್ಮ ಪ್ರಚಾರ ಮಾಡುವುದು ಎಷ್ಟು ಸರಿ?
ಬೆಂಗಳೂರು, ಮಾ.27: ನಗರದ ಜಯಮಹಲ್ ಬಡಾವಣೆಯ ರಸ್ತೆಬದಿಗಳಲ್ಲಿರುವ ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್ಫಾರ್ಮರ್ಗಳ ಮೇಲೆ ‘ಉಚಿತ ಆನ್ಲೈನ್ ಬೈಬಲ್ ಕೋರ್ಸ್’ ಎಂಬ ಪೋಸ್ಟರ್ಗಳನ್ನು ಅಂಟಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ವಿಡಿಯೋ ಮಾಡುವ ಮೂಲಕ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜಯಮಹಲ್ ಎಕ್ಸ್ಟೆನ್ಷನ್ನ 1ನೇ ಮುಖ್ಯರಸ್ತೆಯ ಸುತ್ತಮುತ್ತಲಿನ ಸಾರ್ವಜನಿಕ ಆಸ್ತಿಗಳ ಮೇಲೆ ಸಾಲು ಸಾಲಾಗಿ ಧಾರ್ಮಿಕ ಪ್ರಚಾರದ ಪೋಸ್ಟರ್ಗಳನ್ನು ಅಂಟಿಸಲಾಗಿದೆ. ಇವುಗಳಲ್ಲಿ ಕ್ಯೂಆರ್ ಕೋಡ್ (QR Code) ಮತ್ತು ಸಂಪರ್ಕ ಸಂಖ್ಯೆಗಳನ್ನು ನೀಡಲಾಗಿದೆ….