Headlines

ಈ ಆಹಾರಗಳು ಅಜೀರ್ಣಕ್ಕೆ ಕಾರಣವಾಗಬಹುದು; ಸೇವನೆ ಮಾಡುವಾಗ ಇರಲಿ ಎಚ್ಚರ – Kannada News | Indigestion Triggers: What to Eat and Avoid

ಇತ್ತೀಚಿನ ದಿನಗಳಲ್ಲಿ, ಅನೇಕರಲ್ಲಿ ಕಂಡುಬರುತ್ತಿರುವ ಹೆಚ್ಚಿನ ಆರೋಗ್ಯ ಸಮಸ್ಯೆಗಳಲ್ಲಿ ಅಜೀರ್ಣವು (Indigestion) ಒಂದು. ವೇಗದ ಜೀವನ, ಸಮಯಕ್ಕೆ ಸರಿಯಾಗಿ ತಿನ್ನದಿರುವುದು, ಹೆಚ್ಚು ಹುರಿದ ಮತ್ತು ಕರಿದ ಆಹಾರಗಳ ಸೇವನೆಯಿಂದ ಅಜೀರ್ಣ ಉಂಟಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಾಗಿದೆ. ಇದರಿಂದ ಹೊಟ್ಟೆಯಲ್ಲಿ ಭಾರವಾದ ಭಾವನೆ, ಅನಿಲ, ಸುಡುವ ಸಂವೇದನೆ, ಉಬ್ಬುವುದು ಮತ್ತು ಅಸ್ವಸ್ಥತೆ ಕಂಡುಬರಬಹುದು. ಕೆಲವೊಮ್ಮೆ, ತಿಂದ ನಂತರ, ಹೊಟ್ಟೆ ನೋವು (Stomach Pain), ವಾಕರಿಕೆ ಅಥವಾ ಎದೆಯಲ್ಲಿ ಸುಡುವ ಸಂವೇದನೆ ಕೂಡ…

Read More

9ನೇ ಕ್ಲಾಸ್ ವಿದ್ಯಾರ್ಥಿನಿಯ ಕೆನ್ನೆಗೆ ಹೊಡೆದ ಶಿಕ್ಷಕಿಗೆ 3 ವರ್ಷ ಜೈಲು ಶಿಕ್ಷೆ – Kannada News | Gujarat Teacher gets 3 years Jail sentence For Slapping Class 9 Student Leaving Her Partially Deaf

ನವದೆಹಲಿ, ಫೆಬ್ರವರಿ 10: 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಹೋಂ ವರ್ಕ್ ಪೂರ್ಣಗೊಳಿಸದ ಕಾರಣದಿಂದಾಗಿ ಶಿಕ್ಷಕರೊಬ್ಬರು ಕಪಾಳಮೋಕ್ಷ ಮಾಡಿದ್ದರು. ಹೀಗಾಗಿ ಗುಜರಾತ್ ನ್ಯಾಯಾಲಯವು ಆ ಶಾಲಾ ಶಿಕ್ಷಕಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಹಲ್ಲೆಯಿಂದಾಗಿ ಬಾಲಕಿಯ ಕಿವಿಯೋಲೆ ಕಿತ್ತುಬಂದು ಒಂದು ಕಿವಿಯೇ ಕೇಳದಂತಾಗಿದೆ. ಜನವರಿ 30ರಂದು ನೀಡಿದ ತೀರ್ಪಿನಲ್ಲಿ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹಿಮಾಂಶು ಚೌಧರಿ ಈ ಅಪರಾಧದ ಮೂಲಕ ಶಿಕ್ಷಕಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಇದರಿಂದ ಅಪ್ರಾಪ್ತ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿದೆ ಎಂದು…

Read More

‘ಧುರಂಧರ್’ ನಟ ರಣವೀರ್ ಸಿಂಗ್​ಗೆ ಬೆದರಿಕೆ; ಭದ್ರತೆ ಹೆಚ್ಚಿಸಿದ ಪೊಲೀಸರು – Kannada News | Dhurandhar actor Ranveer Singh receives threat from Lawrence Bishnoi gang

ಕೆಲವೇ ದಿನಗಳ ಹಿಂದೆ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಅದರ ಬೆನ್ನಲ್ಲೇ ನಟ ರಣವೀರ್ ಸಿಂಗ್ (Ranveer Singh) ಅವರಿಗೆ ಬೆದರಿಕೆ ಹಾಕಲಾಗಿದೆ. ವಾಟ್ಸಪ್ ಮೂಲಕ ಬೆದರಿಕೆ ಸಂದೇಶ ಕಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ರಣವೀರ್ ಸಿಂಗ್, ದೀಪಿಕಾ ಪಡುಕೋಣೆ (Deepika Padukone) ದಂಪತಿಯ ನಿವಾಸಕ್ಕೆ ಭದ್ರತೆ ಒದಗಿಸಿದ್ದಾರೆ. ಬೆದರಿಕೆ ಬಂದಿರುವುದರಿಂದ ರಣವೀರ್ ಸಿಂಗ್ ಅವರ ಅಭಿಮಾನಿಗಳಿಗೆ ಆತಂಕ ಆಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಮೊದಲು ಬಾಲಿವುಡ್​​ನ…

Read More

ಪ್ರತಿಯೊಂದು ವೈರಲ್​​​ ವಿಡಿಯೋದಲ್ಲೂ ಈ ಹುಡುಗ ಇರಲೇಬೆಕು: ಬಾಲಕನ ಜೀವನ ಬದಲಾಯಿಸಿತು ಆ ಒಂದೇ ಒಂದು ನಗು – Kannada News | The Viral Laugh That Changed a Life: Arun’s Inspiring Story from Poverty to Fame

ಸೋಶಿಯಲ್​​ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಈ ಹುಡುಗನ ವಿಡಿಯೋ ಸಖತ್​​​ ವೈರಲ್​ ಆಗುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಚಿಕ್ಕ ವಿಷಯವು ದೊಡ್ಡದಾಗಿ ವೈರಲ್​ ಆಗುತ್ತದೆ. ಎಲ್ಲ ಮೀಮ್ಸ್​​​​​​ಗಳಲ್ಲಿ ಈ ಹುಡುಗನ ವಿಡಿಯೋವನ್ನು ನೋಡಿರಬಹುದು. ಟೀ ಹಿಡಿದುಕೊಂಡು ನಗುವ ನಗು ಇದೀಗ ದೇಶದಲ್ಲಿ ದೊಡ್ಡ ಸದ್ದು ಮಾಡಿದೆ. ಅಷ್ಟಕ್ಕೂ ಈ ಹುಡುಗ ಯಾರು ಗೊತ್ತಾ? ಸೋಷಿಯಲ್ ಮೀಡಿಯಾದಲ್ಲಿ ಇಂದು ಪ್ರತಿಯೊಂದು ಮೀಮ್ (Meme) ಅಥವಾ ಟ್ರೋಲ್ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುವ ಆ ಪ್ರಸಿದ್ಧ ನಗುಮೊಗದ ಚಹಾ ಹುಡುಗನ ಕಥೆ ನಿಜಕ್ಕೂ…

Read More

ಲವ್ವರ್‌ಗೆ ತಾಯಿ, ದೊಡ್ಡಮ್ಮನ ಖಾಸಗಿ ಫೋಟೋ ರವಾನೆ: ತನಿಖೆ ವೇಳೆ ಸ್ಫೋಟಕ ಅಂಶ ಬಯಲಿಗೆ – Kannada News | Bengalru DCP Yatish Talks about Woman Sent Mother’s Private Photos To Boyfriend case

ಬೆಂಗಳೂರು, (ಫೆಬ್ರವರಿ 10): ನಗರದ ಬ್ಯಾಟರಾಯನಪುರದಲ್ಲಿ (Byatarayanapura) ಯುವತಿಯೋರ್ವಳು ತನ್ನ ಹೆತ್ತ ತಾಯಿ ಹಾಗೂ ದೊಡ್ಡಮ್ಮಳ ಖಾಸಗಿ ಫೋಟೋಗಳನ್ನು ಪ್ರಿಯಕರನಿಗೆ ಕಳುಹಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪೋಷಕರು ಹಾಗೂ ಪೊಲೀಸರೇ ಶಾಕ್ ಆಗಿದ್ದಾರೆ.  ತಮ್ಮ ಹಾಗೂ ಅಕ್ಕನ ಖಾಸಗಿ ಫೋಟೋಗಳನ್ನು ಮಗಳು ಆಕೆಯ ಪ್ರಿಯಕರನಿಗೆ ಕಳಿಸಿದ್ದಾಳೆ ಎಂದು ತಾಯಿ ನೀಡಿದ್ದು, ಈ ಸಂಬಂಧ ಯುವತಿ ಹಾಗೂ ಆಕೆಯ ಪ್ರಿಯಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೆಲ ಅಂಶಗಳು ಬಯಲಿಗೆ ಬಂದಿವೆ. ಕುಟುಂಬಸ್ಥರು ಮದುವೆಗೆ ಒಪ್ಪದಿದ್ದರೆ…

Read More

ಫೆ. 17ರಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭಾರತಕ್ಕೆ ಭೇಟಿ – Kannada News | French President Emmanuel Macron to visit India on February 17

ನವದೆಹಲಿ, ಫೆಬ್ರವರಿ 10: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಭಾರತಕ್ಕೆ ಫೆಬ್ರವರಿ 17ರಿಂದ 3 ದಿನಗಳ ಭೇಟಿಯನ್ನು ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಭೇಟಿಯ ಸಮಯದಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾಗವಹಿಸುವುದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಇಬ್ಬರೂ ನಾಯಕರು ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಕುರಿತು ಚರ್ಚೆ ನಡೆಸಲಿದ್ದಾರೆ. ಇಬ್ಬರೂ ನಾಯಕರು ಇಂಡೋ-ಪೆಸಿಫಿಕ್‌ನಲ್ಲಿ ಸಹಕಾರ ಸೇರಿದಂತೆ ಪರಸ್ಪರ ಆಸಕ್ತಿಯ ಪ್ರಾದೇಶಿಕ…

Read More

ಬ್ಯಾಂಕ್ ಸರ್ವರ್ ಸಮಸ್ಯೆಯಿಂದ ಮೆಟ್ರೋ ಟಿಕೆಟ್​​ ತೆಗೆದುಕೊಳ್ಳಲು ಪ್ರಯಾಣಿಕರ ಪರದಾಟ – Kannada News | Bengaluru Metro Ticketing Woes: Bank Server Glitch Causes UPI/Card Payment Failure

ಬೆಂಗಳೂರು, ಫೆ.10: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಒಂದು ಕಹಿ ಅನುಭವ ಆಗಿದೆ. ಬ್ಯಾಂಕ್ ಸರ್ವರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟಿಕೆಟ್ ಪಡೆಯಲು ಸಾಧ್ಯವಾಗದೆ ಸಾವಿರಾರು ಜನರು ಪರದಾಡುವಂತಾಗಿದೆ. ಇತ್ತೀಚೆಗಷ್ಟೇ ಮೆಟ್ರೋ ದರ ಏರಿಕೆ ಮಾಡಿ ಮೆಟ್ರೋ ಪ್ರಯಾಣಿಕರ ಅಕ್ರೋಶಕ್ಕೆ ಒಳಗಾಗಿತ್ತು, ಇದೀಗ ಇದರ ಬೆನ್ನಲ್ಲೇ ಬ್ಯಾಂಕ್ ಸರ್ವರ್‌ನಲ್ಲಿ ಡೌನ್​ ಆಗಿರುವುದು ಜನರಿಗೆ ಕಿರಿಕಿರಿ ಉಂಟು ಮಾಡಿದೆ. ಇಂದು (ಫೆ. 10) ಸಂಜೆ 6 ಗಂಟೆಯಿಂದ ಬ್ಯಾಂಕ್ ಸರ್ವರ್ ಸಮಸ್ಯೆ ಆರಂಭವಾಗಿದೆ. ಯುಪಿಐ (UPI) ಪೇಮೆಂಟ್ ಅಥವಾ…

Read More

200 ಸಿನಿಮಾಗಳಿಗೆ ಸಬ್ಸಿಡಿ ಕೊಡಿ: ಸರ್ಕಾರಕ್ಕೆ ನಿರ್ಮಾಪಕ ಕೆ. ಮಂಜು ಮನವಿ – Kannada News | Producer K Manju urges Government to give more subsidy for Kannada movies

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ (KFCC) ಸುದ್ದಿಗೋಷ್ಠಿ ನಡೆಸಲಾಗಿದೆ. ಈ ವೇಳೆ ನಿರ್ಮಾಪಕ ಕೆ. ಮಂಜು ಅವರು ಮಾತನಾಡಿದರು. ‘ಇಂದು ಹಲವು ನಿರ್ಮಾಪಕರು ವಾಣಿಜ್ಯ ಮಂಡಳಿಗೆ ಮನವಿ ಪತ್ರ ನೀಡಿದ್ದಾರೆ. ಚಿತ್ರರಂಗ ಇರುವವರೆಗೂ ಸಬ್ಸಿಡಿ ನೀಡಬೇಕು ಎಂಬುದು ನಮ್ಮೆಲ್ಲರ ಉದ್ದೇಶ. ಯಾವ ಕಾರಣಕ್ಕೂ ಸಬ್ಸಿಡಿ ನಿಲ್ಲಬಾರದು. ಇನ್ನೂ ಜಾಸ್ತಿ ಕೊಡಿ ಅಂತ ಕೇಳುತ್ತೇವೆ. 10 ಲಕ್ಷ ರೂಪಾಯಿ ಇರುವುದನ್ನು 15 ಲಕ್ಷ ರೂಪಾಯಿ ಮಾಡಿ ಎನ್ನುತ್ತೇವೆ. 125 ಸಿನಿಮಾಗಳಿಗೆ ಕೊಡುತ್ತಾರೆ. 200 ಸಿನಿಮಾಗಳಿಗೆ ಕೊಡಿ ಅಂತ ಕೇಳುತ್ತಿದ್ದೇವೆ….

Read More

ಇಂಡಿಯನ್ vs ವೆಸ್ಟರ್ನ್ ಟಾಯ್ಲೆಟ್: ಮಲಬದ್ಧತೆ, ಮೂಲವ್ಯಾಧಿ ಸಮಸ್ಯೆಗಳನ್ನು ತಡೆಗಟ್ಟಲು ಯಾವುದು ಬೆಸ್ಟ್ ಗೊತ್ತಾ? – Kannada News | Squat or Sit? The Best Toilet Position for Your Gut

ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಲ್ಲಿ ಆಗುತ್ತಿರುವ ಬದಲಾವಣೆಗಳು ಎಲ್ಲಾ ರೀತಿಯ ಅಭ್ಯಾಸಗಳನ್ನು ಬದಲಿಸುತ್ತಿದೆ. ಅಷ್ಟೇಅಲ್ಲ ಮನೆ, ನಾವು ಬಳಸುವ ವಸ್ತುಗಳು ಜೊತೆಗೆ ಶೌಚಾಲಯಗಳು ಕೂಡ ಬದಲಾಗುತ್ತಿದೆ. ಹಿಂದೆ ಪ್ರತಿ ಮನೆಯಲ್ಲೂ ಇಂಡಿಯನ್ ಟಾಯ್ಲೆಟ್ (Indian toilet) ಗಳು ಹೆಚ್ಚಾಗಿ ಕಂಡುಬರುತ್ತಿತ್ತು. ಆದರೆ ಈಗ ಅದು ಬದಲಾಗಿದೆ. ಪಾಶ್ಚಿಮಾತ್ಯ ಕಮೋಡ್‌ ಅಥವಾ ವೆಸ್ಟರ್ನ್ ಟಾಯ್ಲೆಟ್ (Western Toilet) ಗಳನ್ನು ಎಲ್ಲರೂ ಹೆಚ್ಚಾಗಿ ಬಳಕೆ ಮಾಡಲು ಆರಂಭಿಸಿದ್ದಾರೆ. ಅದಕ್ಕಾಗಿಯೇ ಪ್ರತಿ ಮನೆಯಲ್ಲಿಯೂ ಇವು ಕಾಣಲು ಸಿಗುತ್ತಿದೆ. ಈ ಬದಲಾವಣೆ ಅನುಕೂಲಕರವಾಗಿದ್ದರೂ ಕೂಡ…

Read More

“ನಾನು ಹೆಣ್ಣು, ನನಗೆ ಮೇಲಧಿಕಾರಿಗಳು ಗೊತ್ತು”: ಗಂಡನಿಗೆ ಪ್ರತಿದಿನ ಹೆಂಡತಿಯಿಂದ ಕಿರುಕುಳ – Kannada News | I Know Officials: Hassan Husband Claims Wifes Harassment and Threats

ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ದಾಂಪತ್ಯ ಕಲಹದ ಪ್ರಕರಣವೊಂದು ಈಗ ಸಾರ್ವಜನಿಕ ಗಮನ ಸೆಳೆದಿದೆ. ಪತಿ ಶಶಿಕುಮಾರ್ ಅವರು ತಮ್ಮ ಪತ್ನಿ ಅರ್ಪಿತಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಆಸ್ತಿಗಾಗಿ ಪತ್ನಿ ತಮ್ಮ ಕುಟುಂಬಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ. ಶಶಿಕುಮಾರ್ ಮತ್ತು ಅರ್ಪಿತಾ ಪ್ರೀತಿಸಿ ಮದುವೆಯಾಗಿದ್ದು, ಮದುವೆಯ ನಂತರ ಮೊದಲ ಎರಡು ವರ್ಷಗಳು ಸಂತೋಷದಿಂದ ಕಳೆದಿದ್ದವು ಎಂದು ಶಶಿಕುಮಾರ್ ಹೇಳಿದ್ದಾರೆ. ಆದರೆ, ಪತ್ನಿ ಅರ್ಪಿತಾ ತನ್ನ ತಂದೆ-ತಾಯಿಯ ಮನೆಗೆ ಭೇಟಿ ನೀಡಿ ಬಂದ ನಂತರ…

Read More