ಭಾರತದಲ್ಲಿ ಹಾರ್ಡ್ ರಾಕ್ ಕೆಫೆ ಯುಗ ಅಂತ್ಯ: ಬೆಂಗಳೂರು ಸೇರಿದಂತೆ 10 ನಗರಗಳ ಔಟ್‌ಲೆಟ್ ಬಂದ್, ಕಾರಣವೇನು?
ಬೆಂಗಳೂರು, ಮಾ.17: ದಶಕಗಳ ಕಾಲ ರಾಕ್ ಸಂಗೀತ ಮತ್ತು ಅಮೇರಿಕನ್ ಶೈಲಿಯ ಆಹಾರಕ್ಕೆ ಹೆಸರಾಗಿದ್ದ ‘ಹಾರ್ಡ್ ರಾಕ್ ಕೆಫೆ’ (HRC) ಭಾರತಕ್ಕೆ ಗುಡ್‌ಬೈ ಹೇಳುತ್ತಿದೆ. ಭಾರತದಲ್ಲಿ ಈ ಕೆಫೆಗಳನ್ನು ನಡೆಸುತ್ತಿದ್ದ JSM ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಜೊತೆಗಿನ ಒಪ್ಪಂದವನ್ನು ಹಾರ್ಡ್ ರಾಕ್ ಇಂಟರ್ನ್ಯಾಷನಲ್ ಅಧಿಕೃತವಾಗಿ ಕೊನೆಗೊಳಿಸಿದೆ. ಅದರಲ್ಲೂ ಬೆಂಗಳೂರಿನಲ್ಲಿ ತನ್ನದೇ ಆಗಿರುವ ರುಚಿಯನ್ನು ಹಾಗೂ ವೈಶಿಷ್ಟವನ್ನು ಹೊಂದಿದ್ದ ಇದು, ಇದೀಗ ಬೆಂಗಳೂರಿಗರಿಗೆ ದೊಡ್ಡ ನಿರಾಶಿಯನ್ನು ಮೂಡಿಸಿದೆ. ಇನ್ನು ಈ ನಿರ್ಧಾರದಿಂದಾಗಿ ಭಾರತದ ಪ್ರಮುಖ ನಗರಗಳಲ್ಲಿದ್ದ 10 ಕೆಫೆಗಳು…