ಕರ್ನಾಟಕದಲ್ಲಿ ಹೇಗಿದೆ ‘ಧುರಂಧರ್ 2’ ಹವಾ? ಗಳಿಕೆ ಎಷ್ಟು?
ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಇಂದು (ಮಾರ್ಚ್ 19) ಬಿಡುಗಡೆ ಆಗಿದೆ. ‘ಧುರಂಧರ್ 2’ ಸಿನಿಮಾ ಭಾರತದಾದ್ಯಂತ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ. ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಅದರಲ್ಲೂ ನಿನ್ನೆಯೇ (ಮಾರ್ಚ್ 18) ಪೇಯ್ಡ್ ಪ್ರೀಮಿಯರ್ ಶೋಗಳು ಸಹ ಪ್ರದರ್ಶನಗೊಂಡಿದ್ದು, ದುಬಾರಿ ಬೆಲೆಗೆ ಟಿಕೆಟ್ಗಳನ್ನು ಸಹ ಮಾರಾಟ ಮಾಡಲಾಗಿತ್ತು. ಹಾಗಿದ್ದರೂ ಸಹ ಬಹುತೇಕ ಶೋಗಳು ಹೌಸ್ಫುಲ್ ಆಗಿದ್ದು, ಬೆಂಗಳೂರಿನಲ್ಲಿ ಭರ್ಜರಿ ಕಲೆಕ್ಷನ್ ಅನ್ನೇ ಸಿನಿಮಾ…