ಗ್ರಾಮಾಂತರ ಪ್ರದೇಶದಲ್ಲಿ ಮನೆಗಳ ಮೇಲೆ ಹಾಕಿದ ಜಾಹೀರಾತಿಗೂ ತೆರಿಗೆ!: ವಿಪಕ್ಷಗಳಿಂದ ತೀವ್ರ ವಿರೋಧ
ಬೆಂಗಳೂರು, ಮಾರ್ಚ್ 18: ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ವಿಧಾನ ಪರಿಷತ್ನಲ್ಲಿ ಕರ್ನಾಟಕ ಮುನ್ಸಿಪಾಲಿಟಿ ಮತ್ತು ಕೆಲವು ಇತರೆ ಕಾನೂನು(ತಿದ್ದುಪಡಿ) ವಿಧೇಯಕ-2026 ಅಂಗೀಕಾರಗೊಂಡಿದೆ. ಗ್ರಾಮಾಂತರ ಪ್ರದೇಶದಲ್ಲಿ ಮನೆಗೆ ಹಾಕಿದ ಜಾಹೀರಾತಿಗೂ ತೆರಿಗೆ ವಿಧಿಸಲು ಮುಂದಾಗಿದ್ದು, ಜೀವನಕ್ಕೆ ಏನೋ ಮಾಡಿಕೊಂಡಿರುವವರಿಗೂ ಟ್ಯಾಕ್ಸ್ ಹಾಕುವಷ್ಟು ಸರ್ಕಾರ ಬರಗೆಟ್ಟಿದ್ಯಾ ಎಂದು ವಿರೋಧ ಪಕ್ಷಗಳ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. ರಾಜಕಾರಣಿಗಳು ಫ್ಲೆಕ್ಸ್ ಹಾಕ್ತಾರೆ, ಅವರಿಗೆ ಯಾವುದೇ ಟ್ಯಾಕ್ಸ್ ಇಲ್ಲ. ಹೀಗಿರುವಾಗ ಖಾಸಗಿಯಾಗಿ ಮನೆ ಮೇಲೆ ಜಾಹೀರಾತು ಹಾಕಿಕೊಂಡ್ರೆ ನಿಮಗೇನು?…