ಅಮೆರಿಕದಲ್ಲಿ ಈ ಬಾರಿಯೂ ಬಡ್ಡಿದರ ಬದಲಾಗಲ್ಲ; ಹಣದುಬ್ಬರ ನಿರೀಕ್ಷೆಮೀರಿ ಹೆಚ್ಚಬಹುದು: ಸೆಂಟ್ರಲ್ ಬ್ಯಾಂಕ್ ಅಂದಾಜು
ವಾಷಿಂಗ್ಟನ್, ಮಾರ್ಚ್ 19: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ತನ್ನ ಬಡ್ಡಿದರದಲ್ಲಿ (US Fed Reserve Rates) ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಈಗಿರುವ ಶೇ. 3.50-3.75 ಶ್ರೇಣಿಯಲ್ಲಿ ಬಡ್ಡಿದರ ಮುಂದುವರಿಸುವ ನಿರ್ಧಾರ ಮಾಡಿದೆ. ಫೆಡರಲ್ ರಿಸರ್ವ್ನ ಛೇರ್ಮನ್ ಜಿರೋಮ್ ಪೋವೆಲ್ ನೇತೃತ್ವದಲ್ಲಿ ನಡೆದ ಎಫ್ಒಎಂಸಿ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಆದರೆ, ಗಮನಾರ್ಹ ಅಂಶವೆಂದರೆ, ಬಡ್ಡಿದರ ಹೆಚ್ಚಳ ಸಾಧ್ಯತೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಮುಂಬರುವ ದಿನಗಳಲ್ಲಿ ಬಡ್ಡಿದರ ಕಡಿಮೆ ಆಗುವ ಸುಳಿವನ್ನು ಈ ಸಭೆಯಲ್ಲಿ…