ಐಟಂ ಸಾಂಗ್ ಮಾಡಲು ಒಪ್ಪಿಕೊಂಡ ಮೃಣಾಲ್ ಠಾಕೂರ್; ಅಭಿಮಾನಿಗಳಿಗೆ ಹಬ್ಬ
ಚಿತ್ರರಂಗದಲ್ಲಿ ಕೆಲವು ನಟಿಯರಿಗೆ ಒಂದು ಕಾಲಘಟ್ಟದಲ್ಲಿ ಅದೃಷ್ಟ ಒಲಿದು ಬರುತ್ತದೆ. ಸದ್ಯ ನಟಿ ಮೃಣಾಲ್ ಠಾಕೂರ್ (Mrunal Thakur) ಅಂತಹದ್ದೇ ಒಂದು ಸುವರ್ಣ ಯುಗದಲ್ಲಿದ್ದಾರೆ. ಇದುವರೆಗೆ ಮಧ್ಯಮ ಬಜೆಟ್ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ ಈ ಸುಂದರಿ, ಇದೀಗ ಟಾಲಿವುಡ್‌ನ ಅತಿ ದೊಡ್ಡ ಸ್ಟಾರ್ ನಟರ ಚಿತ್ರಗಳಿಗೆ ಆಯ್ಕೆ ಆಗುತ್ತಿದ್ದಾರೆ. ನಟ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲಿ ಕಾಂಬಿನೇಷನ್ನ ಸಿನಿಮಾಗೆ ಈಗ ಮೃಣಾಲ್ ಠಾಕೂರ್ ಎಂಟ್ರಿ ನೀಡಿದ್ದಾರೆ. ‘ಪೆದ್ದಿ’ (Peddi) ಚಿತ್ರದಲ್ಲೂ ಅವರು ನಟಿಸಲಿದ್ದಾರೆ. ‘ಪುಷ್ಪ…