ಐತಿಹಾಸಿಕ ಮೇಲುಕೋಟೆ ವೈರಮುಡಿ ಉತ್ಸವಕ್ಕೆ ಸ್ಪಾನ್ಸರ್: ಖಾಲಿ ಆಯ್ತಾ ಸರ್ಕಾರದ ಖಜಾನೆ?
ಮಂಡ್ಯ, ಮಾರ್ಚ್ 18: ವೈರಮುಡಿ ಉತ್ಸವ ಕರ್ನಾಟಕದ ಅತ್ಯಂತ ಭವ್ಯ ಆಚರಣೆಗಳಲ್ಲೊಂದು. ವಜ್ರಖಚಿತ ಕಿರೀಟಧಾರಿಯಾದ ಶ್ರೀ ಚೆಲುವನಾರಾಯಣಸ್ವಾಮಿಯನ್ನು (Cheluvanarayana Swamy) ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಕ್ತಿ ಮತ್ತು ಸಂಸ್ಕೃತಿಯ ಸಮ್ಮಿಲನವಾಗುವ ಈ ಉತ್ಸವದಲ್ಲಿ ಈಗ ಹೊಸ ವಿವಾದವೊಂದು ಸೃಷ್ಟಿಯಾಗಿದೆ. ಸರ್ಕಾರದಿಂದ ನಡೆಯುತ್ತಿದ್ದ ಉತ್ಸವ ಇದೀಗ ಖಾಸಗಿ ಪ್ರಾಯೋಜಕತ್ವಕ್ಕೆ ಮೊರೆ ಹೋಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆದರೆ ಇದಕ್ಕೆ ಅಧಿಕಾರಿಗಳು ಕೊಡುತ್ತಿರುವ ಉತ್ತರವೇ ಬೇರೆ. ಪ್ರಯೋಜಕತ್ವಕ್ಕೆ ಮೊರೆ ಹೋದ ಸರ್ಕಾರ? ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ…