Headlines

IPL 2026: ತನ್ನ ಬಗ್ಗೆ ಹರಡಿದ್ದ ವದಂತಿಯ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ

ಮಡದಿ ಮಕ್ಕಳೊಂದಿಗೆ ಲಂಡನ್​ನಲ್ಲಿ ನೆಲೆಸಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಯಾವುದಾದರೂ ಸರಣಿಗಳಿದ್ದಾಗ ಮಾತ್ರ ಭಾರತಕ್ಕೆ ಬರುತ್ತಾರೆ. ಉಳಿದಂತೆ ಕೊಹ್ಲಿ ಲಂಡನ್​ನಲ್ಲಿಯೇ ಇರುತ್ತಾರೆ. ಇದೀಗ 2026 ರ ಐಪಿಎಲ್ ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಇದರ ಸಲುವಾಗಿ ವಿರಾಟ್ ಕೊಹ್ಲಿ ತಮ್ಮ ಮಡದಿ ಅನುಷ್ಕಾ ಶರ್ಮಾ ಅವರೊಂದಿಗೆ ಕೆಲವು ದಿನಗಳ ಹಿಂದೆ ಭಾರತಕ್ಕೆ ಬಂದಿಳಿದಿದ್ದರು. ಆ ಬಳಿಕ ಆರ್​ಸಿಬಿ ತಂಡವನ್ನು ಕೂಡಿಕೊಂಡಿರುವ ಕೊಹ್ಲಿ, ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇದೆಲ್ಲದರ ನಡುವೆ ವಿರಾಟ್ ಕೊಹ್ಲಿಗೆ ಸಂಬಂಧಿಸಿದ ವದಂತಿಯೊಂದು ಸೋಶಿಯಲ್…

Read More

ಪಾಕಿಸ್ತಾನದಲ್ಲೆಲ್ಲ ‘ಧುರಂಧರ್ 2’ನದ್ದೇ ಚರ್ಚೆ, ಬೇಡಿಕೆ ಏನು ಗೊತ್ತೆ?

ರಣ್ವೀರ್ ಸಿಂಗ್ (Ranveer Singh) ನಟಿಸಿರುವ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗಿ ಕೆಲವೇ ದಿನಗಳಾಗಿದ್ದು, ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತದ ಸೈನಿಕನೋರ್ವ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಉಗ್ರರ ಮಟ್ಟ ಹಾಕುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಕೆಲವು ನಿಜ ವ್ಯಕ್ತಿಗಳ ಕತೆಗಳನ್ನು ತೋರಿಸಲಾಗಿದೆ. ಅದರಲ್ಲೂ ಪಾಕಿಸ್ತಾನದ ರಹಾಮನ್ ಡಕೈತ್, ಎಸ್​​ಪಿ ಚೌಧರಿ ಅಸ್ಲಂ, ಇಲಿಯಾಸ್ ಕಶ್ಮೀರಿ ಇನ್ನೂ ಕೆಲವು ಅಕೀತ್ ಅಹ್ಮದ್ ಇನ್ನೂ ಕೆಲವು ನಿಜ ವ್ಯಕ್ತಿಗಳ ಪಾತ್ರಗಳನ್ನು ತೋರಿಸಲಾಗಿದೆ. ಪಾಕಿಸ್ತಾನದಲ್ಲಿ…

Read More

ಫ್ಲೆಕ್ಸ್​, ಸೋಷಿಯಲ್ ಮೀಡಿಯಾನಲ್ಲಿ ಮಂಡ್ಯ ಎಸ್ಪಿ ಶೋಭಾರಾಣಿ ಹವಾ: ಎಲ್ಲಾ ಗೊಂದಗಳಿಗೆ ತೆರೆ

ಮಂಡ್ಯ, (ಮಾರ್ಚ್ 22): ಯುಗಾದಿ ಹಬ್ಬದ ಶುಭಾಶಯ ಕೋರಿ ಮಂಡ್ಯ ನಗರದಾದ್ಯಂತ ಎಸ್ಪಿ ಶೋಭಾರಾಣಿ  (mandya sp dr shobharani) ಅವರ ಫ್ಲೆಕ್ಸ್‌ಗಳನ್ನು‌ (Ugadi Flex) ಹಾಕಲಾಗಿದ್ದು . ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.  ಇದರ ಬೆನ್ನಲ್ಲೇ ಎಚ್ಚೆತ್ತ ಐಪಿಎಸ್​ ಶೋಭಾರಾಣಿ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿದ್ದು,  ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಫ್ಲೆಕ್ಸ್ ಹಾಕುವುದು ಸರಿಯಲ್ಲ ಎಂದಿದ್ದಾರೆ. ಈ ರೀತಿ ಮಾಡಬೇಡಿ ಎಂದು ತಮ್ಮ ಅಭಿಮಾನಿಗಳಲ್ಲಿ ವಿಶೇಷ…

Read More

ಗಾಂಜಾ ಅಮಲು: ಸಿನಿಮೀಯ ರೀತಿಯಲ್ಲಿ ಅಪಹರಿಸಿ ಸ್ನೇಹಿತನನ್ನೇ ಕೊಂದು ಶವ ಸುಟ್ಟ ದುಷ್ಟರು

ಹಾಸನ, ಮಾರ್ಚ್​​ 22: ಗಾಂಜಾ ಅಮಲಿನಲ್ಲಿ ಸ್ನೇಹಿತನನ್ನೇ ಸ್ನೇಹಿತರ ಗ್ಯಾಂಗ್​​ ಕೊಂದು (kill) ಶವ ಸುಟ್ಟು ಹಾಕಿರುವಂತಹ ಘಟನೆ ಹಾಸನ ತಾಲೂಕಿನ ನಿಟ್ಟೂರು ಬಳಿಯ ಹಂಗರಹಳ್ಳಿಯ ತೋಟದ ಮನೆಯಲ್ಲಿ ನಡೆದಿದೆ. ಅರಸೀಕೆರೆ ತಾಲೂಕಿನ ಕಾಡಯ್ಯನಕೊಪ್ಪಲು ನಿವಾಸಿ ವರುಣ್(22) ಕೊಲೆಯಾದ ಯುವಕ. ಹಣಕಾಸು ವಿಚಾರದಲ್ಲಿ ಕರೆದೊಯ್ದು ಹಲ್ಲೆ ಮಾಡಲಾಗಿದೆ. ಶಶಾಂಕ್, ಸತೀಶ್, ಕಿರಣ್, ಅಭಿ, ಜೀವನ್, ಚೇತನ್, ಪೃಥ್ವಿಕ್​​, ಗಜ ಅಲಿಯಾಸ್ ಪ್ರಜ್ವಲ್ ವಿರುದ್ಧ ಕೊಲೆ ಆರೋಪದಡಿ ಮೊಕದ್ದಮೆ ದಾಖಲಾಗಿದೆ. ನಡೆದಿದ್ದೇನು? ಮಾರ್ಚ್ 10ರಿಂದ ವರುಣ್ ಕಾಣೆಯಾಗಿದ್ದಾನೆ. ಹಣಕಾಸು…

Read More

ಬರೋಬ್ಬರಿ 21 ಸಿಕ್ಸ್..! 69 ಎಸೆತಗಳಲ್ಲಿ 195 ರನ್ ಚಚ್ಚಿದ ಆರ್​ಸಿಬಿ ಕೈಬಿಟ್ಟ ಸ್ವಸ್ತಿಕ್ ಚಿಕಾರ

ಕೆಲವೇ ತಿಂಗಳ ಹಿಂದೆ ನಡೆದಿದ್ದ ಐಪಿಎಲ್ ಮಿನಿ ಹರಾಜಿನಲ್ಲಿ ಯಾವ ತಂಡಕ್ಕೂ ಬೇಡವಾಗಿದ್ದ ಯುವ ಬ್ಯಾಟ್ಸ್‌ಮನ್ ಇದೀಗ ದೇಶಿ ಲೀಗ್​ನಲ್ಲಿ ಸಿಡಿಲಬ್ಬರದ ಇನ್ನಿಂಗ್ಸ್ ಆಡುವ ಮೂಲಕ ತನ್ನನ್ನು ತಿರಸ್ಕರಿಸಿದ ಎಲ್ಲಾ ಫ್ರಾಂಚೈಸಿಗಳಿಗೆ ಸರಿಯಾದ ತಿರುಗೇಟು ನೀಡಿದ್ದಾನೆ. ಅದರಲ್ಲೂ ತಂಡಕ್ಕೆ ಸೇರಿಸಿಕೊಂಡು ಒಂದೇ ಒಂದು ಪಂದ್ಯದಲ್ಲಿ ಆಡಲು ಅವಕಾಶ ಕೊಡದ ಆರ್​ಸಿಬಿ ತಂಡಕ್ಕೆ ತೀವ್ರ ಮುಖಭಂಗವಾದ್ದಂತ್ತಾಗಿದೆ. ಅಷ್ಟಕ್ಕೂ ನಾವು ಇಷ್ಟೆಲ್ಲ ಮಾತನಾಡುವ ಆಟಗಾರ ಯಾರೆಂದರೆ, ಉತ್ತರ ಪ್ರದೇಶ ಮೂಲದ ಸ್ವಸ್ತಿಕ್ ಚಿಕಾರ. ಯಾವ ಐಪಿಎಲ್ ತಂಡಕ್ಕೂ ಬೇಡವಾದ ಸ್ವಸ್ತಿಕ್…

Read More

ಅನಿಷ್ಟ ಪದ್ಧತಿ ಜೀವಂತ: ದೇವಸ್ಥಾನದ ಕಟ್ಟೆ ಮೇಲೆ ಕೂತಿದ್ದಕ್ಕೆ ಡಿ ದರ್ಜೆ ನೌಕರ ಸೇರಿ ಮರ್ತೋವನ ಮೇಲೆ ಹಲ್ಲೆ

ಯಾದಗಿರಿ, ಮಾರ್ಚ್​ 22: ಎಐ ತಂತ್ರಜ್ಞಾನದ ಜಮಾನಾದಲ್ಲಿ ಸಮಾಜದಲ್ಲಿ ಇನ್ನೂ ಅನಿಷ್ಟ ಪದ್ದತಿ ಜೀವಂತವಾಗಿದೆ. ಇತ್ತೀಚೆಗೆ ಯಾದಗಿರಿ ಜಿಲ್ಲೆಯಲ್ಲಿ ಸ್ವಸಮಾಜದವರೇ ತಮ್ಮದೇ ಸಮಾಜದ 12 ಕುಟುಂಬಗಳನ್ನ ಬಹಿಷ್ಕಾರ ಹಾಕಿದ್ದರು. ಇದೀಗ ಮತ್ತೊಂದು ಘಟನೆ ನಡೆದಿದೆ. ದೇವಸ್ಥಾನದ ಕಟ್ಟೆಯ ಮೇಲೆ ಕೂತಿದ್ದಕ್ಕೆ ಇಬ್ಬರು ದಲಿತ (Dalits) ಯುವಕರ ಮೇಲೆ ಸವರ್ಣೀಯರ ಗುಂಪಿನಿಂದ ಹಲ್ಲೆ ಮಾಡಿರುವಂತಹ ಘಟನೆ ಗುರುಮಠಕಲ್ ತಾಲೂಕಿನ ಯಂಪಾಡ ಗ್ರಾಮದಲ್ಲಿ ನಡೆದಿದೆ. ನಡೆದಿದ್ದೇನು? ಅನೀಲ್​ ಕುಮಾರ್ ಹಾಗೂ ಸಿದ್ದಲಿಂಗಪ್ಪ ಎನ್ನುವವರು ಸಂಬಂಧಿಕರ ಮಗನ ಜವಳ ಕಾರ್ಯಕ್ರಮಕ್ಕೆ ತೆರಳಿದ್ದರು….

Read More

High Court Recruitment 2026: ಕರ್ನಾಟಕ ಹೈಕೋರ್ಟ್ ನೇಮಕಾತಿ; 70 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ಕರ್ನಾಟಕ ಹೈಕೋರ್ಟ್ ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ 70 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ (Assistant Court Secretary) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏಪ್ರಿಲ್ 15ರೊಳಗೆ ಆನ್‌ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸುವುದು ಅಗತ್ಯ. ಆಕರ್ಷಕ ವೇತನ ಶ್ರೇಣಿ: ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 70 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ…

Read More

ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್

ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ (Salim Khan) ಅವರು ಶನಿವಾರ (ಮಾರ್ಚ್ 21) ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈದ್ (Eid 2026) ಹಬ್ಬದ ಸಂದರ್ಭದಲ್ಲಿ ಮುಂಬೈನ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಎದುರು ಜಮಾಯಿಸಿದ್ದ ಅಭಿಮಾನಿಗಳಿಗೆ ಪುತ್ರ ಸಲ್ಮಾನ್ ಖಾನ್ (Salman Khan) ಅವರೊಂದಿಗೆ ಸೇರಿ ಅವರು ಶುಭಾಶಯ ಕೋರಿದರು. ತಂದೆ-ಮಗನ ಈ ಜೋಡಿಯ ಜೊತೆಗೆ ಸಲ್ಮಾನ್ ತಾಯಿ ಸಲ್ಮಾ ಖಾನ್, ಸಹೋದರರಾದ ಅರ್ಬಾಜ್ ಖಾನ್, ಸೊಹೈಲ್ ಖಾನ್, ಸಹೋದರಿಯರಾದ ಅಲ್ವಿರಾ ಖಾನ್ ಅಗ್ನಿಹೋತ್ರಿ…

Read More

ಪ್ರೀತಿಸಿದವನನ್ನು ನಂಬಿ ಮದುವೆಯಾಗಿ ಬಂದಿದ್ದ ಮಹಿಳೆ ನಾಲ್ಕೇ ತಿಂಗಳಲ್ಲಿ ಪತಿ ಕೈಯಿಂದಲೇ ಹೆಣವಾದ್ಲು

ಗುರುಗ್ರಾಮ, ಮಾರ್ಚ್​ 22: ಪ್ರೀತಿಸಿ ನಾಲ್ಕು ತಿಂಗಳ ಹಿಂದೆ ಮದುವೆ(Marriage)ಯಾಗಿದ್ದ ವ್ಯಕ್ತಿ ವರದಕ್ಷಿಣೆಗಾಗಿ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ರೇಡಿಯಾಲಜಿಸ್ಟ್ ಆಗಿರುವ ಅರುಣ್ ಶರ್ಮಾ ಮತ್ತು ನರ್ಸ್ ಆಗಿರುವ ಕಾಜಲ್ ಗುರುಗ್ರಾಮ್‌ನ ನರ್ಸಿಂಗ್ ಹೋಂನಲ್ಲಿ ಸಹೋದ್ಯೋಗಿಗಳಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು. ದೀರ್ಘಕಾಲ ಒಟ್ಟಿಗೆ ಕೆಲಸ ಮಾಡಿದ ಅವರ ಬಾಂಧವ್ಯ ಸ್ನೇಹವಾಗಿ ಬದಲಾಗಿತ್ತು ಮತ್ತು ಅವರಿಗೆ ತಿಳಿಯದೇ ಪ್ರೀತಿಯಲ್ಲಿ ಬಿದ್ದಿದ್ದರು. ಅವರು ಒಂದು ಹೆಜ್ಜೆ ಮುಂದಿಟ್ಟು ಕಳೆದ ನವೆಂಬರ್‌ನಲ್ಲಿ ವಿವಾಹವಾದರು, ಒಟ್ಟಿಗೆ ಅವರ ಜೀವನದ…

Read More

ಈ ಹಣ್ಣು, ತರಕಾರಿಗಳನ್ನು ಒಟ್ಟಿಗೆ ಸಂಗ್ರಹಿಸಿಡಲೇಬಾರದು, ಯಾಕೆ ಗೊತ್ತಾ?

ಬಹುತೇಕ ಹೆಚ್ಚಿನವರು ಮಾರುಕಟ್ಟೆಯಿಂದ ತಂದಂತಹ ಹಣ್ಣು ತರಕಾರಿಗಳನ್ನು ಸ್ವಚ್ಛಗೊಳಿಸಿ ಹಣ್ಣುಗಳನ್ನೆಲ್ಲಾ ಒಟ್ಟಿಗೆ ತರಕಾರಿಗಳನ್ನೆಲ್ಲಾ ಒಟ್ಟಿಗೆ ಸಂಗ್ರಹಿಸಿಡುತ್ತಾರೆ (storage). ಈ ರೀತಿ ಒಟ್ಟಿಗೆ ಸಂಗ್ರಹಿಸಿಟ್ಟಾಗ ಕೆಲವೊಂದು ಹಣ್ಣು ತರಕಾರಿಗಳು ಬೇಗನೇ ಕೊಳೆತು ಬಿಡುತ್ತವೆ. ಇದನ್ನು ನೀವು ಕೂಡ ಗಮನಿಸಿರಬಹುದಲ್ವಾ. ಕೆಲವು ಹಣ್ಣು, ತರಕಾರಿಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ, ಇದು ಪಕ್ಕದಲ್ಲಿರು ತರಕಾರಿಗಳು ಮತ್ತು ಹಣ್ಣುಗಳ ಹಣ್ಣಾಗುವಿಕೆ ಅಥವಾ ಕೊಳೆಯುವಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರಿಂದಾಗಿ ತರಕಾರಿಗಳು ಬೇಗನೇ ಕೊಳೆತು ಹೋಗುತ್ತವೆ. ಇದಲ್ಲದೆ ಕೆಲವು ಹಣ್ಣು, ತರಕಾರಿಗಳನ್ನು ಒಟ್ಟಿಗೆ ಸಂಗ್ರಹಿಸುವುದರಿಂದ…

Read More