Headlines

ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು

ಹಾಸನ (ಮಾರ್ಚ್ 19): ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಹಂಚಿಕೆ (Prajwal Revanna Pend rive Case) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ಹಾಸನದ ಸಿವಿಲ್‌ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ಬರೋಬ್ಬರಿ 13 ಸಾವಿರಕ್ಕೂ ಅಧಿಕ ಪುಟಗಳಿದ್ದು, ಬಿಜೆಪಿ ಮುಖಂಡ ದೇವರಾಜೇಗೌಡ ಸೇರಿ 39 ಮಂದಿಯ ವಿರುದ್ಧ ಆರೋಪ ದೃಢಪಡಿಸಿ ಸಾಕ್ಷಿ ಒದಗಿಸಲಾಗಿದೆ. ಇನ್ನು ಎಸ್​​ಐಟಿ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲಾಗಿದೆ. ವಿಡಿಯೋ ವೈರಲ್ ಪ್ರಕರಣದಲ್ಲಿ ಒಟ್ಟು 52 ಮಂದಿ ಹೆಸರು…

Read More

ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಪ್ರಧಾನಿ ಮೋದಿ ಮಾತುಕತೆ

ನವದೆಹಲಿ, ಮಾರ್ಚ್ 19: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಉಲ್ಬಣವನ್ನು ಶಮನಗೊಳಿಸುವಲ್ಲಿ ಸಂವಾದ ಮತ್ತು ರಾಜತಾಂತ್ರಿಕತೆಯ ತುರ್ತು ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. ಈ ಪ್ರದೇಶದ ಶಾಂತಿ ಮತ್ತು ಸ್ಥಿರತೆಗಾಗಿ ಮ್ಯಾಕ್ರನ್ ಜೊತೆ ಸಮನ್ವಯವನ್ನು ಸಾಧಿಸಲು ಸಿದ್ಧ ಎಂದು ಮೋದಿ ಹೇಳಿದ್ದಾರೆ. “ನನ್ನ ಆತ್ಮೀಯ ಸ್ನೇಹಿತರಾದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಪಶ್ಚಿಮ ಏಷ್ಯಾದ ಪರಿಸ್ಥಿತಿ ಮತ್ತು…

Read More

ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಭೀಕರವಾಗಿ ಕೊಲೆ: ಭಾವಿ ಪತಿ ಅನುಮಾಕ್ಕೆ ಅಪ್ರಾಪ್ತೆ ಬಲಿ

ಬೆಂಗಳೂರು, ಮಾರ್ಚ್​​ 19: ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನು ಬೆಂಗಳೂರಿನ ಡಿ.ಜೆ.ಹಳ್ಳಿ ಸಕ್ಕರೆ ಮಂಡಿಯ ಪಾಳುಮನೆಯಲ್ಲಿ ವ್ಯಕ್ತಿಯೋರ್ವ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣದ ತನಿಖೆ ವೇಳೆ ಶಾಕಿಂಗ್​​ ವಿಚಾರಗಳು ಬೆಳಕಿಗೆ ಬಂದಿವೆ. ಯುವತಿ ಮೇಲೆ ಆರೋಪಿ ಸೈಯದ್ ಶಬೀಲ್​​ಗಿದ್ದ ಅನುಮಾನವೇ ಕೊಲೆಗೆ ಕಾರಣ ಎಂಬುದು ಗೊತ್ತಾಗಿದೆ. ಆಕೆಯನ್ನು ಭೇಟಿಯ ನೆಪದಲ್ಲಿ ಕರೆದಿದ್ದ ಈತ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಮತ್ತು ಕುತ್ತಿಗೆ ಕೊಯ್ದು ಹತ್ಯೆ ಮಾಡಿರೋದು ತನಿಖೆ ವೇಳೆ ಬಯಲಾಗಿದೆ. ಘಟನೆ ಬಳಿಕ ನಾಪತ್ತೆಯಾಗಿರುವ ಆರೋಪಿಗಾಗಿ…

Read More

TTD Tirumala: ತಿರುಪತಿ ಭಕ್ತರಿಗೆ ಗುಡ್ ನ್ಯೂಸ್; ಇನ್ಮುಂದೆ 24 ಗಂಟೆ ಲಗೇಜ್ ಕೌಂಟರ್ ಸೇವೆ ಲಭ್ಯ!

ತಿರುಮಲ ಶ್ರೀವಾರಿಯ ದರ್ಶನಕ್ಕೆ ಬರುವ ಭಕ್ತರಿಗಾಗಿ ತಿರುಮಲ ತಿರುಪತಿ ದೇವಸ್ಥಾನಂ (TTD) ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಭಕ್ತರ ಲಗೇಜ್‌ಗಳ ಸುರಕ್ಷತೆ ಮತ್ತು ಸುಲಭ ನಿರ್ವಹಣೆಗಾಗಿ ಒಟ್ಟು 80 ಲಗೇಜ್ ಕೌಂಟರ್‌ಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ. ಈ ಕೇಂದ್ರಗಳಲ್ಲಿ ಒಟ್ಟು 394 ಸಿಬ್ಬಂದಿ ಮೂರು ಪಾಳಿಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಇಂದಿನಿಂದ ಈ ಎಲ್ಲಾ ಲಗೇಜ್ ಕೇಂದ್ರಗಳು ದಿನದ 24 ಗಂಟೆಯೂ ಭಕ್ತರ ಸೇವೆಗೆ ಮುಕ್ತವಾಗಿರಲಿವೆ. ವಿಶೇಷವಾಗಿ ಹಬ್ಬಗಳು ಮತ್ತು ರಜಾ ದಿನಗಳಲ್ಲಿ ಉಂಟಾಗುವ ಭಕ್ತರ ದಟ್ಟಣೆಯನ್ನು ನಿಯಂತ್ರಿಸಲು ಈ…

Read More

IPL: ಬುಮ್ರಾ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರಿವರು: ಪಟ್ಟಿಯಲ್ಲಿ ಬೌಲರ್ ಹೆಸರು

ಪ್ರಸ್ತುತ ವಿಶ್ವ ಕ್ರಿಕೆಟ್​ನ ಅತ್ಯುತ್ತಮ ಬೌಲರ್​ಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಬುಮ್ರಾ ಬೌಲಿಂಗ್‌ನಲ್ಲಿ ರನ್ ಕಲೆಹಾಕುವುದೆ ಕಷ್ಟಕರವಾಗಿರುವಾಗ ಅವರ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಹಾಗಿದ್ದರೂ ಐಪಿಎಲ್‌ನಲ್ಲಿ ಬುಮ್ರಾ ವಿರುದ್ಧ ಸುಲಭವಾಗಿ ಸಿಕ್ಸರ್ ಬಾರಿಸಿದ ಬ್ಯಾಟರ್​ಗಳಿದ್ದಾರೆ. ಅವರ ವಿವರ ಇಲ್ಲಿದೆ. ಐಪಿಎಲ್ ಇತಿಹಾಸದಲ್ಲಿ, ಕೇವಲ ನಾಲ್ಕು ಬ್ಯಾಟ್ಸ್‌ಮನ್‌ಗಳು ಮಾತ್ರ ಬುಮ್ರಾ ವಿರುದ್ಧ ಐದು ಅಥವಾ ಹೆಚ್ಚಿನ ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಅವರಲ್ಲಿ ದಕ್ಷಿಣ ಆಫ್ರಿಕಾದ ಲೆಜೆಂಡರಿ ಬ್ಯಾಟ್ಸ್‌ಮನ್ ಎಬಿ…

Read More

ಇಶಾ ಫೌಂಡೇಷನ್, ಸದ್ಗುರು ಕುರಿತ ವಿವಾದಾತ್ಮಕ ವಿಷಯ ಡಿಲೀಟ್ ಮಾಡಿ; ನಕ್ಕೀರನ್ ಮ್ಯಾಗಜಿನ್​​ಗೆ ಕೋರ್ಟ್ ಆದೇಶ

ನವದೆಹಲಿ, ಮಾರ್ಚ್ 19: ಇಶಾ ಫೌಂಡೇಶನ್ ಮತ್ತು ಸದ್ಗುರುಗಳ ಕುರಿತಾದ ವಿವಾದಾತ್ಮಕ ವಿಷಯಗಳನ್ನು ಡಿಲೀಟ್ ಮಾಡಲು ತಮಿಳು ಮಾಧ್ಯಮವಾದ ನಕ್ಕೀರನ್ ಮ್ಯಾಗಜಿನ್​ಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಇಶಾ ಫೌಂಡೇಶನ್ (Isha Foundation) ಮತ್ತು ಸದ್ಗುರುಗಳ ವಿರುದ್ಧ ನಕ್ಕೀರನ್ ಪ್ರಕಟಿಸಿದ ಮಾನಹಾನಿಕರ ವಿಡಿಯೋಗಳು ಮತ್ತು ಲೇಖನಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಇಂದು ಮಧ್ಯಂತರ ಆದೇಶ ಹೊರಡಿಸಿದೆ. ಈ ಆದೇಶವನ್ನು ಸ್ವಾಗತಿಸಿರುವ ಇಶಾ ಫೌಂಡೇಶನ್ ಸುಳ್ಳು ಮತ್ತು ದುರುದ್ದೇಶಪೂರಿತ ಮಾಹಿತಿಯನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದನ್ನು ಮುಂದುವರಿಸುತ್ತದೆ ಎಂದು…

Read More

ಷೇರು ಮಾರುಕಟ್ಟೆ ಭಾರೀ ಕುಸಿತ; ಸಿಕ್ಕಾಪಟ್ಟೆ ನಷ್ಟ ಕಂಡ ಸೆನ್ಸೆಕ್ಸ್, ನಿಫ್ಟಿ; ಈ ಪರಿ ಕುಸಿತಕ್ಕೆ ಕಾರಣಗಳೇನು?

ನವದೆಹಲಿ, ಮಾರ್ಚ್ 19: ಭಾರತದ ಷೇರು ಮಾರುಕಟ್ಟೆ (Stock Market) ಯುಗಾದಿ ಹಬ್ಬದ ದಿನದಂದು ಅಕ್ಷರಶಃ ಗಡಗಡ ಅಲುಗಾಡಿದೆ. ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ಹೆಚ್ಚೂಕಡಿಮೆ ಶೇ. 3ರಷ್ಟು ಕುಸಿತವನ್ನು ಕಂಡಿವೆ. ಮೂರು ದಿನ ಪಾಸಿಟಿವ್ ಆಗಿದ್ದ ಈ ಇಂಡೆಕ್ಸ್ ಗುರುವಾರ ನೆಲಕಚ್ಚಿವೆ. ಸೆನ್ಸೆಕ್ಸ್ 2,496 ಅಂಕಗಳನ್ನು ಕಳೆದುಕೊಂಡು 74,207.24 ಮಟ್ಟಕ್ಕೆ ಮುಟ್ಟಿದೆ. ನಿಫ್ಟಿ50 ಇಂಡೆಕ್ಸ್ 775.65 ಅಂಕಗಳ ಕಳೆದುಕೊಂಡು 23,002.15 ಮಟ್ಟ ಮುಟ್ಟಿದೆ. ಈ ಇಂಡೆಕ್ಸ್​ನಲ್ಲಿರುವ ಹತ್ತಾರು ಕಂಪನಿಗಳಷ್ಟೇ ಹಿನ್ನಡೆ…

Read More

ಬೈ ಎಲೆಕ್ಷನ್ ಕದನ: ಬಾಗಲಕೋಟೆ ಕೈ ಅಭ್ಯರ್ಥಿ ಬಹುತೇಕ ಫೈನಲ್, ದಾವಣಗೆರೆಯಿಂದಲೇ ವಿಳಂಬ

ಬಾಗಲಕೋಟೆ, (ಮಾರ್ಚ್ 19): ರಾಜ್ಯದ ಜನರ ಚಿತ್ತ ದಾವಣಗೆರೆ ದಕ್ಷಿಣ  (Davanagere South By Election) ಹಾಗೂ ಬಾಗಲಕೋಟೆ (Bagalkot) ವಿಧಾನಸಭಾ ಕ್ಷೇತ್ರ ಉಪಚುನಾವಣೆಯತ್ತ ನೆಟ್ಟಿದೆ. ದಿವಂಗತ ಎಚ್.ವೈ ಮೇಟಿ ನಿಧನದ ನಂತರ ತೆರವಾಗಿದ್ದ ಬಾಗಲಕೋಟೆ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದ್ದು, ಟಿಕೆಟ್ ಗಾಗಿ ಎರಡು ಪಕ್ಷದಲ್ಲಿ ಫೈಟ್ ಮಧ್ಯೆ ಬಿಜೆಪಿ ಕೊನೆಗೂ ನಿರೀಕ್ಷೆ ಎಂಬಂತೆ ವೀರಣ್ಣ ಚರಂತಿಮಠ ಅವರಿಗೆ ಟಿಕೆಟ್ ಘೋಷಣೆ ಮಾಡಿ ಯುಗಾದಿಯ ಗಿಪ್ಟ್ ನೀಡಿದ್ದು, ಈಗಾಗಲೇ ಬಿಜೆಪಿ ಕಾರ್ಯಕರ್ತರು ಗ್ರೌಂಡ್ ಲೆವಲ್ ಪ್ರಚಾರದಲ್ಲಿ…

Read More

‘ಹಾಸ್ಟೆಲ್ ಹುಡುಗರ’ ಮೆಚ್ಚಿನ ತಮಿಳಿನ ಸ್ಟಾರ್ ನಟ, ಶೀಘ್ರವೇ ರೀಮೇಕ್

ಕನ್ನಡದಲ್ಲಿ ಸಾಕಷ್ಟು ಹೊಸ ತಂಡಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಬಂದಿವೆ. ಕೆಲವರಿಗೆ ಯಶಸ್ಸು ಸಿಕ್ಕಿದೆ, ಕೆಲವರಿಗೆ ಇಲ್ಲ. 2023 ರಲ್ಲಿ ಹೊಸ ತಂಡವೊಂದು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (hostel hudugaru bekagiddare) ಎಂಬ ಸಿನಿಮಾ ಮಾಡಿತ್ತು. ನಟ ರಕ್ಷಿತ್ ಶೆಟ್ಟಿ ಇದಕ್ಕೆ ಬೆಂಬಲ ನೀಡಿದ್ದರು. ಸಿನಿಮಾ ದೊಡ್ಡ ಹಿಟ್ ಆಗಿತ್ತು. ನಟಿ ರಮ್ಯಾ, ಸಿನಿಮಾ ಮೇಲೆ ದೂರು ಸಹ ದಾಖಲಿಸಿದ್ದರು. ಆ ಕಾರಣಕ್ಕೂ ಸಿನಿಮಾಕ್ಕೆ ಭರ್ಜರಿ ಪ್ರಚಾರ ಸಿಕ್ಕಿತ್ತು. ಇದೀಗ ಸಿನಿಮಾ ತಮಿಳಿಗೆ ಹೊರಟಿದೆ. ‘ಹಾಸ್ಟೆಲ್…

Read More

ಕಲಬುರಗಿಯಲ್ಲಿ ಪಡಿತರ ಕಾಳಸಂತೆಗೆ: ಬಡವರ ಹೊಟ್ಟೆ ಸೇರಬೇಕಾದ ಅಕ್ಕಿ ಹೊರ ರಾಜ್ಯಗಳಿಗೆ ಸಪ್ಲೈ

ಕಲಬುರಗಿ, ಮಾರ್ಚ್​ 19: ರಾಜ್ಯದಲ್ಲಿ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಬಡವರು ಹಸಿದ ಹೊಟ್ಟೆಯಲ್ಲಿ ಮಲಗಬಾರದು ಅಂತಾ ಸರ್ಕಾರ ಅನ್ನಭಾಗ್ಯ ಯೋಜನೆ (Anna Bhagya Rice) ಮೂಲಕ ಬಡವರಿಗೆ ಉಚಿತವಾಗಿ ಅಕ್ಕಿ ನೀಡುತ್ತಿದೆ. ಆದರೆ ಬಡವರ ಹೊಟ್ಟೆ ಸೇರಬೇಕಾದ ಅಕ್ಕಿಯನ್ನ ರೇಷನ್ ಅಂಗಡಿ ಮಾಲೀಕರು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ರಾತ್ರೋರಾತ್ರಿ ಅಕ್ಕಿ ಸಪ್ಲೈ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಾಲೀಕರ ಕಳ್ಳಾಟ ಬಯಲಾಗಿದೆ. ಕಲಬುರಗಿ ನಗರದ ಜೆ.ಆರ್ ನಗರದಲ್ಲಿರುವ ರೇಷನ್ ಅಂಗಡಿಯಿಂದ ಮಾರ್ಚ್…

Read More