FIFA World Cup 2026: ಗೆಲ್ಲದ ಬ್ರೆಝಿಲ್, ಸೋಲದ ಮೊರಾಕೊ..! – Kannada News | FIFA World Cup 2026: Brazil vs Morocco Highlights
ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ 2026ರ ಗ್ರೂಪ್ ‘ಸಿ’ ನ ರೋಚಕ ಪಂದ್ಯದಲ್ಲಿ ಬ್ರೆಝಿಲ್ ಮತ್ತು ಮೊರಾಕೊ ತಂಡಗಳು 1-1 ಗೋಲುಗಳ ಸಮಬಲ ಸಾಧಿಸಿವೆ. ಆಫ್ರಿಕನ್ ಚಾಂಪಿಯನ್ಸ್ ಮೊರಾಕೊ ಆರಂಭದಲ್ಲೇ ಮುನ್ನಡೆ ಸಾಧಿಸಿ ಬ್ರೆಝಿಲ್‌ಗೆ ಶಾಕ್ ನೀಡಿತಾದರೂ, ವಿನೀಸಿಯಸ್ ಜೂನಿಯರ್ ಅವರ ಅದ್ಭುತ ಗೋಲಿನ ನೆರವಿನಿಂದ ಬ್ರೆಝಿಲ್ ಸೋಲಿನಿಂದ ಪಾರಾಯಿತು ಎನ್ನಬಹುದು. ಪಂದ್ಯದ ಆರಂಭದಲ್ಲೇ ಮೊರಾಕೊ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಮಿಡ್‌ಫೀಲ್ಡ್‌ನಲ್ಲಿ ಬ್ರೆಝಿಲ್ ಮಾಡಿದ ತಪ್ಪನ್ನು ಬಳಸಿಕೊಂಡ ಬ್ರಾಹಿಂ ಡಿಯಾಜ್, ಇಸ್ಮಾಯಿಲ್ ಸೈಬಾರಿ ಅವರಿಗೆ…