ಬೆಂಗಳೂರಿಗರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ: ಶೇ. 50ರಷ್ಟು ಸಿಗಲಿದೆ ಮನೆ ಬಾಡಿಗೆ ಭತ್ಯೆ – Kannada News | Big HRA Boost for Bengaluru: 50% Tax Exemption as Metro City Status Confirmed
ಬೆಂಗಳೂರು, ಫೆ.10: ಬೆಂಗಳೂರಿಗರಿಗೆ ಕೇಂದ್ರ ಸರ್ಕಾರ ಹೊಸ ಸಿಹಿ ಸುದ್ದಿ ನೀಡಿದೆ. ಈ ಬಗ್ಗೆ ನವದೆಹಲಿಯಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ. ಇಷ್ಟು ದಿನ ಆದಾಯ ತೆರಿಗೆ ನಿಯಮಗಳ ಪ್ರಕಾರ, ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳನ್ನು ಮಾತ್ರ ‘ಮೆಟ್ರೋ ನಗರಗಳು’ ಎಂದು ಪರಿಗಣಿಸಿ ಶೇ. 50 ರಷ್ಟು HRA (ಮನೆ ಬಾಡಿಗೆ ಭತ್ಯೆ) ವಿನಾಯಿತಿ ನೀಡಲಾಗುತ್ತಿತ್ತು. ಬೆಂಗಳೂರು ವಿಶ್ವಮಟ್ಟದ ನಗರವಾಗಿದ್ದರೂ ತಾಂತ್ರಿಕವಾಗಿ ಇದನ್ನು ‘ಬಾಕಿ ನಗರಗಳ’ ಪಟ್ಟಿಯಲ್ಲಿ ಇರಿಸಲಾಗಿತ್ತು, ಹೀಗಾಗಿ ಇಲ್ಲಿನವರಿಗೆ…